ಶಕ್ತಿ ಯೋಜನೆ: 3 ತಿಂಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ 13.20 ಕೋಟಿ ಮಹಿಳೆಯರು ಪ್ರಯಾಣ

| Updated By: ವಿವೇಕ ಬಿರಾದಾರ

Updated on: Sep 12, 2023 | 10:03 AM

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ 4.61 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 115.42 ಕೋಟಿ ರೂ.ಗಳಾಗಿದೆ.

ಶಕ್ತಿ ಯೋಜನೆ: 3 ತಿಂಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ 13.20 ಕೋಟಿ ಮಹಿಳೆಯರು ಪ್ರಯಾಣ
NWKRTC ಬಸ್​
Follow us on

ಹುಬ್ಬಳ್ಳಿ ಸೆ.12: ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ (Shakti Yojana) ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ದೊರೆತಿದೆ. ಯೋಜನೆ ಜಾರಿಯಾಗಿ ಸಪ್ಟೆಂಬರ್ 10ಕ್ಕೆ ಮೂರು ತಿಂಗಳು ಪೂರೈಸಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್​​ಗಳಲ್ಲಿ ಇದುವರೆಗೆ 13.20 ಕೋಟಿ ಮಹಿಳೆಯರು ಶೂನ್ಯ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಿದ್ದಾರೆ. ಶೂನ್ಯ ಟಿಕೆಟ್ ಪ್ರಯಾಣದ ಮೊತ್ತ 332.77 ಕೋಟಿ ರೂ. ಆಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ ಒಂಬತ್ತು ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್​ಗಳ ಸಂಖ್ಯೆ 13,20,53,266 ಗಳಾಗಿದೆ. ಉಚಿತ ಪ್ರಯಾಣದ ಟಿಕೆಟ್ ಮೊತ್ತ 332,77,03,789 ರೂ. ಗಳಾಗಿದೆ.

ಜೂನ್ 11 ರಿಂದ 30 ರವೆರೆಗೆ 2.55 ಕೋಟಿ ಶೂನ್ಯ ಟಿಕೆಟ್​ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 65.15 ಕೋಟಿ ರೂ. ಗಳಾಗಿದೆ. ಜುಲೈ ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್​ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 111.78 ಕೋಟಿ ರೂ. ಗಳಾಗಿದೆ.

ಇದನ್ನೂ ಓದಿ: ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್ ವಿತರಣೆ ಅವಧಿ ಮತ್ತೆ ವಿಸ್ತರಣೆ: ಸಂಪುಟ ಸಭೆಯಲ್ಲಿ ತೀರ್ಮಾನ

ವಿಭಾಗವಾರು ಮಹಿಳೆಯರ ಪ್ರಯಾಣ
ವಿಭಾಗ ಶೂನ್ಯ ಟಿಕೆಟ್ ಗಳು (ಕೋಟಿ ಗಳಲ್ಲಿ) ಟಿಕೆಟ್ ಮೌಲ್ಯ (ಕೋಟಿ ಗಳಲ್ಲಿ)
ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ 1.76 21.46
ಹುಬ್ಬಳ್ಳಿ ಗ್ರಾಮಾಂತರ 0.88 31.42
ಧಾರವಾಡ 1.06 28.4
ಬೆಳಗಾವಿ 2.04 41.89
ಚಿಕ್ಕೋಡಿ 1.81 45.23
ಬಾಗಲಕೋಟೆ 1.66 51.65
ಗದಗ 1.32 40.02
ಹಾವೇರಿ 1.46 39.87
ಉತ್ತರ ಕನ್ನಡ   1.22 32.84

ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 115.42 ಕೋಟಿ ರೂ. ಗಳಾಗಿದೆ. ಸಪ್ಟೆಂಬರ್ 1 ರಿಂದ 10 ರವೆರೆಗೆ 1.56 ಕೋಟಿ ಶೂನ್ಯ ಟಿಕೆಟ್​ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 40.42 ಕೋಟಿ ರೂ. ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:02 am, Tue, 12 September 23