ಬಾಕ್ಸಿಂಗ್ ಆಡುವಾಗ ಕೋಮಾಗೆ ಜಾರಿದ್ದ ಯೋಧ ಇನ್ನಿಲ್ಲ

ಧಾರವಾಡ: ಆತ ಇನ್ನೂ ಚಿಗುರು ಮೀಸೆ ಹುಡ್ಗ. ಆದ್ರೆ ಆತನಿಗೆ ಸೈನ್ಯ ಅಂದ್ರೆ ಎಲ್ಲಿಲ್ಲದ ಹುಚ್ಚು ಇತ್ತು. ಕೊನೆಗೇ ಸೈನ್ಯಕ್ಕೆ ಸೇರಿಯೇ ಬಿಟ್ಟ. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು. ತಾಯಿ ರೋದನೆ ಕರುಳು ಕಿತ್ತು ಬರುವಂತಿದೆ. ತಂದೆಯ ಗೋಳಾಟ ಮನ ಕಲಕುತ್ತಿದೆ. ನೆರೆದವ್ರ ಕಣ್ಣಾಲಿಗಳು ಒದ್ದೆಯಾಗಿವೆ. ಇಡೀ ಊರಿಗೆ ಊರೇ ಕಂಬನಿ ಮಿಡೀತಿದೆ. ಸೇನೆ ಅಂದ್ರೆ ಪ್ರೀತಿ. ದೇಶದ ಕಾಯೋದು ಅಂದ್ರೆ ಹೆಮ್ಮೆ. ಇದೇ ಹಠ. ಇದೇ ಛಲದಿಂದ ಮಹೇಶ್ ಸಿಂಗನಳ್ಳಿ ಅನ್ನೋ ಯುವಕ ಸೈನ್ಯಕ್ಕೆ […]

ಬಾಕ್ಸಿಂಗ್ ಆಡುವಾಗ ಕೋಮಾಗೆ ಜಾರಿದ್ದ ಯೋಧ ಇನ್ನಿಲ್ಲ
Follow us
ಸಾಧು ಶ್ರೀನಾಥ್​
|

Updated on: Feb 25, 2020 | 7:13 PM

ಧಾರವಾಡ: ಆತ ಇನ್ನೂ ಚಿಗುರು ಮೀಸೆ ಹುಡ್ಗ. ಆದ್ರೆ ಆತನಿಗೆ ಸೈನ್ಯ ಅಂದ್ರೆ ಎಲ್ಲಿಲ್ಲದ ಹುಚ್ಚು ಇತ್ತು. ಕೊನೆಗೇ ಸೈನ್ಯಕ್ಕೆ ಸೇರಿಯೇ ಬಿಟ್ಟ. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು.

ತಾಯಿ ರೋದನೆ ಕರುಳು ಕಿತ್ತು ಬರುವಂತಿದೆ. ತಂದೆಯ ಗೋಳಾಟ ಮನ ಕಲಕುತ್ತಿದೆ. ನೆರೆದವ್ರ ಕಣ್ಣಾಲಿಗಳು ಒದ್ದೆಯಾಗಿವೆ. ಇಡೀ ಊರಿಗೆ ಊರೇ ಕಂಬನಿ ಮಿಡೀತಿದೆ.

ಸೇನೆ ಅಂದ್ರೆ ಪ್ರೀತಿ. ದೇಶದ ಕಾಯೋದು ಅಂದ್ರೆ ಹೆಮ್ಮೆ. ಇದೇ ಹಠ. ಇದೇ ಛಲದಿಂದ ಮಹೇಶ್ ಸಿಂಗನಳ್ಳಿ ಅನ್ನೋ ಯುವಕ ಸೈನ್ಯಕ್ಕೆ ಸೇರಿದ್ದ. 20 ವರ್ಷಕ್ಕೆ ಅಂದುಕೊಂಡಿದ್ದನ್ನ ಸಾಧಿಸಿದೇ ಅಂತಾ ಖುಷಿಯ ಅಲೆಯಲ್ಲಿ ತೇಲಾಡಿದ. ಹೆಮ್ಮೆಯಿಂದ ಎದೆಯುಬ್ಬಿಸಿ ನಡೆದ. ಕಳೆದ ವರ್ಷ ಡಿಸೆಂಬರ್​ನಲ್ಲಿ ನಾಗ್ಪುರ ತರಬೇತಿ ಕೇಂದ್ರಕ್ಕೆ ಹೋಗಿದ್ದ ಮಹೇಶ್ ಜಸ್ಟ್ ಎರಡೇ ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಾನೆ. ಇದ್ರಿಂದ ಧಾರವಾಡ ತಾಲೂಕಿನ ನಿಗದಿ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿದೆ.

ಅಂದ್ಹಾಗೇ, ನಾಗ್ಪುರ ಟ್ರೈನಿಂಗ್ ಸೆಂಟರ್​ನಲ್ಲಿ ಬಾಕ್ಸಿಂಗ್ ಆಡುವಾಗ ಮಹೇಶ್ ತಲೆಗೆ ಪೆಟ್ಟು ಬಿದ್ದಿತ್ತಂತೆ. ಇದ್ರಿಂದ ಮಹೇಶ್ ಕೋಮಾಗೆ ಜಾರಿದ್ರಂತೆ. ಕೂಡಲೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಕುಟುಂಬಸ್ಥರು ಹೋಗಿ ನೋಡ್ಕೊಂಡು ಬಂದ್ರು. ಆದ್ರೆ ಚಿಕಿತ್ಸೆ ಫಲಿಸದೇ ಮಹೇಶ್ ಕೊನೆಯುಸಿರೆಳೆದಿದ್ದಾನೆ.

ಬಳಿಕ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ತಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಹೀಗಾಗಿ ಬಡತನದಲ್ಲಿರೋ ಮಹೇಶ್ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಲಿ ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಒಟ್ನಲ್ಲಿ ಸೈನ್ಯಕ್ಕೆ ಸೇರಿ ಎಲ್ರೂ ಹೆಮ್ಮೆ ಪಡೋ ಥರ ಕೆಲ್ಸ ಮಾಡ್ಬೇಕು ಅನ್ಕೊಂಡಿದ್ದ ಯುವಕನ ಕನಸು ಕನಸಾಗಿಯೇ ಹೋಯ್ತು. ಕೇವಲ ಎರಡೇ ತಿಂಗಳಿಗೆ ಯೋಧ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದು ಮಾತ್ರ ನೋವಿನ ಸಂಗತಿ.