ಹುಬ್ಬಳ್ಳಿಯಲ್ಲಿ ಆ್ಯಕ್ಟೀವ್ ಆಯ್ತಾ ಮೇವಾತ್ ಗ್ಯಾಂಗ್; ಆತಂಕದಲ್ಲಿ ವಾಣಿಜ್ಯ ನಗರಿ ಜನ

ಅದು ವಾಣಿಜ್ಯ ನಗರಿ, ನಿತ್ಯ ಲಕ್ಷಾಂತರ ಜನ ಆ ನಗರಕ್ಕೆ ಬಂದು ಹೋಗುತ್ತಾರೆ. ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ನಗರಕ್ಕೆ ಬರುವವರ ಸಂಖ್ಯೆಯೇ ಹೆಚ್ಚು. ಚೋಟಾ ಮುಂಬೈ ಎಂದು ಹೆಸರಾದ ಹುಬ್ಬಳ್ಳಿ ನಗರದಲ್ಲಿ ಇದು ಸಿಗಲ್ಲ ಎನ್ನುವ ಮಾತೆ ಇಲ್ಲ. ಮದುವೆ ಬಟ್ಟೆ, ಬಂಗಾರ, ಅಡುಗೆ ಸಾಮಾನು, ಹೀಗೆ ಖರೀದಿಗೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜನ ಇಲ್ಲಿಗೆ ಬರ್ತಾರೆ. ಹೀಗಾಗಿ ನಿತ್ಯ ಜನ ಜಂಗುಳಿಯಿಂದ ಕುಡಿರುತ್ತೆ. ಇದೇ ನಗರದಲ್ಲಿ ಇದೀಗ ಮತ್ತೊಂದು ಗ್ಯಾಂಗ್ ಆ್ಯಕ್ಟೀವ್ ಆಗಿದೆ. ಜ‌ನ‌ನಿಭೀಡ ಪ್ರದೇಶವನ್ನು ಆ ಗ್ಯಾಂಗ್ ಟಾರ್ಗೆಟ್ ‌ಮಾಡಿದೆ. ಆ ಗ್ಯಾಂಗ್ ಈಗ ಪೊಲೀಸರಿಗೂ ಕೂಡ ಸವಾಲ್ ಆಗಿದೆ.

ಹುಬ್ಬಳ್ಳಿಯಲ್ಲಿ ಆ್ಯಕ್ಟೀವ್ ಆಯ್ತಾ ಮೇವಾತ್ ಗ್ಯಾಂಗ್; ಆತಂಕದಲ್ಲಿ ವಾಣಿಜ್ಯ ನಗರಿ ಜನ
ಹುಬ್ಬಳ್ಳಿಯಲ್ಲಿ ಆ್ಯಕ್ಟೀವ್ ಆಯ್ತಾ ಮೇವಾತ್ ಗ್ಯಾಂಗ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 21, 2024 | 3:57 PM

ಹುಬ್ಬಳ್ಳಿ, ಜು.21: ವಾಣಿಜ್ಯ ನಗರಿ ಹುಬ್ಬಳ್ಳಿ(Hubballi). ನಿತ್ಯ ಜನ ಜಂಗುಳಿಯಿಂದ ಕುಡಿರುವ ನಗರ. ಉತ್ತರ ಕರ್ನಾಟಕ ಭಾಗದ ಅನೇಕ ‌ಜಿಲ್ಲೆಗಳಿಂದ ಜನ ಇಲ್ಲಿಗೆ ಬಂದು ಹೋಗುತ್ತಾರೆ. ಇದೇ ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಎರಡು ಕಳ್ಳತನ ಪ್ರಕರಣದಿಂದ ಜನ ಆತಂಕಗೊಂಡಿದ್ದಾರೆ. ಹೌದು, ಜನನಿಭೀಡ ಪ್ರದೇಶವನ್ನೇ ಆ ಗ್ಯಾಂಗ್ ಟಾರ್ಗೆಟ್ ಮಾಡಿದ್ದು, ಹುಬ್ಬಳ್ಳಿಯ ಕೇಶ್ವಾಪೂರರ ರಮೇಶ ಭವನ ಬಳಿ ಕಳೆದ ವಾರ 850 ಗ್ರಾಂ ಬಂಗಾರ ಹಾಗೂ ಅಂದಾಜು 50 ಕೆ.ಜಿ ಬೆಳ್ಳಿ ಜೊತೆಗೆ ಹಣ ಕಳ್ಳತನವಾಗಿತ್ತು. ಅದಕ್ಕೂ ಎರಡು ದಿನ ಮೊದಲು ನಗರದ ಪ್ರಮುಖ ಪ್ರದೇಶವಾದ ಮೂರು ಸಾವಿರ ಮಠದ ಬಳಿ ಮೂರು ಸ್ಟೀಲ್ ಅಂಗಡಿ ಕಳ್ಳತನವಾಗಿತ್ತು. ಆದ್ರೆ, ಕಳ್ಳತನ ನಡೆದೂ ಹೆಚ್ಚು ಕಡಿಮೆ ವಾರ ಕಳೆದರೂ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ.

ಹುಬ್ಬಳ್ಳಿಯಲ್ಲಿ ಮೇವಾತ್ ಗ್ಯಾಂಗ್ ಆ್ಯಕ್ಟೀವ್ ಆಗಿದೆಯಾ?

ಹಾಗಾದರೆ ಹುಬ್ಬಳ್ಳಿಗೆ ಹೊರ ರಾಜ್ಯದ ಕಳ್ಳರ ಗ್ಯಾಂಗ್ ಎಂಟ್ರಿಯಾಗಿದೆಯಾ ಎನ್ನುವ ಅನುಮಾನ ಮೂಡಿದೆ. ಎರಡು‌ ಕಳ್ಳತನ ಪ್ರಕರಣ ನೋಡಿದರೆ, ಮೇವಾತ್ ಗ್ಯಾಂಗ್ ಆ್ಯಕ್ಟೀವ್ ಆಗಿದೆಯಾ ಎನ್ನುವ ಅನುಮಾನ‌ ಮೂಡಿದೆ. ಅಷ್ಟಕ್ಕೂ ಏನಿದು‌ ಮೇವಾತ್ ಗ್ಯಾಂಗ್  ನೋಡುವುದಾದರೆ, ‘ಇದು ಹರಿಯಾಣದ ಒಂದು‌ ಗ್ಯಾಂಗ್, ಇವರು ಎಟಿಎಮ್​ ಮನೆ ಕಳ್ಳತನ, ಬಂಗಾರ ಕಳ್ಳತನದಲ್ಲಿ ಎಕ್ಸಪರ್ಟ್. ಜನನಿಭೀಡ ಪ್ರದೇಶಗಳೇ ಇವರ ಟಾರ್ಗೆಟ್. ಹುಬ್ಬಳ್ಳಿಯಲ್ಲಿ‌ ನಡೆದ ಎರಡು ಕಳ್ಳತನವೂ ಜನ‌ನಿಬೀಡ ಪ್ರದೇಶದಲ್ಲಿ ಆಗಿದೆ. ಹೀಗಾಗಿ ಹೊರ ರಾಜ್ಯದಿಂದ ಬಂದ ಗ್ಯಾಂಗ್ ಹುಬ್ಬಳ್ಳಿ ಜನರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ:ಮಂಗಳೂರನ್ನು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ ಬಂಧನ, ಕೃತ್ಯ ನಡೆದು ಐದೇ ಗಂಟೆಯಲ್ಲೇ ಹಿಡಿದ ಪೊಲೀಸ್ರು

ಕಳೆದ ವಾರ ಸ್ಟೀಲ್ ಅಂಗಡಿಯನ್ನ ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲೆಗೆ ಕ್ಯಾಪ್ ಹಾಕಿಕೊಂಡು ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಸಿಸಿ ಕ್ಯಾಮೆರಾ ಆಫ್ ಮಾಡಿ ದರೋಡೆ ಮಾಡಿದ್ರು. ಇದಾದ ಮೇಲೆ ನಡೆದ ಬಂಗಾರದ ಅಂಗಡಿಯಲ್ಲೂ ಸಿಸಿ ಕ್ಯಾಮೆರಾಗೆ ಸ್ಪ್ರೇ ಹೊಡೆದು ಕಳ್ಳತನ ಮಾಡಲಾಗಿತ್ತು. ಎರಡು ಕಳ್ಳತನ ನೋಡಿದ್ರೆ ಒಂದೇ ಗ್ಯಾಂಗ್ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹರಿಯಾಣದ ಮೇವಾತ್ ಗ್ಯಾಂಗ್ ಕೃತ್ಯ ಮಾಡಿರಬಹದು ಎನ್ನಲಾಗಿದೆ.

ಪೊಲೀಸರಿಗೂ ತಲೆನೋವಾದ ಕಳ್ಳತನ ಪ್ರಕರಣ

‘ಆ ಗ್ಯಾಂಗ್ ಕರ್ನಾಟಕದಲ್ಲಿ ಅನೇಕ ಕಡೆ ಕಳ್ಳತನ ಮಾಡಿದೆ. ಇವರು ಪ್ರಮುಖವಾಗಿ ಜನ‌ನಿಭೀಡ ಪ್ರದೇಶವನ್ನು ಟಾರ್ಗೆಟ್ ಮಾಡ್ತಾರೆ. ಜನ ಇಲ್ಲದೆ ಇರೋ ಕಡೆ ಕಳ್ಳತನ ಮಾಡುವುದು ಒಂದು ಲೆಕ್ಕ ಆದ್ರೆ, ಇವರು ಜನ ಇರುವ ಪ್ರದೇಶವನ್ನೇ ಟಾರ್ಗೆಟ್ ಮಾಡ್ತಾರೆ. ಗುಂಪು ಗುಂಪಾಗಿ ಬಂದು ಕಳ್ಳತನ ಮಾಡೋವಾಗ ಬೇರೆಯಾಗೋದು ಈ ಗ್ಯಾಂಗ್ ಕರಾಮತ್ತು. ಇವರು ಅಷ್ಟು ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳೋದಿಲ್ಲ‌. ಹೀಗಾಗಿ ಹುಬ್ಬಳ್ಳಿಯಲ್ಲಿ ನಡೆದ ಎರಡು ದೊಡ್ಡ ಕಳ್ಳತನ ಪ್ರಕರಣ ಇದೀಗ ಪೊಲೀಸರಿಗೂ ತಲೆನೋವಾಗಿದೆ.

ಮೇವಾತ್ ಗ್ಯಾಂಗ್ ಉದ್ಯೋಗವೇ ಕಳ್ಳತನ. ಅಕಸ್ಮಾತ್ ಕಳ್ಳತನ ಮಾಡಿ ಅವರ ಪ್ರದೇಶಕ್ಕೆ ಹೋದ್ರೆ ಅವರು ಸಿಗೋದು ಅನುಮಾನ. ಕಳ್ಳತನದ ಮೇಲೆಯೇ ಅವರು ಅವಲಂಬನೆಯಾಗಿದ್ದು, ಹುಬ್ಬಳ್ಳಿಯ ಜನನಿಭೀಡ ಪ್ರದೇಶದಲ್ಲಿ ನಡೆದ ಎರಡು ಕಳ್ಳತನ ಪ್ರಕರಣಗಳು ಮೇವಾತ್ ಗ್ಯಾಂಗ್ ಮೇಲೆ ಅನುಮಾನ ಹುಟ್ಟಿಸಿವೆ. ಪೊಲೀಸರು ಇನ್ನಷ್ಟು ಕಳ್ಳತನ ಆಗುವ ಮುಂಚೆ ಖದೀಮರನ್ನ ಹೆಡೆಮುರಿ ಕಟ್ಟಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ