No Guarantee: ಜನರಿಗೆ ಹೇಳಿದಂತೆ “ಗ್ಯಾರಂಟಿ” ಕೊಡಲಾಗದೆ ಕಾಂಗ್ರೆಸ್​ ನಾಯಕರಿಂದ ಕುಂಟು ನೆಪ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ

|

Updated on: Jun 20, 2023 | 6:12 PM

Pralhad Joshi: ರ್ವ ಸಿದ್ದತೆಗಳಿಲ್ಲದೆ ಗ್ಯಾರಂಟಿಗಳಿಗೆ ದಿನಾಂಕ ಘೋಷಿಸಿ ಕಾಂಗ್ರೆಸ್ ಪೀಕಲಾಟಕ್ಕೆ ಗುರಿಯಾಗಿದೆ. ತಾನೇ ಕೊಟ್ಟುಕೊಂಡ ಡೆಡ್ ಲೈನ್​ಗಳ ಒತ್ತಡದ ಸುಳಿಯಲ್ಲಿ ಕಾಂಗ್ರೆಸ್ ಸಿಕ್ಕಿ ಹಾಕಿಕೊಂಡಿದೆ -ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

No Guarantee: ಜನರಿಗೆ ಹೇಳಿದಂತೆ ಗ್ಯಾರಂಟಿ ಕೊಡಲಾಗದೆ ಕಾಂಗ್ರೆಸ್​ ನಾಯಕರಿಂದ ಕುಂಟು ನೆಪ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ
Follow us on

ಧಾರವಾಡ: “ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್​ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ (Guarantee) ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ…” ಎಂಬ ಸತೀಶ್​ ಜಾರಕಿಹೊಳಿ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ (Pralhad Joshi) ತಿರುಗೇಟು ನೀಡಿದ್ಧಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜೋಶಿಯವರು, ಹ್ಯಾಕ್​ ಆಗಿದ್ದರೆ ಸೈಬರ್​ ಕ್ರೈಂನವರಿಗೆ ದೂರು ನೀಡಿ ತನಿಖೆ ಮಾಡಿಸಲಿ. ಸತೀಶ್​ ಜಾರಕಿಹೊಳಿ ಅವರ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಕೊಡಲಾಗದೆ ಕಾಂಗ್ರೆಸ್​ನವರು (Karnataka Congress) ಈ ರೀತಿ ಕುಂಟು ನೆಪಗಳನ್ನು (Lame excuse) ಹೇಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳಾಯ್ತು ಇನ್ನೂ ಒಂದು ಕೆಜಿ ಅಕ್ಕಿ ಸಹ ಕೊಟ್ಟಿಲ್ಲ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಅಡಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊಡುತ್ತಿರುವುದು ಎಂದು ಹೇಳಿದ್ಧಾರೆ.

Also read: ಹುಬ್ಬಳ್ಳಿ- ಧಾರವಾಡ ನೂತನ ಮೇಯರ್, ಉಪಮೇಯರ್ ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನೆ

ರಾಜ್ಯ ಕಾಂಗ್ರೆಸ್​ ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲು ಹರಸಾಹಸ ಪಡುತ್ತಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲು ರಾಜ್ಯದಲ್ಲಿ ಅಕ್ಕಿ ಕಡಿಮೆಯಾಗಿದ್ದು, ಅನ್ಯ ರಾಜ್ಯಗಳ ಮೊರೆ ಹೋಗಿದೆ. ಈ ನಡುವೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಆದರೆ ಸರ್ವರ್ ಬ್ಯುಸಿ ಹಿನ್ನೆಲೆ ಜನರು ಅರ್ಜಿ ಹಾಕಲು ಪರದಾಡುವಂತಾಗಿದೆ.

ಪೂರ್ವ ಸಿದ್ದತೆಗಳಿಲ್ಲದೆ ಗ್ಯಾರಂಟಿಗಳಿಗೆ ದಿನಾಂಕ ಘೋಷಿಸಿ ಕಾಂಗ್ರೆಸ್ ಪೀಕಲಾಟಕ್ಕೆ ಗುರಿಯಾಗಿದೆ. ತಾನೇ ಕೊಟ್ಟುಕೊಂಡ ಡೆಡ್ ಲೈನ್​ಗಳ ಒತ್ತಡದ ಸುಳಿಯಲ್ಲಿ ಕಾಂಗ್ರೆಸ್ ಸಿಕ್ಕಿ ಹಾಕಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು ಸಚಿವ ಸತೀಶ್​ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ಧಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ