ಧಾರವಾಡ: ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನ ಕಳ್ಳತನವಾಗಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆ ಎದುರು ನಡೆದಿದೆ. ನಾಗಪ್ಪ ಹಡಪದ ಎಂಬ ವ್ಯಕ್ತಿ ಪೊಲೀಸ್ ವಾಹನ ಎಗರಿಸಿಕೊಂಡು ಪೊಲೀಸ್ ವಾಹನದಲ್ಲಿ ಬ್ಯಾಡಗಿವರೆಗೂ ಹೋಗಿದ್ದಾರೆ. ಸದ್ಯ ಪೊಲೀಸರು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ವಾಹನ ಪತ್ತೆ ಹಚ್ಚಿ ಆರೋಪಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಣ್ಣಿಗೇರಿ ಪಟ್ಟಣದ ಅಂಬಿಕಾ ನಗರ ನಿವಾಸಿ ನಾಗಪ್ಪ ಹಡಪದ ಎಂಬುವವರು ಪೊಲೀಸ್ ಠಾಣೆಯ ಕೆಲಸಕ್ಕೆ ಬಳಸುತ್ತಿದ್ದ ಬೊಲೆರೋ ವಾಹನದೊಂದಿಗೆ ಬ್ಯಾಡಗಿವರೆಗೂ ಹೋಗಿದ್ದಾರೆ. ಸಿಬ್ಬಂದಿ ವಾಹನ ಬಳಸಿ ವಾಹನದಲ್ಲೇ ಕೀ ಬಿಟ್ಟಿದ್ದರು. ಇದನ್ನು ಗಮನಿಸಿದ ನಾಗಪ್ಪ ಹಡಪದ ವಾಹನವನ್ನು ತೆಗೆದುಕೊಂಡು ಬ್ಯಾಡಗಿವರೆಗೆ ಹೋಗಿದ್ದಾರೆ. ಸದ್ಯ ತಕ್ಷಣ ಎಚ್ಚೆತ್ತ ಪೊಲೀಸರು ವಾಹನವನ್ನು ಹಿಂಬಾಲಿಸಿ ವಾಹನ ಸಮೇತ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕಳ್ಳತನವಾಗಿದ್ದ ವಾಹನವನ್ನು ನಿತ್ಯ ಬೆಳಗ್ಗೆ ರೌಂಡ್ಸ್ ಹೋಗಲು ಬಳಸುತ್ತಿದ್ದರು.
ಬೆಳಗಾವಿ ಉದ್ಯಮಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಉದ್ಯಮಿ ವಿರುದ್ಧ 2 ಕೋಟಿ ವಂಚನೆ ಆರೋಪ
ಬೆಳಗಾವಿ: ಜಿಲ್ಲೆಯಲ್ಲಿ ನಡೆದ ಉದ್ಯಮಿ ಕಿಡ್ನಾಪ್ (Kidnap) ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಡ್ನಾಪ್ ಪ್ರಕರಣಕ್ಕೂ, ಬಿಟ್ ಕಾಯಿನ್ (bitcoin) ದಂಧೆಗೂ ಸಂಬಂಧವಿದೆಯಾ ಎಂಬ ಅನುಮಾನ ಮೂಡಿದ್ದು, ಕಿಡ್ನಾಪ್ ಆಗಿದ್ದ ಉದ್ಯಮಿ ರವಿಕಿರಣ್ ಭಟ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರದ (Maharashtra) ಸಾಂಗ್ಲಿಯ ಖಾಸಗಿ ಬ್ಯಾಂಕ್ನ ಮಾಜಿ ಮ್ಯಾನೇಜರ್ ಆರೋಪಿಸಿ, ಎರಡು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಉದ್ಯಮಿ ರವಿಕಿರಣ್ ಭಟ್ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿ ಹಣ ದ್ವಿಗುಣ ಮಾಡಿಕೊಡುತ್ತೇನೆ ಅಂತಾ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಹಾರಾಷ್ಟ್ರದ ಸಾಂಗ್ಲಿಯ ಕರಮಾಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೇ ಕಿಡ್ನಾಪ್ ಮಾಡಿದ್ದ ಪ್ರಮುಖ ಆರೋಪಿಗಳು ಸಾಂಗ್ಲಿ ಮೂಲದವರು. ಆದರೆ ಘಟನೆ ನಡೆದು ಹದಿನೈದು ದಿನ ಕಳೆದರೂ ಆರೋಪಿಗಳ ಸುಳಿವಿಲ್ಲ.
ಸಾಂಗ್ಲಿಯ ಶಹನವಾಜ್ ಚಮನಶೇಖ್, ಅಜ್ಜು ಚಮನಶೇಖ್, ಅಭಿಷೇಕ ಶೆಟ್ಟಿ ಹಾಗೂ ಬೆಳಗಾವಿಯ ಯೂನೂಸ್ ಖಾಜಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ಪ್ರಮುಖ ಆರೋಪಿ ಶಹನವಾಜ್ ಹಾಗೂ ಉದ್ಯಮಿ ರವಿಕಿರಣ್ ಭಟ್ ಇಬ್ಬರೂ ಪರಿಚಯಸ್ಥರು. ರವಿಕಿರಣ್ಗೆ ರಾಜ್ಯದಲ್ಲಿ ಪ್ರಭಾವಿ ನಾಯಕರ ಸಂಪರ್ಕ ಇರುವ ಹಿನ್ನೆಲೆ ಪೊಲೀಸರು ರವಿಕಿರಣ್ ಭಟ್ನ ವಿಚಾರಣೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಉದ್ಯಮಿ ರವಿಕಿರಣ್ ಭಟ್ ಅಪಹರಣ ಪ್ರಕರಣ ಸುತ್ತ ಹಲವು ಸಂಶಯಗಳು ಮೂಡಿವೆ.
ಇದನ್ನೂ ಓದಿ: ಬೆಳಗಾವಿ ಉದ್ಯಮಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಉದ್ಯಮಿ ವಿರುದ್ಧ 2 ಕೋಟಿ ವಂಚನೆ ಆರೋಪ
Published On - 8:55 am, Wed, 2 February 22