ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಅರಸಿಕೆರೆ ಎಕ್ಸಪ್ರೆಸ್ ರೈಲು ಸಂಚಾರ 2 ದಿನ ಭಾಗಶಃ ರದ್ದು
ದೇವನೂರು ಮತ್ತು ಬಾಣಾವರ ನಿಲ್ದಾಣಗಳ ನಡುವೆ ಸುರಕ್ಷತೆಗೆ ಸಂಬಂಧಿತ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೀರೂರು ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರ ಭಾಗಶಃ ರದ್ದುಗಾಲಿವೆ. ಯಾವ್ಯಾವ ರೈಲುಗಳು ಭಾಗಶಃ ರದ್ದಾಗಲಿವೆ ಇಲ್ಲಿದೆ ಮಾಹಿತಿ.
ಹುಬ್ಬಳ್ಳಿ/ಅರಸಿಕೆರೆ: ದೇವನೂರು ಮತ್ತು ಬಾಣಾವರ ನಿಲ್ದಾಣಗಳ ನಡುವೆ ಸುರಕ್ಷತೆಗೆ ಸಂಬಂಧಿತ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೀರೂರು ಮತ್ತು ಅರಸೀಕೆರೆ (Arsikere) ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರ ಭಾಗಶಃ ರದ್ದುಗಾಲಿವೆ ನೈಋತ್ಯ ರೈಲ್ವೆ ವಲಯ (South Western Railway Zone) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ್ಯಾವ ರೈಲುಗಳು ಭಾಗಶಃ ರದ್ದಾಗಲಿವೆ ಇಲ್ಲಿದೆ ಮಾಹಿತಿ.
ಭಾಗಶಃ ರದ್ದಾಗಲಿರುವ ರೈಲುಗಳು
- ರೈಲು ಸಂಖ್ಯೆ 16214 ಎಸ್‌ಎಸ್‌ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 22 ರಂದು ಬೀರೂರು-ಆರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
- ರೈಲು ಸಂಖ್ಯೆ 16213 ಅರಸೀಕೆರೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 23 ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ.
ಇದನ್ನೂ ಓದಿ: ನೈಋತ್ಯ ರೈಲ್ವೆ ವಲಯದ ಈ ರೈಲುಗಳು ಭಾಗಶಃ ರದ್ದು
ನಾಗಲಾವಿ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ
ಧಾರವಾಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ನಾಗಲಾವಿಯ ದರ್ಗಾ ಹಜರತ್ ಪರೀರ್ ಉರೂನ್ ಕಾರ್ಯಕ್ರಮ ಅಕ್ಟೋಬರ್ 14 ರಿಂದ 16ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಇಲ್ಲಿಗೆ ವಿವಿಧ ಸ್ಥಳಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ನಾಗಲವಿ ಹಾಲ್ಟ್ ನಿಲ್ದಾಣದಲ್ಲಿ ಹಾದು ಹೋಗುವ ಎಂಟು ರೈಲುಗಳು ಎರಡು ನಿಮಿಷಗಳ ಕಾಲ ತಾತ್ಕಾಲಿಕವಾಗಿ ಇಲ್ಲಿ ನಿಲ್ಲುತ್ತವೆ.
- ರೈಲು ಸಂಖ್ಯೆ: 17415 ತಿರುಪತಿ-ಕೊಲ್ಲಾಪುರ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಿಗ್ಗೆ 9:14ಕ್ಕೆ ಆಗಮಿಸಿ 9:16ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ: 17332 ಎಸ್‌ಎಸ್‌ಎಸ್ ಹುಬ್ಬಳ್ಳಿ-ಮಿರಜ್ ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ನಿಲ್ದಾಣಕ್ಕೆ ಬೆಳಿಗ್ಗೆ 11:40ಕ್ಕೆ ಆಗಮಿಸಿ 11:42ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 17317 ಎಸ್‌ಎಸ್‌ಎಸ್ ಹುಬ್ಬಳ್ಳಿ-ದಾದರ್ ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಂಜೆ 4:18ಕ್ಕೆ ಆಗಮಿಸಿ 4:20ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 6:40ಕ್ಕೆ ಆಗಮಿಸಿ 6:42ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 17416 ಕೊಲ್ಲಾಪುರ-ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 5:55ಕ್ಕೆ ಆಗಮಿಸಿ 5:57ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 17331 ಮೀರಜ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಮಧ್ಯಾಹ್ನ 12:15ಕ್ಕೆ ಆಗಮಿಸಿ 12:27ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 17318 ದಾದರ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಿಗ್ಗೆ 10:13ಕ್ಕೆ ಆಗಮಿಸಿ, 10:15ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ ರೈಲು ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 7:40 ಗಂಟೆಗೆ ಬಂದು 7:42ಕ್ಕೆ ಹೊರಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ