Karnataka Rail: ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ಎಕ್ಸಪ್ರೆಸ್ ರೈಲು ಆರಂಭ, ಇಲ್ಲಿದೆ ವೇಳಾಪಟ್ಟಿ

ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ರೈಲು ಸೇವೆ ಆರಂಭಿಸಿದೆ. ರೈಲು ಸಂಚರಿಸುವ ಸಮಯ, ಯಾವ್ಯಾವ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲಿದೆ ವಿವರ.

Karnataka Rail: ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ಎಕ್ಸಪ್ರೆಸ್ ರೈಲು ಆರಂಭ, ಇಲ್ಲಿದೆ ವೇಳಾಪಟ್ಟಿ
ಹುಬ್ಬಳ್ಳಿ ರೈಲು ನಿಲ್ದಾಣ

Updated on: May 16, 2025 | 7:00 PM

ಹುಬ್ಬಳ್ಳಿ, ಮೇ 16: ಉತ್ತರ ಕರ್ನಾಟಕದಲ್ಲಿ (North Karnataka) ರೈಲ್ವೆ ಪ್ರಯಾಣಿಕರ ಹೆಚ್ಚಿನ ಅನುಕೂಲತೆಗಾಗಿ ಮತ್ತು ಮೂಲಭೂತ ಸೌಕರ್ಯದ ಸುಧಾರಣೆಗಾಗಿ ನೈಋತ್ಯ ರೈಲ್ವೆ ವಲಯವು (South Westran Ralway) ಹುಬ್ಬಳ್ಳಿ-ಕುಷ್ಟಗಿ (Hubbali-Kustagi) ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸಪ್ರೆಸ್​ ರೈಲು ಸೇವೆ ಪ್ರಾರಂಭಿಸಿದೆ. ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆಯೊಂದಿಗೆ, ಕುಷ್ಟಗಿ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಪ್ಯಾಸೆಂಜರ್‌ ರೈಲಿಗೆ ಚಾಲನೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.

ಕುಷ್ಟಗಿ – ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ (56 ಕಿಮೀ) ನಡುವಿನ ಪ್ಯಾಸೆಂಜರ್ ರೈಲು ಸೇವೆಯು ಗದಗ ಮತ್ತು ಕೊಪ್ಪಳ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಕೃಷಿ, ಗಣಿಗಾರಿಕೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯವನ್ನು ಸುಧಾರಿಸುತ್ತದೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

ಈ ರೈಲು 2 ಎಸ್ಎಲ್‌ಆರ್/ಡಿ ಮತ್ತು 6 ಸಾಮಾನ ದ್ವಿತೀಯ ದರ್ಜೆ/ಸೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಸಂಚರಿಸಲಿದೆ. ಮಾರ್ಗಮಧ್ಯ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳಿ, ಕುಕನೂರು, ತಳಕಲ್, ಬನ್ನಿಕೊಪ, ಸೋಂಪುರ ರೋಡ್, ಹಳಿಗುಡಿ ಹಾಲ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್‌ ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಇದನ್ನೂ ಓದಿ
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಜೋಶಿ ಎಚ್ಚರಿಕೆ
ಚಿನ್ನಾಭರಣ ಕದ್ದು ಬೇರೆ ಬ್ಯಾಂಕ್​ಗಳಲ್ಲಿ ಅಡವಿಟ್ಟ ಗೋಲ್ಡ್ ಲೋನ್ ಆಫೀಸರ್!
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ರೈಲು ಸಂಖ್ಯೆ 17327: ಎಸ್‌ಎಸ್ಎಸ್‌ ಹುಬಳಿ-ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನು ತಲುಪಲಿದೆ.
ಮಾರ್ಗ ಮಧ್ಯೆ, ರೈಲು ಕುಸುಗಲ್​, ಹೆಬಸೂರ, ಶಿಶ್ತಿನಹಳ್ಳಿ, ಅಣ್ಣಿಗೇರಿ, ಹುಲಕೋಟಿ, ಗದಗ, ಕಣಗಿನಹಾಳ ರೋಡ್​, ಬನ್ನಿಕೊಪ್ಪ, ತಲಕಲ್​, ಕುಕನೂರು, ಸಂಗನಾಳ, ಯಲಬುರ್ಗಾ, ಹನಮಾಪೂರ ಮತ್ತು ಲಿಂಗನಬಂಡಿ ನಿಲ್ದಾಣಗಳಲ್ಲಿ ಆಗಮಿಸಿ/ ನಿರ್ಗಮಿಸಲಿದೆ.

ರೈಲು ಸಂಖ್ಯೆ 17328: ಕುಷ್ಟಗಿ- ಎಸ್ಎಸ್ಎಸ್ ಹುಬಳ್ಳಿ, ದೈನಂದಿನ ಎಕ್ಸ್‌ಪ್ರೆಸ್ ರೈಲು ಕುಷ್ಟಗಿಯಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 10:40 ಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣ ತಲಪುತ್ತದೆ. ಲಿಂಗನಬಂಡಿ , ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಲಕಲ್​, ಬನ್ನಿಕೊಪ್ಪ, ಹಳ್ಳಿಗುಡಿ ಹಾಲ್ಸ್​, ಹರ್ಲಾಪುರ, ಕಣಗಿನಹಾಳ, ಶಿಶ್ತಿನಹಳ್ಳಿ, ಹೆಬಸೂರ ಮತ್ತು ಕುಸುಗಲ್​ ನಿಲ್ದಾಣಗಳಲ್ಲಿ ಆಗಮಿಸಿ ಮತ್ತು ನಿರ್ಗಮಿಸಲಿದೆ.

ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಧಾರವಾಡ ಜಿಲ್ಲೆಗೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!

ಈ ರೈಲುಗಳು ಒಟ್ಟು 11 ಬೋಗಿಗಳನ್ನು ಹೊಂದಿವೆ. ಅವುಗಳಲ್ಲಿ 9 ಸಾಮಾನ ದ್ವಿತೀಯ ದರ್ಜೆಯ ಮತ್ತು 2 ದ್ವಿತೀಯ ದರ್ಜೆಯ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್‌ಗಳು/ದಿವ್ಯಾಂಗರಿಗಾಗಿ ಬೋಗಿಗಳನ್ನು ಮೀಸಲು ಇರಿಸಲಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Fri, 16 May 25