ದಿನಸಿ ಪದಾರ್ಥಗಳ ಬೆಲೆ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆ; ದೀಪಾವಳಿಗೆ ಮತ್ತಷ್ಟು ದರ ಏರಿಕೆ ಬಾಂಬ್​!​

Dharwad: ದಸರಾ ಬಳಿಕ ದೀಪಾವಳಿ ಹಬ್ಬ ಬರಲಿದೆ. ಈ ವೇಳೆ ಅಕ್ಕಿ, ಬೇಳೆ ಸೇರಿದಂತೆ ಧಾನ್ಯಗಳ ಖರೀದಿಯೂ ಹೆಚ್ಚಾಗಿರುತ್ತದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆಯಾಗಿದೆ. ಎರಡು ತಿಂಗಳ ಹಿಂದೆ 135 ರೂ ಇದ್ದ ತೊಗರಿಬೇಳೆ ಈಗ 200 ರೂ ಗಡಿ ದಾಟಿದೆ.

ದಿನಸಿ ಪದಾರ್ಥಗಳ ಬೆಲೆ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆ; ದೀಪಾವಳಿಗೆ ಮತ್ತಷ್ಟು ದರ ಏರಿಕೆ ಬಾಂಬ್​!​
ದಿನಸಿ ಪದಾರ್ಥಗಳ ಬೆಲೆ 2 ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆ, ಮುಂದೇನು?
Edited By: ಸಾಧು ಶ್ರೀನಾಥ್​

Updated on: Oct 28, 2023 | 12:36 PM

ಮುಂಗಾರು ಮಳೆ ಕೊರತೆಯಿಂದ (Drought) ರಾಜ್ಯದಲ್ಲಿ ನಾನಾ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದು, ದಿನದಿಂದ ದಿನಕ್ಕೆ ಧಾನ್ಯಗಳ (foodgrains commodity) ದರ ಗಗನಕ್ಕೇರುತ್ತಿದೆ. ಅದರಲ್ಲೂ ಇದೀಗ ಹಬ್ಬಗಳು ಕೂಡ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಧಾನ್ಯಗಳ ದರದಲ್ಲಿಯೂ (Price Hike) ತೀವ್ರ ಹೆಚ್ಚಳವಾಗಿದೆ. ಇದರಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ.

ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ವ್ಯಾಪಿಸಿದೆ. ಇದಕ್ಕೆ ಧಾರವಾಡ ಜಿಲ್ಲೆ ಹೊರತಾಗಿಲ್ಲ. ಇದೇ ವೇಳೆ ದಸರಾ ಬಳಿಕ ದೀಪಾವಳಿ ಹಬ್ಬ ಬರಲಿದೆ. ಈ ವೇಳೆ ಅಕ್ಕಿ, ಬೇಳೆ ಸೇರಿದಂತೆ ಧಾನ್ಯಗಳ ಖರೀದಿಯೂ ಹೆಚ್ಚಾಗಿರುತ್ತದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ. 30ರಷ್ಟು ಏರಿಕೆಯಾಗಿದೆ. ನಾಡಹಬ್ಬ ದಸರಾಗೆ ಧಾನ್ಯಗಳ ದರ ಏರಿಕೆಯ ಬಿಸಿ ತಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೆಳೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಕಿರಾಣಿ ವ್ಯಾಪಾರಿ ಉದಯ ಯಂಡಿಗೇರಿ.

ಇನ್ನು ಕೆ.ಜಿ. ತೊಗರಿಬೇಳೆ ಸಗಟು ದರದಲ್ಲಿ 160- 170 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ 200 ರೂ. ಹಾಗೂ ಮೇಲ್ಪಟ್ಟು ಮಾರಾಟವಾಗುತ್ತಿದೆ, ಎರಡು ತಿಂಗಳ ಹಿಂದೆ 130-135 ರೂ ಇದ್ದ ತೊಗರಿಬೇಳೆ ಈಗ 200 ರೂ ಗಡಿ ದಾಟಿದೆ. ಹಂತಹಂತವಾಗಿ ಏರಿಕೆಯಾಗುತ್ತಾ ಬಂದಿದ್ದು, ಮಿತಿಮೀರಿದೆ. ಹೆಸರುಕಾಳು ಸಗಟು ದರದಲ್ಲಿ ಒಂದೇ ತಿಂಗಳಲ್ಲಿ ಕೆ.ಜಿ.ಗೆ 30-40 ರೂ, ಏರಿಕೆಯಾಗಿದೆ. 100 – 120 ರೂ. ಇದ್ದುದು ಈಗ 150- 160 ರೂ.ವರೆಗೆ ಮುಟ್ಟಿದೆ.

ಅಕ್ಕಿ, ಗೋಧಿ ಹಾಗೂ ಬೇಳೆ ಕಾಳುಗಳ ದರ ತಲಾ ಶೇ.25-30ರಷ್ಟು ಏರಿಕೆಯಾಗಿವೆ. ಮಳೆ ಕೊರತೆಯಿಂದಾಗಿ ಬೆಳೆ ಇಲ್ಲ. ಹೀಗಾಗಿ, ಬೇಡಿಕೆಗೆ ತಕ್ಕಂತೆ ಸರಕು ಇಲ್ಲದೆ ಇರುವುದರಿಂದ ಬೆಲೆ ಗಗನಕ್ಕೇರಿದೆ, ಅಕ್ಕಿ ಕೆ.ಜಿ.ಗೆ ಸಗಟು ದರದಲ್ಲಿ 2 ರೂ. ಏರಿಕೆಯಾಗಿದೆ. ದ್ವಿದಳ ಕಾಳುಗಳು ಕೆ.ಜಿ.ಗೆ 20-30 ರೂ.ವರೆಗೆ ಏರಿಕೆಯಾಗಿವೆ. ಧಾನ್ಯಗಳ ಉತ್ಪಾದನೆ ಇಳಿಕೆ ಹಾದಿಯಲ್ಲಿರುವ ಕಾರಣ ಬೆಲೆ ದುಬಾರಿಯಾಗುವುದು ನಿಶ್ಚಿತ ಎನ್ನುತ್ತಾರೆ ಸ್ಥಳೀಯರಾದ ತಿರುಕಪ್ಪ.

ರಾಜ್ಯದಲ್ಲಿ ವಾರ್ಷಿಕ 65 ಲಕ್ಷ ಟನ್ ಭಕ್ತ ಉತ್ಪಾದನೆಯಾಗುತ್ತದೆ. ಮಳೆ ಕೊರತೆಯಿಂದ ಈ ಬಾರಿ 45 ಲಕ್ಷ ಟನ್‌ಗೆ ಕುಸಿಯುವ ಅಂದಾಜಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಿ ರಫ್ತು ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ಸಾಮಾನ್ಯ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟೋದು ಗ್ಯಾರಂಟಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us