ಹುಬ್ಬಳ್ಳಿ: ಆರ್​ಜೆ ಮೇಘಾ ಹಾಗೂ ಸ್ನೇಹಿತರ ಮಧ್ಯೆ ಪಬ್​ನಲ್ಲಿ ಗಲಾಟೆ; ದೂರು ದಾಖಲು

| Updated By: ganapathi bhat

Updated on: Sep 13, 2021 | 2:51 PM

Hubli News: ಪ್ಲೇಟ್​ನಲ್ಲಿ ಸಾಸ್ ಹಾಕಿದ್ದಕ್ಕೆ ಶುರುವಾದ ಗಲಾಟೆ ಇಷ್ಟು ಜೋರಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶನಿವಾರ ರಾತ್ರಿ ಕುಡಿದ ನಶೆಯಲ್ಲಿ ಬಾಟಲಿ ತೂರಾಡಿಕೊಂಡು ಅವರು ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಹುಬ್ಬಳ್ಳಿ: ಆರ್​ಜೆ ಮೇಘಾ ಹಾಗೂ ಸ್ನೇಹಿತರ ಮಧ್ಯೆ ಪಬ್​ನಲ್ಲಿ ಗಲಾಟೆ; ದೂರು ದಾಖಲು
ಆರ್​ಜೆ ಮೇಘಾ
Follow us on

ಹುಬ್ಬಳ್ಳಿ: ಮದ್ಯದ ಅಮಲಿನಲ್ಲಿ ಆರ್​ಜೆ ಮೇಘಾ ಹಾಗೂ ಸ್ನೇಹಿತರ ಮಧ್ಯೆ ಗಲಾಟೆ ಆದ ಘಟನೆ ಶನಿವಾರ ರಾತ್ರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಪಬ್‌ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ರೇಡಿಯೋ ಜಾಕಿ ಮೇಘಾ ಹಾಗೂ ಸ್ನೇಹಿತರ ಮಧ್ಯದಲ್ಲಿ ವಾಗ್ವಾದ, ಹಲ್ಲೆ ನಡೆದಿದೆ. ಆರ್‌ಜೆ ಮೇಘಾ, ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ್, ಶರಣ್ಯ, ಶೈಲೇಶ್ ಮಧ್ಯೆ ಮದ್ಯದ ನಶೆಯಲ್ಲಿ ಮಾರಾಮಾರಿ ಏರ್ಪಟ್ಟಿದೆ. ಅಷ್ಟೇ ಅಲ್ಲದೆ, ಮಾರಾಮಾರಿಯಲ್ಲಿ ಪ್ರವೀಣ, ಆರ್‌ಜೆ ಮೇಘಾಗೆ ಗಾಯವಾಗಿದೆ.

ಈ ಸಂಬಂಧ ಹುಬ್ಬಳ್ಳಿಯ ಗೋಕುಲ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಪಬ್ ಮಾಲೀಕರಿಗೆ ಈ ಬಗ್ಗೆ ಸೂಚಿಸಿದ್ದಾರೆ. ಪ್ಲೇಟ್​ನಲ್ಲಿ ಸಾಸ್ ಹಾಕಿದ್ದಕ್ಕೆ ಶುರುವಾದ ಗಲಾಟೆ ಇಷ್ಟು ಜೋರಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶನಿವಾರ ರಾತ್ರಿ ಕುಡಿದ ನಶೆಯಲ್ಲಿ ಬಾಟಲಿ ತೂರಾಡಿಕೊಂಡು ಅವರು ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Crime News: ಕೇರಳದ ತೃತೀಯಲಿಂಗಿ ಆರ್​ಜೆ ಅನನ್ಯಾ ಸಾವಿನ ಬೆನ್ನಲ್ಲೇ ಆಕೆಯ ಗೆಳೆಯನೂ ನೇಣಿಗೆ ಶರಣು

ಇದನ್ನೂ ಓದಿ: ‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

Published On - 2:49 pm, Mon, 13 September 21