ಧಾರವಾಡದಲ್ಲಿ ಪ್ರಿಯತಮನ ಜತೆ ಸೇರಿ ತಾಯಿಗೆ ಚಾಕು ಇರಿದ ಪುತ್ರಿ; ತಾಯಿ ಸ್ಥಿತಿ ಗಂಭೀರ
ತಾಯಿಗೆ ಚಾಕು ಇರಿದ ಬಳಿಕ ಪುತ್ರಿ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ. ಸದ್ಯ ಗಾಯಗೊಂಡಿರುವ ತಾಯಿ ಜೀಜಾಬಾಯಿ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಧಾರವಾಡ: ಪ್ರಿಯತಮನ (Lover) ಜೊತೆ ಸೇರಿ ಹೆತ್ತ ತಾಯಿಗೆ (Mother) ಮಗಳು ಚಾಕು ಇರಿದಿರುವ ಘಟನೆ ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿಗೆ ಚಾಕು ಇರಿದ ಬಳಿಕ ಪುತ್ರಿ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ. ಸದ್ಯ ಗಾಯಗೊಂಡಿರುವ ತಾಯಿ ಜೀಜಾಬಾಯಿ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಗೆ ಮಗಳು ಚಾಕು ಇರಿದಿರುವುದಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಹಾಗೇ ಮಗಳು ಸದ್ಯ ಎಲ್ಲಿದ್ದಾಳೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ.
ಕಲಬುರಗಿಯಲ್ಲಿ ವ್ಯಕ್ತಿ ಕೊಲೆ: ಕಲಬುರಗಿ: ಮಾರಕಾಸ್ತ್ರದಿಂದ ಹೊಡೆದು ವ್ಯಕ್ತಿಯೋರ್ವನ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿ ಸಂಭವಿಸಿದೆ. ದುಷ್ಕರ್ಮಿಗಳು ಕಾಲೋನಿಯಲ್ಲಿರುವ ಕಟ್ಟಡದ ಬಳಿ ಕೊಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಹಾತ್ಮಾ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಪರ ಮತ ಚಲಾಯಿಸಿದ ಜೆಡಿ(ಎಸ್) ಶಾಸಕರ ಕೈಲಾಸ ಸಮಾರಾಧನೆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ!
ಡ್ರಗ್ಸ್ ಪೆಡ್ಲರ್ಗಳ ಬಂಧನ: ಬೆಂಗಳೂರಿನಲ್ಲಿ ಮೂವರು ಡ್ರಗ್ಸ್ ಪೆಡ್ಲರ್ಗಳು ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶೇಖ್ ಸಲ್ಮಾನ್, ಶಫೀಕ್, ಸಲ್ಮಾನ್ ಫಾರಿಸ್ನ ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವ ವಿದ್ಯಾರಣ್ಯಪುರದ ರೌಡಿಶೀಟರ್. ಬಂಧಿತರಿಂದ 10 ಲಕ್ಷ ಮೌಲ್ಯದ 11 ಗ್ರಾಂ ಎಂಡಿಎಂಎ, 6 ಕೆಜಿ ಗಾಂಜಾ, ಒಂದು ಕಾರು, 3 ಮೊಬೈಲ್ಗಳನ್ನ ಸೀಜ್ ಮಾಡಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ದೊಡ್ಡಬಳ್ಳಾಪುರದ ವಿನುತಾ(20) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 6 ತಿಂಗಳ ಹಿಂದೆ ಹರೀಶ್ ಜತೆ ವಿನುತಾ ಮದುವೆಯಾಗಿತ್ತು. ಹರೀಶ್, ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ವರದಕ್ಷಿಣೆ ಕಿರುಕುಳ ಆರೋಪದಡಿ ವಿನುತಾ ಪೋಷಕರು ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಮಾರಸ್ವಾಮಿಗೆ ತಾಕತ್ತಿದ್ದರೆ ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ- ಶ್ರೀನಿವಾಸ್ ಸವಾಲ್: ಹೆಎಚ್ಡಿಕೆಗೆ ತಾಕತ್ತಿದ್ದರೆ ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಶ್ರೀನಿವಾಸ್ ಸವಾಲ್ ಹಾಕಿದ್ದಾರೆ. ಇವರು ಬದುಕುವುದಕ್ಕೆ ಇಟ್ಟುಕೊಂಡಿರುವ ಪಕ್ಷ ಇದು. ಕಾಸು ಕೊಟ್ಟರೆ ಟಿಕೇಟ್, ಕಾಸು ಕೊಟ್ಟರೆ ಕಾರ್ಯಕರ್ತರು. ಕುಮಾರಸ್ವಾಮಿಗೆ ಮಾನ ಮಾರ್ಯದೆ ಇದ್ದಿದ್ದರೆ ಇದೆಲ್ಲಾ ಹೇಳುತ್ತಿರಲಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Sat, 11 June 22