Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಾದರೂ ಮಾಡಿ ಕನ್ಯೆ ಸಿಗುವಂತೆ ಮಾಡಿ, ಮದುವೆ ಭಾಗ್ಯ ಕರುಣಿಸಿ; ತಹಶೀಲ್ದಾರ್ ಬಳಿ ಧಾರವಾಡ ಯುವ ರೈತರ ಮನವಿ

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಸಮಯದಲ್ಲಿ ಯುವ ರೈತರು ಅಪರೂಪದ ಬೇಡಿಕೆ ಇಟ್ಟಿದ್ದಾರೆ. ಅವರಯ ಮದುವೆಯಾಗಲು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಮನವಿ ಪತ್ರ ಬರೆದು ತಹಶೀಲ್ದಾರ್​ರಿಗೆ ನೀಡಿದ್ದಾರೆ.

ಹೇಗಾದರೂ ಮಾಡಿ ಕನ್ಯೆ ಸಿಗುವಂತೆ ಮಾಡಿ, ಮದುವೆ ಭಾಗ್ಯ ಕರುಣಿಸಿ; ತಹಶೀಲ್ದಾರ್ ಬಳಿ ಧಾರವಾಡ ಯುವ ರೈತರ ಮನವಿ
ಹೇಗಾದರೂ ಮಾಡಿ ಕನ್ಯೆ ಸಿಗುವಂತೆ ಮಾಡಿ, ಮದುವೆ ಭಾಗ್ಯ ಕರುಣಿಸಿ; ತಹಶೀಲ್ದಾರ್ ಬಳಿ ಧಾರವಾಡ ಯುವ ರೈತರ ಮನವಿ
Follow us
TV9 Web
| Updated By: ಆಯೇಷಾ ಬಾನು

Updated on:Nov 22, 2022 | 12:47 PM

ಹುಬ್ಬಳ್ಳಿ: ರೈತ ಈ ದೇಶದ ಬೆನ್ನೆಲುಬು(Farmers). ಹೆಸರನ್ನ ಬಯಸದೆ, ಗೌರವಕ್ಕಾಸಿಸದೆ ದುಡಿಯುವ ಜಗದ ಏಕೈಕ ಜೀವಿ. ಇಡೀ ಮಾನವ ಕುಲಕ್ಕೆ ಅನ್ನವನಿಟ್ಟು ಸಾಕಿ ಸಲಹುತ್ತಿರುವ ರೈತರ ವರ್ಗಕ್ಕೆ ಈಗ ಆತಂಕ ಶುರುವಾಗಿದೆ. ಪರರ ಬದುಕನ್ನು ಹಸನಾಗಿಸುವ ರೈತರಿಗೆ ಈಗ ಕನ್ಯೆ ಸಿಗುತ್ತಿಲ್ಲ(Bride). ಮದುವೆ(Marriage) ವಯಸ್ಸು ಮುಗಿಯುತ್ತಾ ಬಂದರೂ ಇನ್ನೂ ಹುಡುಗಿ ಮಾತ್ರ ಗಗನಕುಸುಮವಾಗಿದ್ದಾಳೆ. ಕನ್ಯೆಯ ಸಲುವಾಗಿ ಧಾರವಾಡ ಜಿಲ್ಲೆಯ ಯುವ ರೈತರು ತಹಶೀಲ್ದಾರ್ ಮೊರೆ ಹೋಗಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ಯುವ ರೈತರು, ಬೇರೆಯವರ ಕೈ ಕೆಳಗೆ ಆಳಾಗಿ ದುಡಿಯುವುದಕ್ಕಿಂತ, ಸ್ವಾಭಿಮಾನದಿಂದ ಬದುಕಬೇಕು. ನಾಲ್ಕು ಜನಕ್ಕೆ ಅನ್ನಹಾಕಬೇಕು ಅಂತ ಕೃಷಿಯಲ್ಲಿ ಜೀವನ ಕಟ್ಟಿಕೊಂಡವರು. ಈಗ ಇದೇ ಇವರಿಗೆ ಶಾಪವಾಗಿ ಪರಿಣಮಿಸಿದೆ. ‌ಮದುವೆ ವಯಸ್ಸು ದಾಟುತ್ತಾ ಬಂದ್ರೂ ರೈತರು ಅನ್ನುವ ಒಂದೇ ಒಂದು ಕಾರಣಕ್ಕಾಗಿ ಇವರಿಗೆ ಹುಡುಗಿ ಸಿಕ್ತಿಲ್ಲ. ಇದರಿಂದ ರೋಸಿ ಹೋಗಿರುವ ಈ ಯುವ ರೈತರು ಸರ್ಕಾರದ ಕಡೆ ಮುಖಮಾಡಿದ್ದಾರೆ.

ಮದುವೆಗಾಗಿ ತಹಶೀಲ್ದಾರ್ ಬಳಿ ಯುವ ರೈತರ ಮನವಿ

ಕಂದಾಯ ಇಲಾಖೆಯನ್ನು ಮನೆ-ಮನೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಸಮಯದಲ್ಲಿ ಯುವ ರೈತರು ಅಪರೂಪದ ಬೇಡಿಕೆ ಇಟ್ಟಿದ್ದಾರೆ. ಹೊಸಳ್ಳಿಯಲ್ಲಿ ನಡೆದ ತಹಶೀಲ್ದಾರ್ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವ ರೈತರು, ತಾವು ಮದುವೆಯಾಗಲು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಮನವಿ ಪತ್ರ ಬರೆದು ತಹಶೀಲ್ದಾರ್​ರಿಗೆ ನೀಡಿದ್ದಾರೆ. ನಾವು ರೈತರ ಮಕ್ಕಳು. ದೇಶವನ್ನು ಕಾಯುವ ಸೈನಿಕ ದೇಶದ ರಕ್ಷಣೆ ಮಾಡುತ್ತಾನೆ. ಅದರಂತೆ ನಾವು ದೇಶದ ಜನತೆ ಅನ್ನವಿನಿಟ್ಟು ಅವರ ಹಸಿವನ್ನು ನೀಗಿಸುತ್ತೇವೆ. ಬದುಕಿಗಾಗಿ ಕೃಷಿಯನ್ನು ಅವಲಂಬಿಸಿರುವ ನಮಗೆ ರೈತರು ಎನ್ನುವ ಕಾರಣಕ್ಕೆ ಹುಡುಗಿಯನ್ನು ಕೊಡುತ್ತಿಲ್ಲ. ಕೇವಲ ನೌಕರಿದಾರರಿಗೆ ಹುಡುಗಿ ನೀಡಲು ಹೆಣ್ಣುಹೆತ್ತವರು ಮುಂದಾಗುತ್ತಿದ್ದಾರೆ. ಇದರಿಂದ ನಮ್ಮ ಆತ್ಮ ಸ್ಥೈರ್ಯ ಕುಗ್ಗುತ್ತಿದೆ. ದಯವಿಟ್ಟು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಹೆಣ್ಣು ಮಕ್ಕಳ ಪಾಲಕರಿಗೆ ಜಾಗೃತಿ ಮೂಡಿಸಿ, ರೈತಾಪಿ ವರ್ಗಗಳ ಕುಟುಂಬಗಳಿಗೆ ಕನ್ಯೆ ಸಿಗುವಂತೆ ಮಾಡಬೇಕು ಅಂತ ಮನವಿ ಪತ್ರದಲ್ಲಿ ರೈತರು ಬೇಡಿಕೆಯನ್ನಿಟ್ಟಿದ್ದಾರೆ.

Dharwad Young Farmers

ಸರ್ಕಾರದ ಗಮನಕ್ಕೆ ತರುತ್ತೇವೆ, ಯುವ ರೈತರಿಗೆ ತಹಶೀಲ್ದಾರ್ ಭರವಸೆ

ಯುವ ರೈತರ ಮನವಿಪತ್ರವನ್ನು ನೋಡಿ ಒಂದು ಕ್ಷಣ ಶಾಕ್ ಆದ ತಹಶೀಲ್ದಾರ್, ಬಳಿಕ ರೈತರ ಜೊತೆಗೆ ಮಾತನಾಡಿ ಅವರ ನೋವನ್ನು ಆಲಿಸಿದ್ರು. ಮಾತುಕತೆ ಬಳಿಕ ವಿಷಯದ ಮಹತ್ವವನ್ನು ಅರಿತ ಅವರು, ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ರೈತರ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ ಎನ್ನುವ ಕೂಗು ಈಗ ಪ್ರಬಲವಾಗಿ ಕೇಳಿ ಬರುತ್ತಿದೆ. ಈ ವಿಷಯವನ್ನು ಸರ್ಕಾರ ಹಾಸ್ಯವಾಗಿ ಪರಿಗಣಿಸದೆ, ಗಂಭೀರವಾಗಿ ತೆಗೆದುಕೊಂಡು ಜಾಗೃತಿ ಮೂಡಿಸಲು ಮುಂದಾಗಬೇಕು ಎನ್ನುವುದು ನೊಂದ ಯುವ ರೈತರ ಮಾತು.

ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ

Published On - 12:47 pm, Tue, 22 November 22

ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು