AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Yoga Day 2023: ಯೋಗ ಜಾಗತಿಕ ಆಂದೋಲನವಾಗಿದೆ, ವಿಶ್ವ ಯೋಗ ದಿನಾಚರಣೆಗೆ ಅಮೆರಿಕದಿಂದ ಪ್ರಧಾನಿ ಮೋದಿ ವಿಡಿಯೋ ಸಂದೇಶ

ವಿಶ್ವ ಯೋಗ ದಿನ(International Yoga Day) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.

International Yoga Day 2023: ಯೋಗ ಜಾಗತಿಕ ಆಂದೋಲನವಾಗಿದೆ, ವಿಶ್ವ ಯೋಗ ದಿನಾಚರಣೆಗೆ ಅಮೆರಿಕದಿಂದ ಪ್ರಧಾನಿ ಮೋದಿ ವಿಡಿಯೋ ಸಂದೇಶ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jun 21, 2023 | 7:51 AM

Share

ವಿಶ್ವ ಯೋಗ ದಿನ(International Yoga Day) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ಮೋದಿಯವರು ಈಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ (UNHC) ಆಯೋಜಿಸಲಾದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮೊದಲು, ಯೋಗ ದಿನದ ಸಂದರ್ಭದಲ್ಲಿ ನ್ಯೂಯಾರ್ಕ್‌ನಿಂದ ವಿಶೇಷ ಸಂದೇಶವನ್ನು ಕಳುಹಿಸಿರುವ ಪ್ರಧಾನಿ ಮೋದಿ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು ಜಾಗತಿಕ ಆಂದೋಲನವಾಗಿದೆ ಎಂದು ಹೇಳಿದರು.

ಇದರೊಂದಿಗೆ ಯೋಗ ದಿನದ ಅಂಗವಾಗಿ ಇಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಯೋಗ ಇಂದು ಗಡಿಗಳನ್ನ ದಾಟಿ ವಿಶ್ವದೆಲ್ಲೆಡೆ ಹರಡಿದೆ ಯೋಗ ಜಗತ್ತಿಗೇ ಸ್ಫೂರ್ತಿ ತಂದಿದೆ ಎಂದಿದ್ದಾರೆ.

ಮತ್ತಷ್ಟು ಓದಿ: International Yoga Day 2023: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ: ಈ ಬಾರಿಯ ಥೀಮ್​ ವಸುಧೈವ ಕುಟುಂಬಕಂ

ಯೋಗ ಮಾಡುವುದರಿಂದ ಆರೋಗ್ಯವೃದ್ಧಿಯಾಗುತ್ತದೆ, ಭಾರತದ ಆಹ್ವಾನದ ಮೇರೆಗೆ 184 ದೇಶಗಳು ಯೋಗದಲ್ಲಿ ಭಾಗಿಯಾಗುತ್ತವೆ.

ಕೋಟಿ ಕೋಟಿ ಜನ ಯೋಗದ ಅನುಭವ ಪಡೆಯುತ್ತಿದ್ದಾರೆ, ಯೋಗದ ವಿಸ್ತಾರವಾದ ಅರ್ಥ ವಸುದೇವ ಕುಟುಂಬಕಂ, ಆರೋಗ್ಯ ಇದ್ದರೆ ಅರೋಗ್ಯಯುತ ಕುಟುಂಬ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ