ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಶಾಸಕ ಗೈರು: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಸಮಾಧಾನ

ಸಿದ್ದರಾಮೋತ್ಸವ ಪೂರ್ವ ಭಾವಿ ಸಭೆಗೆ ಕೈ ಕೊಟ್ಟ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಶಾಸಕ ಗೈರು: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಸಮಾಧಾನ
ಜಮೀರ್ ಅಹ್ಮದ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 25, 2022 | 8:38 AM


ಹುಬ್ಬಳ್ಳಿ: ನಗರದ ಕಚ್ಚಿ ಗಾರ್ಡನ್‌ನಲ್ಲಿ ನಿನ್ನೆ ನಟಡೆದ ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಶಾಸಕ ಗೈರಾದ ಹಿನ್ನೆಲೆ ಕೈ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಸಮಾಧಾನಗೊಂಡಿದ್ದಾರೆ. ಸಿದ್ದರಾಮೋತ್ಸವ ಪೂರ್ವಭಾವಿ ಸಭೆಯಲ್ಲಿ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತೇಳಿ ಸಭೆಗೆ ಬಂದಿಲ್ಲ. ಜ್ವರ ಮಗನಿಗೆ ಬಂದಿದೀಯಾ ಅಥವಾ ನಿಮಗೆ ಬಂದಿದೀಯಾ ಎಂದು ಜಮೀರ್ ಅಹ್ಮದ್ ಖಾರವಾಗಿ ಪ್ರಶ್ನಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತ ನಿರ್ಣಾಯಕ. ಇದನ್ನು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಮರೆಯದಿರಲಿ. ಯಾವತ್ತಾದರೂ ನಮ್ಮ ಬಳಿಗೆ ಬರಬೇಕು ಅವಾಗ ನಾನು ಮಾತಾಡುವೆ ಎಂದು ಜಮೀರ್ ಖಾನ್ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ನನಗೂ ಸಿಎಂ ಆಗುವ ಆಸೆ ಇದೆ; ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟ ಶಾಸಕ ಜಮೀರ್ ಅಹ್ಮದ್

ಅಲ್ಲದೇ ಅಲ್ಪ ಸಂಖ್ಯಾತರಿಗೆ ಇದು ಪರೀಕ್ಷೆಯ ಸಮಯ. ಮುಂದೆ ಎಲ್ಲಾ ಒಳ್ಳೆಯದಾಗುತ್ತೆ. ಕಾಂಗ್ರೆಸ್ ಪಕ್ಷ ನಂಗೆ ಎಲ್ಲವನ್ನೂ ನೀಡಿದೆ. ನಾವು ದೇಶದ್ರೋಹಿಗಳಲ್ಲ. ದೇಶಪ್ರೇಮಿಗಳು. ನಮ್ಮನ್ನ ತುಳಿಯುವರಿಂದ ಎಚ್ಚರಿಕೆಯಿಂದ ಇರಬೇಕು ಎಂದು ರಾಜಕೀಯ ವಿರೋಧಿಗಳಿಗೆ ಜಮೀರ್ ಅಹ್ಮದ್ ಹಿಗ್ಗಾಮುಗ್ಗಾ ಬೈದರು.

ಕಾಂಗ್ರೆಸ್​ ಗೆದ್ದರೆ ಐವತ್ತು ಲಕ್ಷ ದೇಣಿಗೆ ಕೊಡುತ್ತೇನೆ:

ಬೆಳಗಾವಿ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ದಿಲಾವರ್ ಸಾಬ್ ದರ್ಗಾಕ್ಕೆ ಐವತ್ತು ಲಕ್ಷ ದೇಣಿಗೆ ಕೊಡುತ್ತೇನೆ ಎಂದು ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ದಿಲಾವರ್ ಸಾಬ್ ದರ್ಗಾದಲ್ಲಿ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದರು. ವೈಯಕ್ತಿಕವಾಗಿ ದೇಣಿಗೆ ಕೊಡುವುದಾಗಿ ಜಮೀರ್ ಅಹ್ಮದ್ ಹರಕೆ ಕಟ್ಟಿಕೊಂಡರು. ಚುನಾವಣೆಯಲ್ಲಿ ಮತ್ತೊಮ್ಮೆ ಮಹಾಂತೇಶ್ ಕೌಜಲಗಿ ಶಾಸಕರಾಗಬೇಕು, ಕಾಂಗ್ರೆಸ್ ಗೆಲ್ಲಬೇಕು. ಸರ್ಕಾರ ಆಗುತ್ತೆ ನಾವು ಕೊಡಬೇಕು ಕೊಡುತ್ತೇವೆ ಅದನ್ನ ಬಿಟ್ಟಾಕಿ. ನನ್ನಿಂದ ವೈಯಕ್ತಿಕವಾಗಿ ಐವತ್ತು ಲಕ್ಷ ಹಣ ಕೊಡುತ್ತೇನೆ.

ಇದನ್ನೂ ಓದಿ: ಕೇಂದ್ರೀಯ ಏಜೆನ್ಸಿಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ: ಡಿಕೆ ಶಿವಕುಮಾರ

ಉರುಸ್ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರ್ತಾರೆ ಕೊಠಡಿ ವ್ಯವಸ್ಥೆ ಇಲ್ಲಾ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದರೆ ಮೂರು ತಿಂಗಳ ಒಳಗಾಗಿ ಹಣ ಕೋಡುತ್ತೇನೆ. ಇಡೀ ದೇಶದಲ್ಲಿ ನನಗೆ ಸಿಕ್ತಿರುವ ಪ್ರೀತಿ ಯಾವ ರಾಜಕಾರಣಿಗೂ ಸಿಕ್ಕಿಲ್ಲ. ತಕ್ಷಣಕ್ಕೆ ಐದು ಲಕ್ಷ ದೇಣಿಗೆಯನ್ನ ಜಮೀರ್ ಅಹ್ಮದ್ ದರ್ಗಾಕ್ಕೆ ನೀಡಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada