ಸಾಕ್ಷ್ಯ ನಾಶಕ್ಕೆ ಐಷರಾಮಿ ಕಾರನ್ನೇ ಸುಟ್ಟು ಹಾಕಿದ ಕಳ್ಳರು: ಗುಂಡಿಕ್ಕಿ ದರೋಡೆಕೋರರನ್ನ ಹಿಡಿದ ಪೊಲೀಸ್ರು

ಹುಬ್ಬಳ್ಳಿಯಲ್ಲಿ ಪೊಲೀಸರು ಅಂತರ್ ರಾಜ್ಯ ದರೋಡೆಕೋರರ ಗ್ಯಾಂಗ್ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ದರೋಡೆಕೋರರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆ ಮೂಲಕ ಶೋಕಿ ಜೀವನ ನಡೆಸುತ್ತಿದ್ದ ದರೋಡೆಕೋರರ ಹೆಡೆಮುರಿಕಟ್ಟಿದ್ದಾರೆ. ಈ ಗ್ಯಾಂಗ್ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ದರೋಡೆಗಳಲ್ಲಿ ಭಾಗಿಯಾಗಿದೆ.

ಸಾಕ್ಷ್ಯ ನಾಶಕ್ಕೆ ಐಷರಾಮಿ ಕಾರನ್ನೇ ಸುಟ್ಟು ಹಾಕಿದ ಕಳ್ಳರು: ಗುಂಡಿಕ್ಕಿ ದರೋಡೆಕೋರರನ್ನ ಹಿಡಿದ ಪೊಲೀಸ್ರು
ಸಾಕ್ಷ್ಯ ನಾಶಕ್ಕೆ ಐಷರಾಮಿ ಕಾರನ್ನೇ ಸುಟ್ಟು ಹಾಕಿದ ಕಳ್ಳರು: ಗುಂಡಿಕ್ಕಿ ದರೋಡೆಕೋರರನ್ನ ಹಿಡಿದ ಪೊಲೀಸ್ರು
Updated By: ಗಂಗಾಧರ​ ಬ. ಸಾಬೋಜಿ

Updated on: Mar 15, 2025 | 4:48 PM

ಹುಬ್ಬಳ್ಳಿ, ಮಾರ್ಚ್​ 15: ನಗರದಲ್ಲಿ ಪೊಲೀಸರ ಗನ್ (shootout)​ ಮತ್ತೆ ಸದ್ದು ಮಾಡಿದೆ. ಈ ಬಾರಿ‌ ಪೊಲೀಸರು (police) ಫುಲ್ ಹೈಫೈ ದರೋಡೆಕೋರಿಗೆ ಟಾರ್ಗೆಟ್ ಮಾಡಿದ್ದಾರೆ. ಐದು ರಾಜ್ಯಕ್ಕೆ ಬೇಕಾಗಿರುವ ಈ ದರೋಡೆಕೋರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ಇನ್ನೂ ಸಾಕ್ಷಿ ನಾಶ ಮಾಡಲು ಈ ದರೋಡೆಕೋರರು ಎಂತಹ ಮಟ್ಟಕ್ಕಿಳುತ್ತಾರೆ ಗೊತ್ತಾ? ಈ ನಟೋರಿಯಸ್ ದರೋಡೆಕೋರರ ಭಯಾನಕ ಸ್ಟೋರಿ ಇಲ್ಲಿದೆ. ಮುಂದೆ ಓದಿ.

ಹುಬ್ಬಳ್ಳಿಯಲ್ಲಿ ಪೊಲೀಸರು ಗನ್ ಮತ್ತೆ ಸದ್ದು ಮಾಡಿದೆ. ಪೊಲೀಸ್ ಮೇಲೆಯೇ ಹಲ್ಲೆ ಮಾಡಿ ಕಾರದಪುಡಿ ಎರಚಿ ಎಸ್ಕೇಪ್ ಆಗಲು ಪ್ರಯತ್ನಿಸಿದ ದರೋಡೆಕೋರ ಮೇಲೆ ಹುಬ್ಬಳ್ಳಿ ಸಬ್ ಅರ್ಬನ್ ಠಾಣೆಯ ಪೊಲೀಸರು ಒಟ್ಟು ಏಂಟು ಸತ್ತು ಗುಂಡು ಹಾರಸಿದ್ದಾರೆ. ಈ ಪ್ರಕರಣದ ಹಿಂದಿರುವ ಭಯಾನಕತೆಯನ್ನು ಪೊಲೀಸ್ ಕಮಿಷನರ್ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಗುಂಡುಹಾರಿಸಿ ಕುಖ್ಯಾತ ಅಂತರರಾಜ್ಯ ಕಳ್ಳರ ಗ್ಯಾಂಗ್ ಬಂಧಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸರು

ಇದನ್ನೂ ಓದಿ
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಪ್ಲಾಸ್ಟಿಕ್ ಮುಕ್ತ ಗ್ರಾಮಗಳು: ಕ್ಯಾನ್ಸರ್ ತಡೆಗೆ ಒಂದು ದಿಟ್ಟ ಹೆಜ್ಜೆ
ಹುಬ್ಬಳ್ಳಿಯಲ್ಲಿ ನಕಲಿ ಆಹಾರ ಇಲಾಖೆ ಅಧಿಕಾರಿಗಳ ಹಾವಳಿ: ಇಬ್ಬರ ಬಂಧನ
ನಮ್ಮ‌‌ ಕುಟುಂಬದವರೇ ಆಗಿರಲಿ ಅಂತವರನ್ನ ಕ್ಷಮಿಸಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ

ಮಾರ್ಚ್​ 1 ರಂದು ಸಭಾಪತಿ ಬಸವರಾಜ ಹೊರಟ್ಟಿ ನಿವಾಸದ ಬಳಿಯ ಅಪಾರ್ಟ್ಮೆಂಟ್​ನಲ್ಲಿ ಸುಮಾರು 20 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು. ಈ ಹಿಂದೆ ವಿದ್ಯಾಗಿರಿ, ಧಾರವಾಡ ಶಹರ, ಕೇಶ್ವಾಪುರ ಠಾಣೆಯಲ್ಲಿ ಇದೆ ಮಾದರಿಯಲ್ಲಿ ದರೋಡೆ ಪ್ರಕರಣಗಳ ನಡೆದಿರುವುದು ಕಂಡು ಬಂದಿತ್ತು. ಇದನ್ನು ಹುಡುಕಲು ಹೊರಟಾಗ ಈ ಗ್ಯಾಂಗ್ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆಕ್ಟೀವ್ ಆಗಿರುವುದು ಪೊಲೀಸರಿಗೆ ಸುಳಿವು ಸಿಕ್ಕಿತ್ತು.

ಈ ದರೋಡೆಕೋರನನ್ನು ಟ್ರ್ಯಾಕ್ ಮಾಡಿದಾಗ ಶಿವಮೊಗ್ಗದಲ್ಲಿ ಇರುವುದು ಕಂಡುಬಂದಿದೆ. ನಂತರ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಲಭ್ಯವಾಗಿದೆ. ಅದರಂತೆ ಖಾಕಿ ಪಡೆ‌ ಈ ದರೋಡೆಕೋರಿಗೆ ಬಲೆ ಬೀಸಿತ್ತು. ಪೊಲೀಸರು ಕಾದು ಕುಳಿತ್ತಿದ್ದರು. ಅದರಂತೆ ಹುಬ್ಬಳ್ಳಿಯಲ್ಲಿ ಮಾರುತಿ ಎನ್ನುವರರ ಮೇಲೆ ಹಲ್ಲೆ ಮಾಡಿದ ಈ ತಂಡ, ಬೈಕ್ ಕಸಿದುಕೊಂಡು ಪರಾರಿಯಾಗಿದ್ದರು. ದರೋಡೆಕೋರು ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳ ಸಮೀಪದಲ್ಲಿ ಅಡಗಿಕುಳಿತ್ತಿರುವುದು ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು.

ಆರೋಪಿಗಳ ಕಾಲಿಗೆ ನಾಲ್ಕು ಸುತ್ತು ಗುಂಡು

ಈ ವೇಳೆ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಕಾರದಪುಡಿ ಎರಚಿ ಪರಾರಿಯಾಗಲು ಪ್ರಯತ್ನಿಸಿದ್ದರು. ಹೀಗಾಗಿ ಆತ್ಮ ರಕ್ಷಣೆಗಾಗಿ ಪೊಲೀಸರು ನಾಲ್ಕು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ, ಬಳಿಕ ಇಬ್ಬರು ದರೋಡೆಕೋರರಾದ ಇರ್ಷಾದ್, ಅಕ್ಬರ್ ಎಂಬುವವರ ಕಾಲಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ದಾಳಿ ವೇಳೆಯಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದ. ಘಟನೆಯಲ್ಲಿ ಪಿಎಸ್​ಐ ದೇವೇಂದ್ರ ಮಾವಿನದಂಡಿ, ಸಿಬ್ಬಂದಿ ದ್ಯಾನೇಶ್, ಆನಂದ ಜಾವೂರಗೆ ಗಾಯಗಳಾಗಿವೆ. ಆರೋಪಿಗಳು ಮತ್ತು ಸಿಬ್ಬಂದಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.

ಶೋಕಿ ಜೀವನ ನಡೆಸುತ್ತಿದ್ದ ದರೋಡೆಕೋರರು  

ಇನ್ನೂ ಪೊಲೀಸ್ ದಾಳಿ ವೇಳೆಯಲ್ಲಿ ಪರಾರಿಯಾಗಿದ್ದ ಶಂಷಾದ್ ಕುರೇಶಿ ಜಾಡು ಬೆನ್ನು ಹತ್ತಿ ಹೊರಟ ಪೊಲೀಸರಿಗೆ ಕೆಲ ಹೊತ್ತಿನ ಬಳಿಕ ಆತನು ಸಹ ಸಿಕ್ಕಿದ್ದಾನೆ. ಇತನನ್ನು ವಿಚಾರಣೆ ಮಾಡಿದಾಗ ಭಯಾನಕ ಸತ್ಯ ಹೊರ ಬಿದ್ದಿದೆ. ಆರೋಪಿಗಳು ತಮ್ಮ ದರೋಡೆ ಬಳಸುತ್ತಿದ್ದ ಐಷಾರಾಮಿ ಕಾರ್​​ನ್ನೆ ಹುಬ್ಬಳ್ಳಿ ಹೈವೆ ಪಕ್ಕದಲ್ಲಿ ಸುಟ್ಟುಹಾಕಿದ್ದಾರೆ. ಅಲ್ಲದೆ ಸುಮಾರು 10 ರಿಂದ 15 ಸದಸ್ಯರು ಇರುವ ಈ ತಂಡ, ಶೋಕಿ ಜೀವನ ನಡೆಸುತ್ತಿದೆ. ದೊಡ್ಡ ದೊಡ್ಡ ಕಾರ್​ನಲ್ಲಿ ಸುತ್ತಾಡೋದು, ಪ್ರತಿಷ್ಠಿತ ಹೋಟೆಲ್​​ಗಳಲ್ಲಿ ದರೋಡೆಕೋರರು ಉಳಿದುಕೊಳ್ಳುತ್ತಿದ್ದರು.

ಪ್ರಮುಖ ನಗರದಲ್ಲಿನ ಶ್ರೀಮಂತರು ಹೆಚ್ಚಾಗಿರುವ ಏರಿಯಾಗಳಲ್ಲಿ ಓಡಾಟ ಮಾಡಿ, ಕಳ್ಳತನ ಮಾಡುವ ಮನೆ ಗುರುತಿಸಿ ಬಳಿಕ ಪ್ಲಾನ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ, ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಆರೋಪಿಗಳು, ಕರ್ನಾಟಕ, ಆಂಧ್ರಪ್ರದೇಶದ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯದ ಪೊಲೀಸರಿಗೂ ಸಹ ಬೇಕಾಗಿದ್ದಾರೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹುಬ್ಬಳ್ಳಿಯ ರಾಯನಾಳ ಬಳಿ ಕಾರ ಸುಟ್ಟು ಹಾಕಿದ್ದಾರೆ‌.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಕಲಿ ಆಹಾರ ಇಲಾಖೆ ಅಧಿಕಾರಿಗಳ ಹಾವಳಿ: ಇಬ್ಬರ ಬಂಧನ

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರು ಅಂತರ್ ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ದರೋಡೆಕೋರರಿಗೆ ಹೆಡೆಮುರಿ ಕಟ್ಟಿದ್ದು, ದಾಳಿ ವೇಳೆ ಗಾಯಗೊಂಡಿರುವ ಪೊಲೀಸರು ಆದಷ್ಟು ಬೇಗ ಚೇತರಿಸಿಕೊಳ್ಳಲಿ‌ ಎನ್ನುವುದು ಹುಬ್ಬಳ್ಳಿ ಜನರ ಪ್ರಾರ್ಥನೆಯಾಗಿದೆ.

‌ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.