Hescom: ಧಾರವಾಡದಲ್ಲಿ ಇಂದು ಬೆಳಿಗ್ಗೆ 9 ಗಂಟೆಯಿಂದ ವಿದ್ಯುತ್ ಕಡಿತ
ನ.22ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಬೆಳಗ್ಗೆ 9ರಿಂದ 4ರವರೆಗೆ ಅನೇಕ ಕಡೆ ವಿದ್ಯುತ್ ನಿಲುಗಡೆ ಆಗಲಿದೆ.
ಧಾರವಾಡ: ಜಿಲ್ಲೆಯ 110 ಕೆ.ವಿ. ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ.22ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಬೆಳಗ್ಗೆ 9ರಿಂದ 4ರವರೆಗೆ ಅನೇಕ ಕಡೆ ವಿದ್ಯುತ್ ನಿಲುಗಡೆ ಆಗಲಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸುತ್ತೋಲೆ ಹೊರಡಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಮುರುಘಾಮಠ, ಮದಿಹಾಳ, ಪತ್ತೇಶ್ವರನಗರ, ರಾಜನಗರ, ಹಾವೇರಿಪೇಟ, ನಿಜಾಮುದ್ದೀನ್ ಕಾಲನಿ, ಸವದತ್ತಿ ರಸ್ತೆ, ಕಾಮನಕಟ್ಟಿ, ಚರಂತಿಮಠ ಗಾರ್ಡನ್, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಕಾರ್ಪೋರೇಶನ್ ವೃತ್ತ, ಗಾಂಧಿಚೌಕ್, ಸೂಪರ್ ಮಾರ್ಕೆಟ್, ಸುಭಾಸ ರಸ್ತೆ, ಶಿವಾಜಿ ರಸ್ತೆ, ಮರಾಠಾ ಕಾಲನಿ, ಜ್ಯುಬಿಲಿ ವೃತ್ತ, ಭಾರತ ಹೈಸ್ಕೂಲ್, ಮಾರ್ಕೆಟ್, ಕಮಲಾಪುರ, ಕಲಾಭವನ, ಕರಡಿಗುಡ್ಡ, ವಿದ್ಯಾರಣ್ಯ, ಮರೇವಾಡ ಜಿನ್ನಿಂಗ್ ಫ್ಯಾಕ್ಟರಿ, ವನಹಳ್ಳಿ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, 33 ಕೆವಿ ಉಪ್ಪಿನ ಬೆಟಗೇರಿ, ಮುಕ್ತಿಧಾಮ, ಕೊಳಿಕೇರಿ, ಪೆಂಡಾರ ಓಣಿ, ದರ್ಗಾ ಓಣಿ, ರವಿವಾರಪೇಟ, ಶುಕ್ರವಾರಪೇಟ, ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ, ಭಾರಾ ಇಮಾಮ್ ಗಲ್ಲಿ.
ಇದನ್ನೂ ಓದಿ: ಪರಿಸರ ಸ್ನೇಹಿ ಮೂಲಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ನಂ 1: ಆರ್ಬಿಐ ವರದಿ
ಕಂಪ್ಲಿ ಬಸವೇಶ್ವರನಗರ, ಗೋವನಕೊಪ್ಪ ಐ.ಪಿ, ಏರಿಯಾ, ಕೆಲಗೇರಿ ವಿನಾಯಕನಗರ, ಶಾಂತಿ ಕಾಲನಿ, ಲೈನ್ ಬಜಾರ್, ಕೆಂಪಗೇರಿ, ವನಿತಾ ಸೇವಾ ಸಮಾಜ, ರಾಮನಗರ, ಮಾರುತಿ ದೇವಸ್ಥಾನ, ಕಿಟೆಲ್ ಕಾಲೇಜ್, ಕಾಸ್ಮಸ್ ಕ್ಲಬ್, ಜನ್ನತ್‌ನಗರ, ಆಜಾದ ಪಾರ್ಕ್ ರಸ್ತೆ, ಸೌಧಾಗರ ಚಾಳ, ಹಳೇ ಬಸ್‌ನಿಲ್ದಾಣ, ಸಿಬಿಟಿ, ವಿಜಯಾ ಟಾಕೀಸ್, ಅಂಜುಮನ್ ಕಾಲೇಜ್, ಲಕಮಾಪುರ, ಮುಳಮುತ್ತಲ, ಮರೇವಾಡ, ತಿಮ್ಮಾಪುರ, ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ, ವನಹಳ್ಳಿ, ಹಾತ್ಮನಗರ, ಹೆಬ್ಬಳ್ಳಿ ಫಾರ್ಮ್, ನವಲೂರ ಅಗಸಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:50 am, Tue, 22 November 22