AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad Soppu Mela: ಧಾರವಾಡದಲ್ಲಿ ಮೊದಲ ಬಾರಿಗೆ ನಡೆದ ಸೊಪ್ಪು ಮೇಳ ಇಡೀ ಸೊಪ್ಪಿನ ಲೋಕವನ್ನೇ ತೆರೆದಿಟ್ಟಿತ್ತು! ಚಿತ್ರಗಳಲ್ಲಿ ನೀವೂ ಆಸ್ವಾದಿಸಿ

ಸಾಮಾನ್ಯವಾಗಿ ನಿತ್ಯದ ಊಟದಲ್ಲಿ ನಾವು ಮೂಲಂಗಿ, ರಾಜಗಿರಿ, ಮೆಂತೆಯಂಥ ಕೆಲವೇ ಕೆಲ ಸೊಪ್ಪು ಬಳಸುತ್ತೇವೆ. ಮೊಟ್ಟಮೊದಲ ಬಾರಿಗೆ ಧಾರವಾಡದಲ್ಲಿ ಆಯೋಜಿಸಿದ್ದ ಸೊಪ್ಪು ಮೇಳ ಇಡೀ ಸೊಪ್ಪಿನ ಲೋಕವನ್ನೇ ತೆರೆದಿಟ್ಟಿತ್ತು.

TV9 Web
| Updated By: ಸಾಧು ಶ್ರೀನಾಥ್​|

Updated on:Dec 26, 2022 | 3:04 PM

Share
ಹಲವು ಬೆಳೆಗಳು, ಕಳೆಗಳು, ನಮ್ಮ ಪೋಷಕಾಂಶ ಭದ್ರತೆಗೆ ಒದಗುತ್ತಿದ್ದವು. ಕಳೆಗಳನ್ನು ಬಿಡಿ, ಆಹಾರ ಬೆಳೆಗಳೇ ಇಂದು ಯಾರೂ ಬೆಳೆಯದ ಅನಾಥ ಬೆಳೆಗಳ ಪಟ್ಟಿಗೆ ಸೇರಿವೆ. ಎಲ್ಲರೂ ಒಂದೇ ರೀತಿಯ ಆಹಾರ ಪದ್ಧತಿಗೆ ಬಂದು ದಶಕಗಳೇ ಕಳೆದಿವೆ.

1 / 13
ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ನಡೆದ ಈ ಮೇಳದಲ್ಲಿ ಕುಂದಗೋಳ, ಸವದತ್ತಿ, ಖಾನಾಪುರ, ಗೋಕರ್ಣ, ಹೆಗ್ಗಡದೇವನ ಕೋಟೆ, ರಾಣಿಬೆನ್ನೂರು, ಹಾವೇರಿ, ಮೈಸೂರು ಬೆಳಗಾವಿಯಿಂದ ಸೊಪ್ಪು ಬೆಳೆಗಾರರು ಆಗಮಿಸಿದ್ದು ವಿಶೇಷವಾಗಿತ್ತು.

2 / 13
ಮೇಳದಲ್ಲಿ ಬಸಳೆ, ನೆಲಬಸಳೆ, ಹರಿವೆ, ಕಿರ್ಕಸಾಲಿ, ಕೆಸು, ಹಾಡೆಬಳ್ಳಿ - ಹೀಗೆ ಹತ್ತಾರು ಕಳೆಸೊಪ್ಪುಗಳು, ಕುಡಿಗಳು, ಕೈತೋಟದ ಸೊಪ್ಪುಗಳು ಜನರ ಗಮನ ಸೆಳೆದವು. ಸೊಪ್ಪು ಮೇಳಕ್ಕೆ ಬಂದವರು ಕೈಯಲ್ಲಿ ಎರಡೆರೆಡು ಸೊಪ್ಪು ಹಿಡಿದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು.

3 / 13
ವಿಷಮುಕ್ತ ಸೊಪ್ಪಿನ ಕೃಷಿ ಮತ್ತು ಬಳಕೆಯನ್ನು ಹೆಚ್ಚಿಸೋ ಅಗತ್ಯವಿದೆ. ಪ್ರತಿನಿತ್ಯ ಸೊಪ್ಪಿನ ಕಷಾಯಗಳ ಸೇವನೆ ಮಾಡುವುದರಿಂದ ಚರ್ಮದ ಕಾಂತಿ, ಕೂದಲಿನ ಬೆಳವಣಿಗೆ ಉತ್ತಮವಾಗುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸೊಪ್ಪು ನೆರವಾಗುತ್ತದೆ.

4 / 13
ಕಡಿಮೆ ಕಾಲಾವಧಿಯಲ್ಲಿ ಬೆಳೆಯುವ ಸೊಪ್ಪುಗಳು ಪೋಷಕಾಂಶಗಳಿಸಿದ ಸಮೃದ್ಧವಾಗಿವೆ. ಇವುಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಸೊಪ್ಪಿನ ಕೃಷಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಆದಾಯವನ್ನು ಹಚ್ಚಿಸುತ್ತದೆ. ರೈತ ಮತ್ತು ಗ್ರಾಹಕರ ಹಿತವನ್ನು ಕಾಪಾಡುವ ಜವಾರಿ ಸೊಪ್ಪಿನ ಕೃಷಿ ಮತ್ತು ಆಹಾರ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಅಗತ್ಯವಿದೆ.

5 / 13
ಇತ್ತೀಚಿನ ದಿನಗಳಲ್ಲಿ ಆಹಾರದ ವಿಷಯದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಆಹಾರದ ಉತ್ಪಾದನೆಯ ಪ್ರಮಾಣವೇನೋ ಹೆಚ್ಚಿದೆ. ಆದರೆ ಆಹಾರ ವೈವಿಧ್ಯ ಹಾಗೂ ಗುಣಮಟ್ಟ ಕುಸಿದಿದೆ. ಇದೇ ಕಾರಣಕ್ಕೆ ಆಹಾರ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದ ಜವಾರಿ ಸೊಪ್ಪಿನ ತಳಿಗಳನ್ನು ಮತ್ತೆ ನೆನಪಿಸಿಕೊಂಡು ಜನರಿಗೆ ಪರಿಚಯಿಸೋ ದೃಷ್ಟಿಯಿಂದ ಇಂಥದ್ದೊಂದು ಮೇಳವನ್ನು ಆಯೋಜಿಸಲಾಗಿದೆ.

6 / 13
ಸಾಮಾನ್ಯವಾಗಿ ನಿತ್ಯದ ಊಟದಲ್ಲಿ ಮೆಂತೆ, ಮೂಲಂಗಿ, ರಾಜಗಿರಿ, ಸಬ್ಬಕ್ಕಿ ಸೇರಿ ಕೆಲವು ಬಗೆಯ ಸೊಪ್ಪುಗಳನ್ನು ಮಾತ್ರ ಸೇವಿಸುತ್ತೇವೆ. ಆದರೆ ಅವುಗಳೊಂದಿಗೆ ಇನ್ನೂ ಬಗೆ ಬಗೆಯ ಸೊಪ್ಪುಗಳು ಇರೋದನ್ನು ನೋಡಿ ಧಾರವಾಡಿಗರು ಅಚ್ಚರಿ ಪಡುವಂತಾಗಿತ್ತು.

7 / 13
ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯು ಆಯೋಜಿಸಿದ್ದ ಮೇಳದಲ್ಲಿ ತರಹೇವಾರಿ ಸೊಪ್ಪುಗಳು ಕಣ್ಣಿಗೆ ತಂಪು ನೀಡಿದ್ದಲ್ಲದೇ ವಿಧ ವಿಧದ ಸೊಪ್ಪುಗಳ ವಾಸನೆ ಮನಸ್ಸಿಗೆ ಮುದ ನೀಡಿದವು.

8 / 13
ಇದೇ ಕಾರಣಕ್ಕೆ ಬಗೆ ಬಗೆಯ ಸೊಪ್ಪುಗಳನ್ನು ಜನರಿಗೆ ಪರಿಚಯಿಸಲು ಮತ್ತು ಅವುಗಳ ಉಪಯೋಗ ತಿಳಿಸಲು ಧಾರವಾಡದಲ್ಲಿ ಮೊದಲ ಬಾರಿಗೆ ಸೊಪ್ಪು ಮೇಳವನ್ನು ಆಯೋಜಿಸಲಾಗಿದೆ.

9 / 13
ಸೊಪ್ಪು - ದಿನನಿತ್ಯದ ಊಟಕ್ಕೆ ಸೊಪ್ಪು ಇದ್ದರೆ ಅದರ ರುಚಿಯೇ ಬೇರೆ. ಬರೀ ರುಚಿ ಅಷ್ಟೇ ಅಲ್ಲ, ಅದರಿಂದ ಸಾಕಷ್ಟು ಪ್ರಮಾಣದ ವಿವಿಧ ವಿಟಮಿನ್ ಗಳು ಕೂಡ ಸಿಗುತ್ತವೆ. ಇದರಿಂದಾಗಿ ಆರೋಗ್ಯ ವೃದ್ಧಿಸುತ್ತದೆ.

10 / 13
ಧಾರವಾಡದಲ್ಲಿ  ಸೊಪ್ಪು ಮೇಳ

11 / 13
ಆದರೆ ಸಾಮಾನ್ಯವಾಗಿ ನಿತ್ಯದ ಊಟದಲ್ಲಿ ನಾವು ಮೂಲಂಗಿ, ರಾಜಗಿರಿ, ಮೆಂತೆಯಂಥ ಕೆಲವೇ ಕೆಲವು ಸೊಪ್ಪುಗಳನ್ನು (Vegetables) ಬಳಸುತ್ತೇವೆ. ಮೊಟ್ಟ ಮೊದಲ ಬಾರಿಗೆ ಧಾರವಾಡದಲ್ಲಿ ಆಯೋಜಿಸಿದ್ದ ಸೊಪ್ಪು ಮೇಳ (Dharwad Soppu Mela) ಇಡೀ ಸೊಪ್ಪಿನ ಲೋಕವನ್ನೇ ತೆರೆದಿಟ್ಟಿತ್ತು.

12 / 13
ಇಂದಿನ ಫಾಸ್ಟ್ ಫುಡ್/ ಜಂಕ್​ ಫುಡ್​​  ಜಮಾನಾದಲ್ಲಿ ಯಾವ ಆಹಾರ ಒಳ್ಳೆಯದು, ಯಾವುದು ಕೆಟ್ಟದು ಅನ್ನೋದನ್ನು ಯೋಚಿಸಿ ಯೋಚಿಸಿಯೇ ತಲೆ ಕೆಟ್ಟು ಹೋಗುತ್ತೆ. ಆದರೆ ಯಾವತ್ತಿಗೂ ಅತ್ಯಂತ ಉತ್ತಮ ಆಹಾರ ಅಂದರೆ ಅದು ಸೊಪ್ಪು (Green Leaf) ಅನ್ನೋದು ಎಲ್ಲರಿಗೂ ಗೊತ್ತು.

13 / 13

Published On - 3:03 pm, Mon, 26 December 22

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ

ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ

ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ

ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ

ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್

ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್

Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು