ವಾಹನ ಕೊಟ್ಟು ದಂಡ ತೆತ್ತ ಪೋಷಕರು: ಅಪ್ರಾಪ್ತ ವಾಹನ ಚಲಾಯಿಸಿದ್ದಕ್ಕೆ 25 ಸಾವಿರ ರೂ ಫೈನ್
ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಗೊತ್ತಿದ್ದರು ಕೂಡ ಪೋಷಕರು ತಮ್ಮ ಮಕ್ಕಳಿಗೆ ವಾಹನ ಚಾಲನೆಗೆ ನೀಡುತ್ತಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ ಪೋಷಕರಿಗೆ 25 ಸಾವಿರ ರೂ. ದಂಡ ಹಾಕಲಾಗಿದೆ.
ಹುಬ್ಬಳ್ಳಿ, ಜುಲೈ 20: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಕರರು ವಾಹನ (Vehicles) ಚಲಾಯಿಸುವುದು ಹೆಚ್ಚಾಗಿದೆ. ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ ಪೋಷಕರಿಗೆ 25 ಸಾವಿರ ರೂ. ದಂಡ (penalty) ಹಾಕಲಾಗಿದೆ. ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಒಪ್ಪಿಗೆ ಪೋಷಕರಿಗೆ 25 ಸಾವಿರ ದಂಡ ಹಾಕಿ ಹುಬ್ಬಳ್ಳಿ ಒಂದನೇ ಜೆಎಂಎಫ್ಸಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಹುಬ್ಬಳ್ಳಿಯ ಪಡದಯ್ಯನ ಹಕ್ಕಲ ನಿವಾಸಿ ಅಶ್ವೀನಿ ಕಲಾಲ್ ಎಂಬುವವರಿಗೆ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ.
ನಿನ್ನೆ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ಹಿನ್ನಲೆ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಇಂತಹ ಅನೇಕ ಪ್ರಕರಣಗಳು ಕಂಡುಬರುತ್ತಿವೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೂ ತಟ್ಟಿದ ಕ್ಲೌಡ್ ಸಮಸ್ಯೆ ಬಿಸಿ
ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆಯು ಹೊಂದಿರುವ ದತ್ತಾಂಶ, ತಂತ್ರಾಂಶ ಸಂಗ್ರಹದ ಪ್ರಮುಖ ಭಾಗವಾದ ಕ್ಲೌಡ್ನಲ್ಲಿ ನಿನ್ನೆ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರ ಪರಿಣಾಮ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮೇಲೂ ಬೀರಿದೆ.
ಇದನ್ನೂ ಓದಿ: Bengaluru Traffic Police: ಬೆಂಗಳೂರಿನಲ್ಲಿ ಹೆಚ್ಚಿದ ಶಾಲಾ ಮಕ್ಕಳ ಬೈಕ್ ಸಂಚಾರ: ಒಂದೇ ದಿನ 1800 ಮಕ್ಕಳ ಪೋಷಕರಿಗೆ ದಂಡ
ಮುಂಬೈ ಮತ್ತು ನವದೆಹಲಿಯಿಂದ ಬರಬೇಕಿದ್ದ ವಿಮಾನಳು ವಿಳಂಬವಾಗಿವೆ. ವಿಮಾನಯಾನ ಸಂಸ್ಥೆಗಳ ಬುಕ್ಕಿಂಗ್‌ನಲ್ಲಿ ಅಡಚಣೆ ಕಾಣಿಸಿಕೊಂಡಿದ್ದು, ಕೈ ಬರಹದಲ್ಲಿಯೇ ಟಿಕೆಟ್ ಬುಕ್ಕಿಂಗ್ ಮಾಡಿಕೊಡಲಾಗಿದೆ. ಹಾಗೆಯೇ ಮುಂಬೈ, ದೆಹಲಿಯಿಂದ ಬಂದ ಪ್ರಯಾಣಿಕರ ಟಿಕೆಟ್ ಅನ್ನು ಸಹ ಕೈ ಬರಹದಲ್ಲಿ ನಮೂದಿಸಿದ್ದನ್ನು ಪ್ರಯಾಣಿಕರೊಬ್ಬರು ನಗರದ ವಿಮಾನ ನಿಲ್ದಾಣದಲ್ಲಿ ತೋರಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಕರರು ವಾಹನ ಚಲಾಯಿಸಲು ಅನುಮತಿ ನೀಡಿದ್ದಕ್ಕೆ ಪೋಷಕರಿಗೆ 1.5 ಲಕ್ಷ ರೂ. ದಂಡ
ಕ್ಲೌಡ್ ಸಮಸ್ಯೆ ನಿವಾರಣೆಯಾಗುವರೆಗೂ ವಿಮಾನಯಾನ ಸಂಸ್ಥೆಗಳು ಆನ್‌ಲೈನ್ ಬುಕ್ಕಿಂಗ್ ಸಾಧ್ಯತೆ ಕಡಿಮೆ ಮಾಡಲಿದೆ ಎಂದು ಈ ಬಗ್ಗೆ ಹುಬ್ಬಳ್ಳಿ ಏರೋಡ್ರಮ್ ಸಲಹಾ ಸಮಿತಿ ಸದಸ್ಯ ಸುನಿಲ ನಲವಡೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.