AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದಲ್ಲಿ ಮತದಾರರ ಸರ್ವೆ ಆರೋಪ: ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ ಅರವಿಂದ ಬೆಲ್ಲದ್

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಅಲ್ಪಸಂಖ್ಯಾತರು ಹೆಚ್ಚಿರುವ ಆನಂದನಗರದಲ್ಲಿ ಆ್ಯಪ್​ ಮೂಲಕ ಸರ್ವೆ ಮಾಡಿದವರು ಯಾರು ಅಂತ ಗೊತ್ತಿಲ್ಲ ಶಾಸಕ ಅರವಿಂದ ಬೆಲ್ಲದ್ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದಲ್ಲಿ ಮತದಾರರ ಸರ್ವೆ ಆರೋಪ: ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ ಅರವಿಂದ ಬೆಲ್ಲದ್
ಶಾಸಕ ಅರವಿಂದ ಬೆಲ್ಲದ್​​
TV9 Web
| Updated By: ವಿವೇಕ ಬಿರಾದಾರ|

Updated on:Dec 02, 2022 | 3:43 PM

Share

ಹುಬ್ಬಳ್ಳಿ: ನಿನ್ನೆ (ಡಿ.1) ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ (Hubli-Dharwad West Assembly Constituency) ಅಲ್ಪಸಂಖ್ಯಾತರು ಹೆಚ್ಚಿರುವ ಆನಂದನಗರದಲ್ಲಿ ಆ್ಯಪ್​ ಮೂಲಕ ಸರ್ವೆ ಮಾಡಿದವರು ಯಾರು ಅಂತ ಗೊತ್ತಿಲ್ಲ ಎಂದು ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ (Arvind Bellad) ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಇಂದು (ಡಿ.2) ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ಕಾರ್ಯಕರ್ತರೇ ಸರ್ವೆ ಮಾಡುತ್ತಿದ್ದಾರೆ. ನಾವು ವೋಟರ್ ಇನ್​ಫಾರ್ಮೇಶನ್  ಕ್ಯಾಂಪ್ ಮಾಡುತ್ತಿದ್ದೇವೆ. ಅದು ಆ್ಯಪ್‌ ಮೂಲಕವೇ ಮಾಡುತ್ತಿದ್ದೇವೆ. ಆದರೆ ನಿನ್ನೆ ಆ್ಯಪ್ ಮೂಲಕ ಸರ್ವೆ ಮಾಡಿದವರು ಯಾರು ಅಂತ ಗೊತ್ತಿಲ್ಲ ಎಂದು ಹೇಳಿದರು.

ದೆಹಲಿಯ ASR ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ ಹೆಸರಲ್ಲಿ ಸರ್ವೆ

ಆ್ಯಪ್ ಮೂಲಕ ಮತದಾರರ ಸರ್ವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಡಿ.2) ಹಳೇ ಹುಬ್ಬಳ್ಳಿ ಠಾಣೆಗೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಭೇಟಿ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಆ್ಯಪ್‌ ಮೂಲಕ ಸರ್ವೆ ಮಾಡಿದ ಹಿನ್ನೆಲೆ ವೀರೇಶ್, ಮಂಜುನಾಥ್ ನಿತೇಶ್ ಎಂಬುವರ ವಿರುದ್ಧ ನಿನ್ನೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೆಹಲಿಯ ASR ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ ಹೆಸರಲ್ಲಿ ಸರ್ವೆ ಮಾಡಲಾಗಿದೆ. ಕಾಂಗ್ರೆಸ್​ ಮುಖಂಡರು ಸರ್ವೆ ಮಾಡುತ್ತಿದ್ದ ಟೀಮ್ ವಿರುದ್ಧ ದೂರು ನೀಡಿದ್ದರು. ಠಾಣೆಯ ಪೊಲೀಸರು ಹಾಗೂ ದೂರು ಕೊಟ್ಟವರ ಬಳಿ‌ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

ಇದನ್ನೂ ಓದಿ: ಡಿಲೀಟ್ ಬಿಜೆಪಿ ನಾಟ್ ವೋಟರ್​ ಐಡಿ’ ಡಿಜಿಟಲ್ ಅಭಿಯಾನ ಆರಂಭಿಸಿದ ಕಾಂಗ್ರೆಸ್

ಏಜೆನ್ಸಿಯವರು ಮತದಾರ ಮಾಹಿತಿ ಸಂಗ್ರಹ ಮಾಡುತ್ತಾರೆ ಅಂತ ದೂರು ಬಂದಿತ್ತು. ಮಾಹಿತಿ ಸಂಗ್ರಹದಿಂದ ಮತದಾರರ ಹೆಸರು ಡಿಲೀಟ್ ಆಗೋ ಚಾನ್ಸ್ ಇದೆ ಎಂದು ದೂರು ನೀಡಿದರು. ಹೀಗಾಗಿ ಎಲೆಕ್ಷನ್ ಕಮೀಷನ್​ನಿಂದ ನಮಗೆ ರಿಪೋರ್ಟ್ ಕೇಳಿದರು. ಈ ಹಿನ್ನೆಲ್ಲೆ ನಾನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೇನೆ. ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದೇನೆ. ಆದಷ್ಟು ಬೇಗ ನಾನು ಮಾಹಿತಿ ಕೊಡುಡುತ್ತೇನೆ ಎಂದು ತಿಳಿಸಿದ್ದಾರೆ.

ನಮ್ಮ ಜಿಲ್ಲೆಯಲ್ಲಿ 99 ಸಾವಿರ ವೋಟರ್ ಡಿಲೀಟ್ ಆಗಿವೆ

ನಮ್ಮ ಜಿಲ್ಲೆಯಲ್ಲಿ 99 ಸಾವಿರ ವೋಟರ್ ಹೆಸರು ಡಿಲೀಟ್ ಆಗಿವೆ. ಅದಕ್ಕೆ ಕಾರಣ ಡುಪ್ಲಿಕೇಟ್ ವೋಟರ್ಸ್. 47 ಸಾವಿರ ಡುಪ್ಲಿಕೇಟ್ ವೋಟರ್ಸ್ ಇದ್ದಾರೆ. ಒಂದೇ ಕ್ಷೇತ್ರ ಮತ್ತೊಂದು ಕ್ಷೇತ್ರದಲ್ಲಿ ಅವರ ಹೆಸರು ಇರಬಹುದು. ಅದನ್ನು ಚೆಕ್‌ಮಾಡಿ 47 ಸಾವಿರ ವೋಟರ್ಸ್ ಡುಪ್ಲಿಕೇಟ್ ಇರೋ ಕಾರಣ ಡಿಲೀಟ್ ಆಗಿವೆ. ಕೆಲವರು ಮೃತರಾದವರ ಹೆಸರು ಡಿಲೀಟ್ ಆಗಿವೆ. ಕೆಲವರು ಸ್ಥಳಾಂತರ ಹೆಸರು ಡಿಲೀಟ್ ಆಗಿವೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ 99 ಸಾವಿರ ಮತಗಳು ಡಿಲೀಟ್ ಆಗಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ವೋಟರ್ ಐಡಿ ಅಕ್ರಮ: ಮತ್ತೆ ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಡಿ.24ರವರೆಗೆ ಸಮಯಾವಕಾಶ

ಇದನ್ನು ನಾವೇ ರಾಜಕೀಯ ಪಕ್ಷಗಳಿಗೆ ನೀಡಿದ್ದೇವೆ. ತಪ್ಪಾಗಿ ಯಾರಾದರೂ ಡಿಲೀಟ್ ಆಗಿದ್ದರೇ ಅಂತವರ ಹೆಸರು ಕೊಡಿ. ನಾವು ಅದನ್ನು ಸರಿ ಮಾಡುತ್ತೇವೆ. ಏಜೆನ್ಸಿಗಳಿಗೆ ಯಾವದೇ ಅನುಮತಿ ನೀಡಿಲ್ಲ. ಏಜೆನ್ಸಿ ಅವರು ಇಂಡಿಪೆಂಡೆಂಟ್ ಆಗಿ ಸರ್ವೆ ಮಾಡುತ್ತಿದ್ದಾರೆ. ನಾವು ವರದಿಯನ್ನು ಎಲೆಕ್ಷನ್ ಕಮೀಷನ್​ಗೆ ಒಪ್ಪಿಸುತ್ತೇವೆ. ಸದ್ಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆಯಾದ ಬಳಿಕ ಇವರ ಹೊರತಾಗಿ ಯಾರೇ ಇದ್ದರೂ, ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಏನಿದು ಸರ್ವೆ ಹಿನ್ನೆಲೆ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಹಾಗೂ ಪಶ್ಚಿಮ ಮತದಾರರಿರುವ ಆನಂದ ನಗರದಲ್ಲಿ ಆ್ಯಪ್ ಮೂಲಕ ಮೂವರು ಸರ್ವೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸರ್ವೆ ಮಾಡುತ್ತಿದ್ದವರನ್ನು ಕಾಂಗ್ರೆಸ್ ಮುಖಂಡರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Fri, 2 December 22

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ