ಹೊಸ ಪಕ್ಷದೊಂದಿಗೆ ರಾಜಕೀಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ರೆಡ್ಡಿ, ಈ ಬಗ್ಗೆ ಯಾರು ಏನು ಹೇಳಿದರು?

ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ವರಿಷ್ಠರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹೊಸ ಪಕ್ಷದೊಂದಿಗೆ ರಾಜಕೀಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ರೆಡ್ಡಿ, ಈ ಬಗ್ಗೆ ಯಾರು ಏನು ಹೇಳಿದರು?
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 25, 2022 | 5:46 PM

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (G Janardhana Reddy) ಹೊಸ ಪಕ್ಷ ಸ್ಥಾಪಿಸುತ್ತಾರೆಂದು ಕೆಲವು ದಿನಗಳಿಂದ ಮಾತು ಕೇಳಿಬರುತ್ತಿತ್ತು. ಇದನ್ನು ಬಿಜೆಪಿ (BJP) ನಾಯಕರು ತಳ್ಳಿಹಾಕಿದ್ದರು. ಆದರೆ ಇಂದು (ಡಿ.25) “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಇದರೊಂದಿಗೆ ಜನರ್ಧನ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಎರಡನೇ ಚದುರಂಗದಾಟ ಪ್ರಾರಂಭಿಸಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರು ವಿವಿಧ ಹೇಳಿಕೆಗಳನ್ನು ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿ ನಾಳೆ (ಡಿ.25) ವರಿಷ್ಠರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

ಜನಾರ್ದನ ರೆಡ್ಡಿ ಪಕ್ಷ ಘೋಷಣೆ ವಾಪಸ್​ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ

ಚಿಕ್ಕಬಳ್ಳಾಪುರ: ಜನಾರ್ದನ ರೆಡ್ಡಿ ತಮ್ಮ ನಿರ್ಧಾರ ಬದಲಿಸಬೇಕು. ಪಕ್ಷ ಘೋಷಣೆ ವಾಪಸ್​ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಕಷ್ಟಪಟ್ಟು ಬಿಜೆಪಿ ಬೆಳೆಸಿದ್ದಾರೆ. ರೆಡ್ಡಿ ಬೇರೆ ಪಕ್ಷ ಸ್ಥಾಪಿಸುವುದು ಬೇಡ, ನಮ್ಮ ಜತೆ ಇರಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಆರೋಗ್ಯ ಸಚಿವ ಕೆ ಸುಧಾಕರ (K. Sudhakar) ಹೇಳಿದರು.

ಇದನ್ನೂ ಓದಿ: ಹೊಸ ರಾಜಕೀಯ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ

ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರೆಡ್ಡಿಗೆ ಬಿಜೆಪಿ ಜೊತೆ ಬೇಸರ ಇರಲಿಲ್ಲ, ವೈಯಕ್ತಿಕ ಭಾವನೆಗಳಿತ್ತು. ರೆಡ್ಡಿ ಭಾವನೆಗಳ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಅವರ ಜೊತೆ ಮಾತನಾಡಿದ್ದೆ. ಇತ್ತೀಚಿಗೆ ಜನಾರ್ದನ ರೆಡ್ಡಿ ಭೇಟಿಯಾಗಿ ಮಾತನಾಡಿದ್ದೆ. ನನ್ನ ಜತೆ ಜನಾರ್ದನ ರೆಡ್ಡಿ ವೈಯಕ್ತಿಕ ವಿಚಾರ ಹಂಚಿಕೊಂಡಿದ್ದರು ಎಂದು ತಿಳಿಸಿದರು.

ಜನಾರ್ದನರೆಡ್ಡಿ ಬಿಜೆಪಿಯಲ್ಲಿ ಇರಲಿಲ್ಲ: ಆರ್​.ಅಶೋಕ್

ಬೆಂಗಳೂರು: ಈ ಬಗ್ಗೆ ವರಿಷ್ಠರು, ಸಿಎಂ ಬೊಮ್ಮಾಯಿ ಗಮನ ಹರಿಸುತ್ತಾರೆ. ಜನಾರ್ದನರೆಡ್ಡಿ ಬಿಜೆಪಿಯಲ್ಲಿ ಇರಲಿಲ್ಲ ರೆಡ್ಡಿ ಮೇಲೆ ಕೇಸ್​ ಆದ ಮೇಲೆ ಬಿಜೆಪಿಯಿಂದ ತೆಗೆದಿದ್ದಾರೆ. ಹೊಸ ಪಕ್ಷ ಸ್ಥಾಪನೆ ಜನಾರ್ದನ ರೆಡ್ಡಿ ಅವರ ಸ್ವಂತ ಇಚ್ಛೆ. ರೆಡ್ಡಿ ಪಕ್ಷ ಸ್ಥಾಪನೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ.

ರೆಡ್ಡಿ ಕೇಸ್ ಆದ್ಮೇಲೆ ನಮ್ಮ ಬಿಜೆಪಿಯಲ್ಲಿ ಪಾರ್ಟಿಸಿಪಟ್ ಇಲ್ಲ. ಹೊಸ ಪಾರ್ಟಿ ವಿಚಾರ ಅದು ಅವರ ಸ್ವಂತ ಇಚ್ಛೆ. ಅದರಿಂದ ನಮಗೇನು ತೊಂದರೆ ಇಲ್ಲ, ಸಮಸ್ಯೆನೂ ಇಲ್ಲ. ಬಿಜೆಪಿ ಯವರು ಯಾರು ಕೈ ಕೊಟ್ಟರು ಅವರಿಗೆ‌? ಅಮಿತ್ ಶಾ ಅವ್ರು ಕೈ ಕೊಟ್ರಾ, ಮೋದಿಯವರು ಕೈ ಕೊಟ್ರಾ. ಯಡಿಯೂರಪ್ಪ ಕೈ ಕೊಟ್ರಾ ? ಈ ಹಿಂದೆ ಮಂತ್ರಿಯಾಗಿದ್ದರಲ್ಲ. ಆ ಸಂದರ್ಭದಲ್ಲಿ ಬಿಜೆಪಿಯವರು ಸಹಾಯ ಮಾಡಿದ್ದಾರೆ. ಇಡೀ ಕಾಂಗ್ರೆಸ್ ಹಾಗೂ ಜನತಾದಳ ಅವರ ಮೈಮೇಲೆ ಬಿದ್ದಾಗ ಸಪ್ಪೋರ್ಟ್ ಮಾಡಿದರು ಎಂದರು.

ಇದನ್ನು ಓದಿ:  ದಾಖಲೆ ಒದಗಿಸದಿದ್ದರೇ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಎಚ್ಚರಿಕೆ ಕೊಟ್ಟ ಮುನಿರತ್ನ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ಪಕ್ಷ ಕಟ್ಟಲು, ಸ್ಪರ್ಧಿಸಲು ಅವಕಾಶ ಇದೆ

ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ಪಕ್ಷ ಕಟ್ಟಲು, ಸ್ಪರ್ಧಿಸಲು ಅವಕಾಶ ಇದೆ. ನೋಡೋಣ ಮತದಾರರೇ ಪ್ರಭುಗಳು. ಯಾವ ನಾಯಕರಿಗೆ ಆಶೀರ್ವದಿಸುತ್ತಾರೆ ಅನ್ನೋದರ ಮೇಲೆ ನಿಂತಿದೆ. ಈಗ ಸಂಬಂಧ ಕೆಟ್ಟಿದೆ ಎಂದು ನಾನು ಹೇಳುವುದಿಲ್ಲ. ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಲು ಅವಕಾಶವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಮಾತನಾಡಿದರು.

ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ

ಮಂಡ್ಯ: ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೊಸ ಪಕ್ಷ ಸ್ಥಾಪಿಸಬಹುದು ಎಂದು ಎಲ್ಲರೂ ನಿರೀಕ್ಷೆ ಇಟ್ಟಿದ್ದರು. ಹೊಸ ಪಕ್ಷ ಸ್ಥಾಪನೆಯಿಂದ ಏನು ಬೆಳವಣಿಗೆ ಆಗುತ್ತೋ ನೋಡೋಣ ಎಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಹೆ.ಎಚ್​​.ಕುಮಾರಸ್ವಾಮಿ (HD Kumarswamy) ಮಾತನಾಡಿದ್ದಾರೆ.

ಜನಾರ್ದನ ರೆಡ್ಡಿಗೆ ಶುಭವಾಗಲಿ

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಅವರ ವೈಯಕ್ತಿಕ ವಿಚಾರ. ಜನಾರ್ದನ ರೆಡ್ಡಿಗೆ ಶುಭವಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಬೆಳೆಯಬೇಕು. ರಾಜ್ಯಕ್ಕೆ ರೆಡ್ಡಿ ಸಹ ಸೇವೆ ಮಾಡಲಿ, ಯಾರನ್ನೂ ಟೀಕೆ ಮಾಡಲ್ಲ. ನಾವು ನೀತಿ ಮೇಲೆ ರಾಜಕೀಯ ಮಾಡುವವರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar)  ಶುಭಹಾರೈಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:21 pm, Sun, 25 December 22