Pradhan Joshi: ಸಿದ್ದರಾಮಯ್ಯ ಅವರದ್ದು ನುಡಿದಂತೆ ನಡೆಯದ ಸರ್ಕಾರ : ವೈಫಲ್ಯಗಳ ಪಟ್ಟಿ ಬಿಡುಗಡೆ ಮಾಡಿ ಸಿಎಂಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Siddaramaiah: ಸಮೃದ್ಧವಾಗಿದ್ದ ಕರ್ನಾಟಕದ ಸ್ಥಿತಿಯನ್ನು ಸಂಪೂರ್ಣ ಹಾಳು ಮಾಡಿದ್ದಲ್ಲದೆ, ಜನರ ಏಳಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚನೆ, ಯೋಜನೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರಕಾರದ ಕಡೆ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಸಮೃದ್ಧವಾಗಿದ್ದ ಕರ್ನಾಟಕದ ಸ್ಥಿತಿಯನ್ನು (Karnataka) ಸಂಪೂರ್ಣ ಹಾಳು ಮಾಡಿದ್ದಲ್ಲದೆ, ಜನರ ಏಳಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚನೆ, ಯೋಜನೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah), ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರಕಾರದ ಕಡೆ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಟೀಕಿಸಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅಂಕಿ ಅಂಶಗಳ ಸಹಿತ ತಿರುಗೇಟು ನೀಡಿದ್ದಾರೆ.
ನುಡಿದಂತೆ ನಡೆಯದ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಜನರು ತಿಳಿಯಬೇಕಿದೆ ಎನ್ನುವ ಜೊತೆಗೆ ಸಿದ್ದರಾಮಯ್ಯ ಸರ್ಕಾರದ ವೈಫಲಗಳ ಪಟ್ಟಿಯನ್ನೇ ಪ್ರಲ್ಹಾದ ಜೋಶಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದ್ದಾರೆ. ಆ ವಿವರ ಹೀಗಿದೆ.
* ರಾಜ್ಯದ ಭವಿಷ್ಯದ ಯೋಚನೆಯಿಲ್ಲದೆ ಅರ್ಥಹೀನ ಬಿಟ್ಟಿ ಭಾಗ್ಯ ಘೋಷಣೆ ಹಾಗೂ ಈ ಮೂಲಕ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಕಂಟಕ ತಂದಿರುವುದು
* 10 ವರ್ಷದ ಯುಪಿಎ ಆಡಳಿತ ಮತ್ತು 9 ವರ್ಷದ ಬಿಜೆಪಿ ಆಡಳಿತದಲ್ಲಿ ಕರ್ನಾಟಕಕ್ಕೆ ಅತೀ ಹೆಚ್ಚು ಅನುದಾನ ಒದಗಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ
* 2014-19ರಲ್ಲಿ ಕರ್ನಾಟಕಕ್ಕೆ ₹1.35 ಲಕ್ಷ ಕೋಟಿಯಷ್ಟು ತೆರಿಗೆ ಹಂಚಿಕೆಯಾಗಿದೆ, ಯುಪಿಎ ಆಡಳಿತಕ್ಕೆ ಹೋಲಿಸಿದರೆ ಇದು 2.5 ಪಟ್ಟು ಹೆಚ್ಚು
* ರಾಜ್ಯದ ನೀರಾವರಿ ವ್ಯವಸ್ಥೆ ಕುರಿತು ಸುಳ್ಳು ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಸರ್ಕಾರದಿಂದ ಜನರ ದಿಕ್ಕು ತಪ್ಪಿಸುವ ಪ್ರಯತ್ನ
ಸಮೃದ್ಧವಾಗಿದ್ದ ಕರ್ನಾಟಕದ ಸ್ಥಿತಿಯನ್ನು ಸಂಪೂರ್ಣ ಹಾಳು ಮಾಡಿದ್ದಲ್ಲದೆ, ಜನರ ಏಳಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚನೆ – ಯೋಜನೆ ಇಲ್ಲದ ಮುಖ್ಯಮಂತ್ರಿ @siddaramaiah ನವರು, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರಕಾರದ ಕಡೆ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ
ನುಡಿದಂತೆ ನಡೆಯದ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಜನರು… https://t.co/uYVf0WKlJJ
— Pralhad Joshi (@JoshiPralhad) October 30, 2023
* ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಈಗಾಗಲೇ ಡಿಪಿಆರ್ ಅನುಮೋದಿಸಿದ್ದು, ಮಾಹಿತಿ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ
* ಅಟಲ್ ಭುಜಲ್ ಯೋಜನೆಯಡಿ ಕೇಂದ್ರ ಸರಕಾರವು ಕರ್ನಾಟಕಕ್ಕೆ ₹ 629.54 ಕೋಟಿ ಬಿಡುಗಡೆ ಮಾಡಿದ್ದರೂ, ರಾಜ್ಯ ಕಾಂಗ್ರೆಸ್ ಸರಕಾರ ಅದರಲ್ಲಿ ಬಳಸಿರುವುದು ಕೇವಲ ₹ 274.05 ಕೋಟಿ ಮಾತ್ರ (28.10.2023ರವರೆಗೆ)
* 2007ರಲ್ಲಿ ಗೋವಾದಲ್ಲಿ ನಿಂತು ಮಹದಾಯಿ ವಿಚಾರವಾಗಿ ಮಾತನಾಡಿದ ಸೋನಿಯಾ ಗಾಂಧಿ, ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಬಿಟ್ಟುಕೊಡುವುದಿಲ್ಲ ಎಂದಿದ್ದರು, ಆದರೆ ಇಂದು ಅದೇ ವಿಚಾರವಾಗಿ ಸಿದ್ದರಾಮಯ್ಯನವರಿಂದ ರಾಜ್ಯದಲ್ಲಿ ವಿವಾದ ಹುಟ್ಟು ಹಾಕುವ ಪ್ರಯತ್ನ
* ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೇತೃತ್ವದಲ್ಲಿ ನಮ್ಮ ಸರಕಾರ ಗೋವಾ ಸರಕಾರದ ಜೊತೆ ಚರ್ಚಿಸಿದ ನಂತರ ಕರ್ನಾಟಕಕ್ಕೆ ನೀರು ಹರಿಸಲು ಒಪ್ಪಿಕೊಂಡಿತ್ತು.
Also Read: ಸುಳ್ಳು ಹೇಳುವ ಚಾಳಿ ಕಾಂಗ್ರೆಸ್ಸಿಗರ “ಜೀನ್ಸ್”ನಲ್ಲೇ ಇದೆ! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
ಹೀಗೆ ರಾಜ್ಯ ಸರ್ಕಾರದ ವಿರುದ್ಧ ಸುಧೀರ್ಘ ಅಂಕಿಅಂಶಗಳ ಮೂಲಕ ಪಾಯಿಂಟ್ ಬೈ ಪಾಯಿಂಟ್ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಪ್ರಲ್ಹಾದ ಜೋಶಿಯವರು, “ಸಿದ್ದರಾಮಯ್ಯನವರೇ, ನಿಮ್ಮ ಎಲೆಯಲ್ಲಿ ಏನು ಬಿದ್ದಿದೆ ನೋಡಿ ನಂತರದಲ್ಲಿ ಕೇಂದ್ರ ಸರಕಾರದ ಕಡೆ ಬೆರಳು ಮಾಡಿ ತೋರಿಸುವಿರಂತೆ!” ಎಂದು ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ