ಹುಬ್ಬಳ್ಳಿ ಕಿಮ್ಸ್​ನಲ್ಲಿ ನಾಪತ್ತೆಯಾಗಿದ್ದ ಮಗು ಆಸ್ಪತ್ರೆ ಆವರಣದಲ್ಲಿ ಇಂದು ಧಿಡೀರ್ ಪ್ರತ್ಯಕ್ಷ

ಕುಂದಗೋಳದ ನೆಹರು ನಗರದ ನಿವಾಸಿ ಉಮ್ಮೇ ಜೈನಾಬ್, ಹುಸೇನ್ ಸಾಬ್ ಶೇಖ್ ಎಂಬ ದಂಪತಿಗೆ 40 ದಿನಗಳ ಹಿಂದೆ ಮಗು ಜನಿಸಿತ್ತು. ಉಮ್ಮೇ ಜೈನಾಬ್​ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.

ಹುಬ್ಬಳ್ಳಿ ಕಿಮ್ಸ್​ನಲ್ಲಿ ನಾಪತ್ತೆಯಾಗಿದ್ದ ಮಗು ಆಸ್ಪತ್ರೆ ಆವರಣದಲ್ಲಿ ಇಂದು ಧಿಡೀರ್ ಪ್ರತ್ಯಕ್ಷ
ಕಾಣೆಯಾಗಿದ್ದ ಮಗು
Edited By:

Updated on: Jun 14, 2022 | 12:02 PM

ಹುಬ್ಬಳ್ಳಿ: ನಿನ್ನೆ (ಜೂನ್ 13) ನಾಪತ್ತೆಯಾಗಿದ್ದ 40 ದಿನದ ಮಗು ಇಂದು ಕಿಮ್ಸ್ ಆಸ್ಪತ್ರೆ (KIMS Hospital) ಆವರಣದಲ್ಲಿ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನದ ಹೊತ್ತಿಗೆ ತಾಯಿ ಕೈಯಲ್ಲಿದ್ದ ಹಸುಗೂಸನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದರು. ಮಗುವಿಗಾಗಿ ಪೊಲೀಸರು ಮೂರು ತಂಡ ರಚಿಸುವ ಮೂಲಕ ಬಲೆ ಬೀಸಿದ್ದರು. ಪೊಲೀಸರ ತನಿಖೆ ಚುರುಕುಗೊಂಡ ಹಿನ್ನೆಲೆ ಭಯಗೊಂಡ ಆರೋಪಿತರು ಮಗುವನ್ನು ತಂದು ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಮಗುವನ್ನು ಕದ್ದಿದವರು ಯಾರು? ಇಂದು ಆವರಣದಲ್ಲಿ ವಾಪಸ್ ತಂದು ಇಟ್ಟವರು ಯಾರು? ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಕುಂದಗೋಳದ ನೆಹರು ನಗರದ ನಿವಾಸಿ ಉಮ್ಮೇ ಜೈನಾಬ್, ಹುಸೇನ್ ಸಾಬ್ ಶೇಖ್ ಎಂಬ ದಂಪತಿಗೆ 40 ದಿನಗಳ ಹಿಂದೆ ಮಗು ಜನಿಸಿತ್ತು. ಉಮ್ಮೇ ಜೈನಾಬ್​ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಖದೀಮರು ಮಗುವನ್ನು ಕದ್ದು ಪರಾರಿಯಾಗಿದ್ದರು. ಇನ್ನು ಕದ್ದ ಮಗು ಎಲ್ಲಿತ್ತು? ಎನ್ನುವುದು ಪೊಲೀಸರ ತನಿಖೆಯ ನಂತರವಷ್ಟೆ ತಿಳಿಯಬೇಕಿದೆ.

ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮಗುವನ್ನು ಇಟ್ಟು ಹೋಗಿರುವ ಸ್ಥಳಕ್ಕೂ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದರು. ಪ್ರಕರಣ ಕುರಿತ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಇದನ್ನೂ ಓದಿ
Viral Video: ಅಶ್ಲೀಲವಾಗಿ ವರ್ತಿಸಿದ ಯುವಕರೊಂದಿಗೆ ಏಕಾಂಗಿಯಾಗಿ ಫೈಟ್ ಮಾಡಿದ ಯುವತಿ; ವಿಡಿಯೋ ವೈರಲ್
ಪ್ರವಾದಿ ಮೊಹಮ್ಮದ್ ಕುರಿತು ವಾಟ್ಸ್ಯಾಪ್​ನಲ್ಲಿ ಅವಹೇಳನಕಾರಿ ಪೋಸ್ಟ್, ಬಸವಕಲ್ಯಾಣ ಪ್ರಕ್ಷುಬ್ದ
ಪ್ರವಾದಿ ವಿರುದ್ಧ ಹೇಳಿಕೆ: ಉತ್ತರ ಪ್ರದೇಶದಲ್ಲಿ ನಡೆದ ಗಲಭೆಯಲ್ಲಿ 337 ಮಂದಿ ಬಂಧನ, 13 ಎಫ್​ಐಆರ್ ದಾಖಲು
Employment: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ನಿರ್ಧಾರ

ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ವಾಟ್ಸ್ಯಾಪ್​ನಲ್ಲಿ ಅವಹೇಳನಕಾರಿ ಪೋಸ್ಟ್, ಬಸವಕಲ್ಯಾಣ ಪ್ರಕ್ಷುಬ್ದ

ನಿನ್ನೆ ಘಟನೆ ಬಳಿಕ ಮಾತನಾಡಿದ ಕಿಮ್ಸ್ ಅಧೀಕ್ಷಕ ಅರುಣ್ ಕುಮಾರ್, ಮಗು ಕಳ್ಳತನವಾಗಿದ್ದು ವಾರ್ಡ್​ನಿಂದ ಅಲ್ಲ ಕಾರಿಡಾರ್​ನಿಂದ. ಮಧ್ಯಾಹ್ನ ಊಟದ ಸಮಯದಲ್ಲಿ ಘಟನೆ ನಡೆದಿದೆ. ಭದ್ರತೆ ಬಿಗಿಯಾಗಿದ್ದರು ಕಳ್ಳತನ ಹೇಗೆ ನಡೆಯಿತು ಎಂಬುದರ ಕುರಿತು ಸಂಶಯ ವ್ಯಕ್ತವಾಗಿದೆ. ನಾಲ್ಕು ದಿನದ ಹಿಂದೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ವಾಂತಿ ಕಡಿಮೆಯಾದ ಹಿನ್ನೆಲೆ ಇಂದು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ