AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಾಲದಲ್ಲಿ ಭಾರತವನ್ನ ಜಗತ್ತು ಅಪಹಾಸ್ಯ ಮಾಡುತ್ತಿತ್ತು. ಇಂದು ನಮ್ಮ ಯೋಗವನ್ನು ಜಗತ್ತು ಸ್ವೀಕಾರ ಮಾಡಿದೆ; ಪ್ರಲ್ಹಾದ್ ಜೋಶಿ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ದೇಶಾದ್ಯಂತ ಯೋಗ ಮಾಡುವ ಮೂಲಕ ಭಾರತದ ಶಕ್ತಿಯನ್ನ ಜಗತ್ತಿಗೆ ತೋರಿಸಲಾಗುತ್ತಿದೆ. ಅದರಂತೆ ನಗರದ ಜಿಮ್ ಖಾನಾ ಮೈದಾನದಲ್ಲಿ ಕ್ಷಮತಾ ಸೇವಾ ಸಂಸ್ಥೆ, ಧನ್ಯಸ್ಮಿ ಯೋಗ ಕೇಂದ್ರ ಸಹಯೋಗದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಭಾಗವಹಿಸಿದ್ದರು.

ಕಿರಣ್ ಹನುಮಂತ್​ ಮಾದಾರ್
|

Updated on:Jun 21, 2023 | 10:13 AM

Share

ಹುಬ್ಬಳ್ಳಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ದೇಶಾದ್ಯಂತ ಯೋಗ ಮಾಡುವ ಮೂಲಕ ಭಾರತದ ಶಕ್ತಿಯನ್ನ ಜಗತ್ತಿಗೆ ತೋರಿಸಲಾಗುತ್ತಿದೆ. ಅದರಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶ್ವ ಯೋಗ ದಿನ(International Yoga Day)ವನ್ನ ಆಚರಿಸಲಾಗುತ್ತಿದೆ. ಅದರಂತೆ ನಗರದ ಜಿಮ್ ಖಾನಾ ಮೈದಾನದಲ್ಲಿ ಕ್ಷಮತಾ ಸೇವಾ ಸಂಸ್ಥೆ, ಧನ್ಯಸ್ಮಿ ಯೋಗ ಕೇಂದ್ರ ಸಹಯೋಗದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನಲೆ ನೂರಾರು ಯೋಗ ಪಟುಗಳು ಭಾಗಿಯಾಗಿದ್ದು, ಯೋಗಗುರು ವಿನಾಯಕ ತಲಗೇರಿ ಅವರ ನೇತೃತ್ವದಲ್ಲಿ ಯೋಗ ದಿನಾಚರಣೆಯನ್ನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ(Mahesh Tenginakayi) ಯೋಗ ದಿನಾಚರಣೆಯಲ್ಲಿ ಯೋಗ ಮಾಡುವುದರ ಮೂಲಕ ಯೋಗದ ಮಹತ್ವವನ್ನ ಸಾರಿದರು.

ಇನ್ನು ಯೋಗ ದಿನಾಚರಣೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ‘ಒಂದು ಕಾಲದಲ್ಲಿ ಭಾರತ ಅಂದ್ರೆ, ಜಗತ್ತು ಅಪಹಾಸ್ಯ ಮಾಡುತ್ತಿತ್ತು. ಇಂದು ನಮ್ಮ ಯೋಗವನ್ನು ಜಗತ್ತು ಸ್ವೀಕಾರ ಮಾಡಿದೆ. ನಾನು ಬ್ರೇಜಿಲ್​ನಿಂದ ನಿನ್ನೆ ಬಂದಿದ್ದೇನೆ. ನಾನು 16 ಸಾವಿರ ಕಿಲೋಮೀಟರ್ ದೂರದ ಬ್ರೇಜಿಲ್​ಗೆ ಹೋಗಿದ್ದೆ. ಅಲ್ಲಿನ ಯೋಗ ಕೆಂದ್ರಕ್ಕೆ ಭೇಟಿ ಕೊಟ್ಟಿದ್ದೇನೆ. ನಾನು ಅಲ್ಲಿಗೆ ಹೋದಾಗ ಅಲ್ಲಿನ ಜನ ಯೋಗ ಮಾಡುತ್ತಿದ್ದರು. ಈ ಮೂಲಕ ಇಡೀ ಜಗತ್ತು ಯೋಗವನ್ನು ಸ್ವೀಕಾರ ಮಾಡಿದೆ ಎಂದರು.

ಇದನ್ನೂಓದಿ:International Yoga Day 2023: ಯೋಗ ಜಾಗತಿಕ ಆಂದೋಲನವಾಗಿದೆ, ವಿಶ್ವ ಯೋಗ ದಿನಾಚರಣೆಗೆ ಅಮೆರಿಕದಿಂದ ಪ್ರಧಾನಿ ಮೋದಿ ವಿಡಿಯೋ ಸಂದೇಶ

ಯೋಗ ಶ್ವಾಸಕೋಶದ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುತ್ತೆ. ಇದನ್ನು ಅನೇಕ ಸಂಶೋಧಕರು ಕೂಡ ಹೇಳಿದ್ದಾರೆ. ಇವತ್ತು ಅನೇಕ ದೇಶಗಳಲ್ಲಿ ಯೋಗ ಸ್ವೀಕಾರ ಆಗಿದೆ. ಕಳೆದ ಬಾರಿ ಜಗತ್ತು ಗೋಲ್ಡನ್ ರಿಂಗ್ ಎಂದು ಕರೆದಿತ್ತು. ಇಂದು ಭಾರತದ ಕುಟುಂಬ ಪದ್ದತಿಯನ್ನು ಅಧ್ಯಯನ ಮಾಡಲು ಇಡೀ ಜಗತ್ತು ಭಾರತಕ್ಕೆ ಬರುತ್ತಿದೆ. ಭಾರತದ ದೇಶದ ಪರಂಪರೆ ಪದ್ದತಿ ಪುರಾತನವಾದದ್ದು, ಇದನ್ನು ಜಗತ್ತಿಗೆ ಪರಿಚಯಿಸುವುದಕ್ಕೆ ಯಾರೂ ಧೈರ್ಯ ಮಾಡಿರಲಿಲ್ಲ. ಮೋದಿ ಯೋಗದ ಬಗ್ಗೆ ತಿಳುವಳಿಕೆ ಕೊಟ್ಟಿದ್ದಾರೆ ಎಂದರು.

ಇಂದು ಭಾರತ 177 ದೇಶದ ಯೋಗಕ್ಕೆ ಬೆಂಬಲ ಕೊಟ್ಟಿದೆ. ನಮ್ಮನ್ನು ಅಸಡ್ಡೆ ಮಾಡಿದ ದೇಶಗಳು ಇದೀಗ ನಮ್ಮ ಸ್ನೇಹಕ್ಕೆ ತುದಿಗಾಲಲ್ಲೆ ನಿಂತಿವೆ. ನಾವು ಯಾವತ್ತೂ ನಮ್ಮತನ‌ ಬಿಡಬಾರದು, ಯೋಗ ಮಾಡುವವರು ಹಿಂಸೆ ಮೇಲೆ ನಂಬಿಕೆ ಇಟ್ಟಿರುವುದಿಲ್ಲ. ಅವರ ವಿಚಾರ ಶುದ್ದವಾಗಿರತ್ತೆ, ವಿಶ್ವಾಸ ಇಲ್ಲವೆಂದರೆ ಯೋಗ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ‌ ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:40 am, Wed, 21 June 23

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ