ಚಂದ್ರಶೇಖರ್ ಗುರೂಜಿಯ ಕೊಲೆ ಪ್ರಕರಣ: ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿ ಬಂಧನ

ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿಯ ಬರ್ಬರ ಕೊಲೆ ಪ್ರಕರಣ ಹಿನ್ನಲೆ ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಚಂದ್ರಶೇಖರ್ ಗುರೂಜಿಯ ಕೊಲೆ ಪ್ರಕರಣ: ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿ ಬಂಧನ
ಗೋಕುಲ್​ ರಸ್ತೆ ಪೊಲೀಸ್​​ ಠಾಣೆ
TV9kannada Web Team

| Edited By: Vivek Biradar

Jul 05, 2022 | 3:24 PM

ಹುಬ್ಬಳ್ಳಿ: ನಗರದಲ್ಲಿ ನಡೆದ ಚಂದ್ರಶೇಖರ್ ಗುರೂಜಿಯ (Chandrashekhar Guruji) ಬರ್ಬರ ಕೊಲೆ (Murder) ಪ್ರಕರಣ ಹಿನ್ನಲೆ ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು (Gokul Road Police Station) ಬಂಧಿಸಿದ್ದಾರೆ (Arrest). ಪ್ರಕರಣದ ಶಂಕಿತ ಹಂತಕರು ಮಹಾಂತೇಶ ಶಿರೋಳ್ ಮತ್ತು ಮಂಜುನಾಥ ದುಮ್ಮವಾಡ, ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.

ಇದನ್ನು ಓದಿ: ಇವರೇ ನೋಡಿ ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಿದ ಹಂತಕರು

ಗುರೂಜಿಯ ಬರ್ಬರ ಕೊಲೆ  ಬೇನಾಮಿ ಆಸ್ತಿಗಾಗಿ ನಡೆಯಿತಾ ಎಂದು ಅನುಮಾನ ವ್ಯಕ್ತವಾಗಿದೆ. ಆರೋಪಿ ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, 2019ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಗುರೂಜಿ ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್‌ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು.

ಬಳಿಕ ಆಸ್ತಿ ವಾಪಸ್‌ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಆಸ್ತಿ ಜೊತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಚಂದ್ರಶೇಖರ್ ಗುರೂಜಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತ ವನಜಾಕ್ಷಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಸಿಂಗಾಪುರದಲ್ಲಿ ವಾಸ್ತು ಕಲಿತ ಚಂದ್ರಶೇಖರ ಗುರೂಜಿಗೆ ಮುಂಬೈ ಮೊದಲ ಕರ್ಮಭೂಮಿಯಾಗಿತ್ತು

ಪ್ರಕರಣ ಸಂಬಂಧ ಮಾತನಾಡಿದ ಹು-ಧಾ ಪೊಲೀಸ್​ ಕಮಿಷನರ್​​ ಲಾಬೂರಾಮ್ ಆರೋಪಿಗಳ ಪತ್ತೆಗೆ ಎಸಿಪಿ ನೇತೃತ್ವದಲ್ಲಿ 5ತಂಡ ರಚನೆ ಮಾಡಲಾಗಿದೆ. ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹುಬ್ಬಳ್ಳಿ-ಧಾರವಾಡ ಸುತ್ತಲೂ ನಾಕಾ ಬಂಧಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada