National youth fest: ಯುವ ಶೃಂಗ ಸಭೆಯಲ್ಲಿ ಭವಿಷ್ಯದ ಉದ್ಯಮ ಮತ್ತು ಅನ್ವೇಷಣೆ ಕುರಿತು ಚರ್ಚೆ
ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ. ಅವುಗಳನ್ನು ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭಾರತದ ನವೋದ್ಯಮಿಗಳಾದ ಅಜಯ್ ಕಬಾಡಿಯಾ ಮತ್ತು ಕಲಾಯಿ ವನ್ನನ್ ಅಭಿಪ್ರಾಯಪಟ್ಟಿರು.
ಧಾರವಾಡ: ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭಾರತದ ನವೋದ್ಯಮಿಗಳಾದ ಅಜಯ್ ಕಬಾಡಿಯಾ ಮತ್ತು ಕಲಾಯಿ ವನ್ನನ್ ಅಭಿಪ್ರಾಯಪಟ್ಟಿರು. ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯ ಸಭಾಗಂಣದಲ್ಲಿ 26 ಅಖಿಲ ಭಾರತ ಯುವಜನೋತ್ಸವದ ಅಂಗವಾಗಿ ‘ಭವಿಷ್ಯತ್ತಿಗಾಗಿ ಉದ್ಯಮ ಮತ್ತು ಅನ್ವೇಷಣೆ’ ಎಂಬ ವಿಷಯದ ಕುರಿತು ಆಯೋಜಿಸಿದ ‘ಯುವ ಶೃಂಗ ಸಭೆ’, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭವಿಷ್ಯದ ಸಮಸ್ಯೆಗಳಗೆ ಪರಿಹಾರೋಪಾಯವಾಗಿ ರೋಬೋಟ್ ತಂತ್ರಜ್ಞಾನವನ್ನು ಇಂದು ಬಳಸಿಕೊಳ್ಳುಲಾಗುತ್ತಿದೆ. ಇದು ಭವಿಷ್ಯದ ತಂತ್ರಜ್ಞಾನವಾಗಿದೆ ಎಂದರು.
ನವೋದ್ಯಮದ ಮುಂದೆ ಇರುವ ಸವಾಲುಗಳನ್ನು ಎದುರಿಸಲು ಗ್ರಾಹಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ಸು ಆಗಲು ಸಾಧ್ಯ. ಯುವ ಉದ್ಯಮಿಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ಸಧೃಡರಾಗಬೇಕು. ನವೋದ್ಯಮ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಬೇಕು ಸಮಸ್ಯೆಗಳನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳವದು ಹೆಚ್ಚು ಸೂಕ್ತ ಎಂದು ಯುವ ಉದ್ಯಮಿ ಅಜಯ ಕಬಾಡಿ ಹೇಳಿದರು.
ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಡಿಜಿಟಲ್ ಗ್ರಂಥಾಲಯವನ್ನು ಅನುಷ್ಠಾನ ಗೋಳಿಸಲಾಗಿದೆ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಸಹಾಯವಾಗಲಿದೆ. ಸರಕಾರದ ತಂತ್ರಾಂಶಗಳನ್ನು ಜನರು ಹೇಗೆ ಬಳಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಜನರ ಆಸಕ್ತಿಯ ಅನುಗುಣವಾಗಿ ನಿರ್ದಿಷ್ಟ ಜನಸಮುದಾಯವನ್ನು ಗುರುತಿಸಿ ಯುವಕರು ಮೂಲಕ ಅವರಿಗೆ ತಂತ್ರಾಂಶವನ್ನು ಬಳಕೆಯ ಕುರಿತು ಮಾಹಿತಿ ನೀಡಲಾಗುವದು. ತಂತ್ರಜ್ಞಾನದ ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಕಲಿಯುವದು ಹೆಚ್ಚು ಉತ್ತಮ ಎಂದು ಡಾ. ಮುಕುಂದರಾಜ ಅಭಿಪ್ರಾಯಪಟ್ಟಿರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ