ಧಾರವಾಡ, ಅ.15: ಇಸ್ರೇಲ್(Israel)ನಲ್ಲಿ ಯುದ್ಧ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನಲೆ ‘ಆಪರೇಷನ್ ಅಜಯ್’ ಮೂಲಕ ಅಲ್ಲಿರುವ ಭಾರತೀಯರನ್ನು ಕರೆತರುವ ಕೆಲಸ ನಡೆಯುತ್ತಿದೆ. ಅದರಂತೆ ಈಗಾಗಲೇ ಎರಡು ವಿಮಾನಗಳಲ್ಲಿ ಕರೆತರಲಾಗಿದ್ದು, ಇಂದು ಮೂರನೇ ವಿಮಾನದಲ್ಲಿ ಹುಬ್ಬಳ್ಳಿ(Hubballi) ಮೂಲದ ದಂಪತಿ ಅಖಿಲೇಶ್ ಕಾರಗದ್ದೆ ಹಾಗೂ ಕೃತಿ ಎಂಬುವವರು ತಾಯ್ನಾಡಿಗೆ ಮರಳಿದ್ದಾರೆ. ಈ ಹಿನ್ನಲೆ ಧಾರವಾಡ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ದಂಪತಿಗೆ ಸ್ವಾಗತ ಕೋರಲಾಗಿದೆ.
ಇಸ್ರೇಲ್ನಿಂದ ಮೂರನೇ ವಿಮಾನದಲ್ಲಿ 9 ಮಂದಿ ಕನ್ನಡಿಗರು ಬಂದಿದ್ದು, ಅದರಲ್ಲಿ ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇನ್ನು ಇಸ್ರೇಲ್ನ ಟೆಲ್ ಅವೀವ್ನಲ್ಲಿದ್ದ ಹುಬ್ಬಳ್ಳಿ ದಂಪತಿ, ಜೂನ್ ತಿಂಗಳಲ್ಲಿ ಇಸ್ರೇಲ್ಗೆ ಹೋಗಿದ್ದರು. ಈ ದಂಪತಿ, ಲೇಸರ್ ಟೆಕ್ನಾಲಜಿ ಪೋಸ್ಟ್ ಡಾಕ್ಟರಲ್ ಫೆಲೋ (PDF) ವ್ಯಾಸಂಗಕ್ಕಾಗಿ ತೆರಳಿದ್ದರು. ಇದೀಗ ಇಸ್ರೇಲ್ನಿಂದ ದೆಹಲಿಗೆ ಹಾಗೂ ಅಲ್ಲಿಂದ ಹುಬ್ಬಳ್ಳಿ ಏರ್ಪೋರ್ಟ್ಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಮರಳಿ ತಾಯ್ನಾಡಿಗೆ ಆಗಮಿಸಿದ ಹಿನ್ನಲೆ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ‘ಅಜಯ್’: 2ನೇ ಹಂತದಲ್ಲಿ ಇಸ್ರೇಲ್ನಿಂದ ಭಾರತಕ್ಕೆ ಬಂದ 235 ಭಾರತೀಯರು
ತುಮಕೂರು: ಇನ್ನು ಇಸ್ರೇಲ್ನಿಂದ ಬಂದ ಬಳಿಕ ಮಾತನಾಡಿದ ಅವರು ‘ನಾವು ಇದ್ದಂತಹ ಸ್ಥಳದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಗಾಜಾ ಭಾಗ ಹಾಗೂ ಇಸ್ರೇಲ್ನ ದಕ್ಷಿಣ ಭಾಗದಲ್ಲಿ ಯುದ್ದ ನಡೆಯುತ್ತಿದೆ. ನಮಗೆಲ್ಲ ಎಂಬ್ಬೆಸ್ಸಿ ಉತ್ತಮ ಸಹಾಯ ಮಾಡಿ ಕರೆದುಕೊಂಡು ಬಂದಿದೆ. ಕುಟುಂಬಸ್ಥರು ಭಯಬೀತರಾಗಿದ್ರು, ಇದೀಗ ಮನೆಗೆ ತೆರಳುತ್ತಿದ್ದೇವೆ. ಅಲ್ಲಿನ ಯುದ್ದ ಮುಗಿದ ನಂತರ ಮತ್ತೆ ವಾಪಸ್ ಹೋಗುತ್ತೇವೆ ಎಂದು ತುಮಕೂರು ಮೂಲದ ವಿದ್ಯಾರ್ಥಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ