Hubli-Dharwad: ಜ.12ರಿಂದ ಅವಳಿನಗರದಲ್ಲಿ ಯುವಜನೋತ್ಸವ, ಮೋದಿ ಉದ್ಘಾಟನೆ, ನಟ ಅಕ್ಷಯ ಕುಮಾರ್​ಗೆ ಆಹ್ವಾನ​

| Updated By: ವಿವೇಕ ಬಿರಾದಾರ

Updated on: Dec 25, 2022 | 5:12 PM

ಜನವರಿ 12ರಿಂದ 5 ದಿನಗಳ ಕಾಲ ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದೆ.

Hubli-Dharwad: ಜ.12ರಿಂದ ಅವಳಿನಗರದಲ್ಲಿ ಯುವಜನೋತ್ಸವ, ಮೋದಿ ಉದ್ಘಾಟನೆ, ನಟ ಅಕ್ಷಯ ಕುಮಾರ್​ಗೆ ಆಹ್ವಾನ​
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ಧಾರವಾಡ: ಜನವರಿ 12ರಿಂದ 5 ದಿನಗಳ ಕಾಲ ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ (National Youth Fest) ನಡೆಯಲಿದೆ. ಈ ಯುವಜನೋತ್ಸವನ್ನು ಜ.12ರ ಮಧ್ಯಾಹ್ನ 2ಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಶಿ (Pralhad Joshi) ಹೇಳಿದ್ದಾರೆ.

ಧಾರವಾಡದಲ್ಲಿ ನಡೆಯುವ ಯುವಜನೋತ್ಸವ ಸ್ಥಳಗಳಿಗೆ ಇಂದು (ಡಿ.25) ಸಚಿವ ಪ್ರಹ್ಲಾದ್​ ಜೋಶಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಕಾರ್ಯಕ್ರಮದ ಪೂರ್ವಸಿದ್ಧತೆ ಬಗ್ಗೆ ಕೇಂದ್ರ ಸಚಿವ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್​ ಸಭಾಭವನದಲ್ಲಿ ಪ್ರಹ್ಲಾದ್ ಜೋಶಿ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ, ಮೇಯರ್​ ಭಾಗಿಯಾಗಿದ್ದರು.

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜ.12ರ ಮಧ್ಯಾಹ್ನ 1.30ಕ್ಕೆ‌ ಹುಬ್ಬಳ್ಳಿಗೆ ಪ್ರಧಾನಿ ಮೋದಿ ಆಗಮಿಸ್ತಾರೆ. ಭದ್ರತೆ ದೃಷ್ಟಿಯಿಂದಾಗಿ ಪ್ರಧಾನಿ ಕಾರ್ಯಕ್ರಮ ಸ್ಥಳ‌ ನಿಗದಿಯಾಗಿಲ್ಲ ಎಂದು ತಿಳಿಸಿದರು.

ವಿವಿಧತೆಯಲ್ಲಿ ಏಕತೆ ಪ್ರತಿನಿಧಿಸುವ ಉತ್ಸವ: 7,500 ಜನರು ಆಗಮನ

ಸ್ವಾಮಿ ವಿವೇಕಾನಂದರ ಜನ್ಮದಿನದಿಂದ ಕಾರ್ಯಕ್ರಮ ಆರಂಭವಾಗುತ್ತದೆ. ಇದು ರಾಷ್ಟ್ರೀಯ ಯುವ ಸಪ್ತಾಹದ ಭಾಗವಾಗಿ ಉತ್ಸವ ನಡೆಯುತ್ತದೆ. ವಿವಿಧತೆಯಲ್ಲಿ ಏಕತೆ ಪ್ರತಿನಿಧಿಸುವ ಉತ್ಸವ ಇದಾಗಲಿದೆ. ಇದರಲ್ಲಿ ದೇಶದ ಸಾಂಸ್ಕ್ರತಿಕ, ಭೂಗೋಳಿಕ ಐಕ್ಯತೆ ಇರಲಿದೆ. ಯುವಜನೋತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ ಒಟ್ಟು 7,500 ಜನರು ಆಗಮಿಸಲಿದ್ದಾರೆ. ಅದರಲ್ಲಿ 3500 ಜನ ನೇರವಾಗಿ ಭಾಗಿಯಾಗುತ್ತಾರೆ ಎಂದರು.

ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ರಾಜಕೀಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ರೆಡ್ಡಿ, ಈ ಬಗ್ಗೆ ಯಾರು ಏನು ಹೇಳಿದರು?

ಹುಬ್ಬಳ್ಳಿ-ಧಾರವಾಡದ ಅನೇಕ‌ ಕಡೆ ಕಾರ್ಯಕ್ರಮಗಳು ನಡೆಯುತ್ತವೆ

ಯುವ ಜನೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ಇರುತ್ತೆ. ಹುಬ್ಬಳ್ಳಿ-ಧಾರವಾಡದ ಅನೇಕ‌ ಕಡೆ ಕಾರ್ಯಕ್ರಮಗಳು ನಡೆಯುತ್ತವೆ. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಾಲೇಜ್ ಆವರಣದಲ್ಲಿ ಬಹುತೇಕ ಕಾರ್ಯಕ್ರಮ ನಡೆಯುತ್ತವೆ. ಕರ್ನಾಟಕ ವಿಶ್ವವಿದ್ಯಾಲಯದ ಚೆನ್ನಮ್ಮ ಮೈದಾನ, ಸುವರ್ಣ ಮಹೋತ್ಸವ ಸಭಾಭವನ, ಕರ್ನಾಟಕ ಕಾಲೇಜ್​ ಮೈದಾನದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬಾಲಿವುಡ್​ ನಟ ಅಕ್ಷಯಕುಮಾರ್​ಗೆ ಆಹ್ವಾನ

ಸುದ್ದಿಗೋಷ್ಠಿ ನಡೆದಾಗಲೇ ಬಾಲಿವುಡ್ ನಟ ಅಕ್ಷಯಕುಮಾರ್​ (Akshay Kumar) ಪ್ರಹ್ಲಾದ್ ಜೋಶಿಗೆ ಕರೆ ಮಾಡಿದರು. ಆಗ ಪ್ರಹ್ಲಾದ್ ಜೋಶಿ ಅಕ್ಷಯಕುಮಾರ ಅವರನ್ನು ಯುವಜನೋತ್ಸವಕ್ಕೆ ಆಹ್ವಾನಿಸಿದರು. ಜ. 16ರಂದು ನಡೆಯೋ ಸಮಾರೋಪಕ್ಕೆ ಆಗಮಿಸುವಂತೆ ಜೋಶಿ, ಅಕ್ಷಯ ಕುಮಾರ್​ಗೆ ಹೇಳಿದರು. ಆದರೆ ನಾನೂ (ಅಕ್ಷಯ ಕುಮಾರ್​) ಕೂಡ ಜ. 12ರಂದೇ ಬರುತ್ತೇನೆ ಎಂದರು. ಆದರೆ ಪ್ರಧಾನಿ ಕಾರ್ಯಕ್ರಮ ಭದ್ರತೆ ವಿಷಯ ಇರುತ್ತೆ ಎಂದು ಜೋಶಿ ಹೇಳಿದರು.

ಮುಸ್ಲಿಮರನ್ನು ಒಡೆಯಬೇಕು ಎಂದು ದರ್ಗಾ ತೆರವು ಮಾಡಿಲ್ಲ

ಹುಬ್ಬಳ್ಳಿಯ ಭೈರಿದೇವರಕೊಪ್ಪ ದರ್ಗಾ ತೆರವು ವಿಚಾರವಾಗಿ ಮಾತನಾಡಿದ ಅವರು ಮುಸ್ಲಿಮರನ್ನು ಒಡೆಯಬೇಕು ಎಂದು ದರ್ಗಾ ತೆರವು ಮಾಡಿಲ್ಲ. ಇದಕ್ಕಿಂತ ಮೊದಲು 12 ದೇಗುಲ, 1 ಚರ್ಚ್​ ತೆರವು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ​ ಅವಧಿಯಲ್ಲೇ ಬಿಆರ್​​ಟಿಎಸ್​ಗೆ ಸ್ಥಳ ಗುರುತಿಸಿದ್ದು. ಸ್ವಾಧೀನಕ್ಕೆ ಮುಂದಾದಾಗ ದರ್ಗಾದವರು ಕೋರ್ಟ್​ ಮೊರೆ ಹೋದರು. ಕೋರ್ಟ್​​ ತಡೆಯಾಜ್ಞೆ ರದ್ದು ಮಾಡಿದೆ, ಹೀಗಾಗಿ ತೆರವು ಮಾಡಿದ್ದಾರೆ. ಇದರಲ್ಲಿ ಅನಗತ್ಯವಾಗಿ ಹುಳುಕು ಹುಡುಕುವ ಕೆಲಸ ಮಾಡಬಾರದು. ಮುಸ್ಲಿಂ ಬಾಂಧವರು ಕೋರ್ಟ್‌ಗೆ ಹೋಗದಿದ್ದರೆ ವಿವಾದ ಆಗುತ್ತಿರಲಿಲ್ಲ ಎಂದು ಮಾತನಾಡಿದರು.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ 4 ದಿನ ಕರ್ನಾಟಕದ ಹಲವೆಡೆ ಮಳೆ

ಪ್ರಜಾಪ್ರಭುತ್ವದಲ್ಲಿ ಪಾರ್ಟಿ ಕಟ್ಟಲು ಎಲ್ಲರಿಗೂ ಅಧಿಕಾರವಿದೆ

ಜನಾರ್ದನ ರೆಡ್ಡಿ ಹೊಸ ಪಕ್ಷದ ಸ್ಥಾಪನೆ ವಿಚಾರವಾಗಿ ಮಾತನಾಡಿದ ಅವರು ಯಾರು ಎ ಟಿಮ್, ಬಿ ಟಿಮ್ ಅನ್ನೋದನ್ನು ಜನರು ತೀರ್ಮಾನಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪಾರ್ಟಿ ಕಟ್ಟಲು, ‌ಚುನಾವಣೆ‌ ಮಾಡಲು ಎಲ್ಲರಿಗೂ ಅಧಿಕಾರವಿದೆ. ಚುನಾವಣೆಗೆ ನಿಲ್ಲಲು 25 ವರ್ಷ ವಯಸ್ಸಾಗಿರಬೇಕು. ಆತ ಹುಚ್ಚ ಆಗಿರಬಾರದು. ಆತ ಭಾರತೀಯ ನಾಗರಿಕ ಇರಬೇಕು. ನಾನು ಆ ಬಗ್ಗೆ ಡಿಟೇಲ್ ನೋಡಿಲ್ಲ. ಇಷ್ಟು ಬೇಗ ಏನೂ ಹೇಳಲ್ಲ, ನೋಡೋಣ ಎಂದು ಜಾರಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ