AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲೊಂದು ಟ್ರಯಾಂಗಲ್ ಲವ್ ಸ್ಟೋರಿ: ಬರ್ತ್​​ಡೇ ಪಾರ್ಟಿಯಲ್ಲಿ ಆಗಿದ್ದೇನು?

ಅವರೆಲ್ಲಾ ಕಾಲೇಜು ವಿದ್ಯಾರ್ಥಿಗಳು. ಕಾಲೇಜಿಗೆ ಹೋಗಿ ಪಾಠ ಕೇಳಿದ್ರೆ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಿದ್ದರು. ಆದ್ರೆ ಪ್ರೀತಿ ಪ್ರೇಮ ಅಂತ ಹೋಗಿ ಕಂಬಿ ಹಿಂದೆ ಹೋಗಿದ್ದಾರೆ. ಹೌದು...ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದು, ಈ ಟ್ರಯಾಂಗಲ್ ಲವ್ ಸಂಬಂಧ ಬರ್ತ್​​ ಡೇ ಪಾರ್ಟಿಯಲ್ಲಿ ರಕ್ತಪಾತವಾಗಿದೆ. ದುರತ ಅಂದ್ರೆ ತಮಗೆ ಸಂಬಂಧ ಇಲ್ಲದ ವಿಚಾರಕ್ಕೆ ಸ್ನೇಹಿತನ ಜೊತೆ ಹೋದವರು ಚಾಕು ಇರಿತಕ್ಕೊಳಗಾಗಿದ್ದಾರೆ.

ಹುಬ್ಬಳ್ಳಿಯಲ್ಲೊಂದು ಟ್ರಯಾಂಗಲ್ ಲವ್ ಸ್ಟೋರಿ: ಬರ್ತ್​​ಡೇ ಪಾರ್ಟಿಯಲ್ಲಿ ಆಗಿದ್ದೇನು?
Hubballi Love Case
ಸಂಜಯ್ಯಾ ಚಿಕ್ಕಮಠ
| Edited By: |

Updated on: Nov 11, 2025 | 6:42 PM

Share

ಹುಬ್ಬಳ್ಳಿ, (ನವೆಂಬರ್ 11): ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ಕಳೆದ ರಾತ್ರಿ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ. ಅಭಿಷೇಕ್ ಬಂಡಿವಂಡರ್, ಮಾರುತಿ ಬಂಡಿವಂಡರ್ ಚಾಕು ಇರಿತಕ್ಕೊಳಗಾದ ಯುವಕರು. ಒಂದೇ ಹುಡುಗಿಯನ್ನು ಇಬ್ಬರು ಲವ್ ಮಾಡುತ್ತಿದ್ದು, ಇದೇ ವಿಚಾರಕ್ಕೆ ಬರ್ತ್​​ ಡೇ ಪಾರ್ಟಿಗೆಂದು ಕರೆದು ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಇನ್ನು ಗಲಾಟೆಯಲ್ಲಿ ಪ್ರೀತಿ ಮಾಡಿದವನು ಪರಾದ್ರೆ ಆತನ ಜೊತೆ ಹೋಗಿದ್ದವರು ಚಾಕು ಇರಿತಕ್ಕೊಳಗಾಗಿದ್ದಾರೆ.

ಹುಬ್ಬಳ್ಳಿ ನಗರದ ದೇಶಪಾಂಡೆ ನಗರದ ನಿವಾಸಿಗಳಾದ ಇಬ್ಬರು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ (ನವೆಂಬರ್ 10) ರಾತ್ರಿ ತಮ್ಮದೇ ಏರಿಯಾದ ಪವನ್ ಅನ್ನೋ ಸ್ನೇಹಿತ ಜೊತೆ ಹೋಗಿ ಸಂಕಷ್ಟ ತಂದುತೊಂಡಿದ್ದಾರೆ. ಹೌದು ಪವನ ಜೊತೆ ಮಣಿಕಂಠ ಅನ್ನೋನ ಬರ್ತಡೇ ಪಾರ್ಟಿಗೆ ಕಳೆದ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಹೋಗಿದ್ದರಂತೆ. ಆದ್ರೆ ಬರ್ತಡೇ ಪಾರ್ಟಿಗೆ ಕರೆದಿದ್ದ ಮಣಿಕಂಠ, ಬರ್ತಡೇ ಮುನ್ನವೇ ಪವನ ಮತ್ತು ಆತನ ಜೊತೆ ಹೋಗಿದ್ದ ಅಭಿಷೇಕ್, ಮಾರುತಿ ಜೊತೆ ಜಗಳ ಆರಂಭಿಸಿದ್ದ. ಗಲಾಟೆಯಲ್ಲಿ ಮಣಿಕಂಠ್ ಮತ್ತು ಆತನ ಸ್ನೇಹಿತರು ಅಭಿಷೇಕ ಮತ್ತು ಮಾರುತಿ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಸ್ಥಳೀಯರು ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸುಖಿ ಸಂಸಾರದಲ್ಲಿ ಮೂರನೇ ವ್ಯಕ್ತಿ ಎಂಟ್ರಿ: ಬಲರಾಮನಿಗಾಗಿ ಕಟ್ಟಿಕೊಂಡ ಗಂಡನನ್ನೇ ಕೊಂದ ಹೆಂಡ್ತಿ

ಗಲಾಟೆಗೆ ಕಾರಣವಾಯ್ತು ಲವ್

ಹೌದು…ಮಣಿಕಂಠ ಮತ್ತು ಪವನ್, ಇಬ್ಬರು ಗ್ಲೋಬಲ್ ಕಾಲೇಜ್ ನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ. ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದಾರಂತೆ. ಇದೇ ಕಾರಣಕ್ಕೆ ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತಂತೆ. ನಿನ್ನೆ ತನ್ನ ಬರ್ತಡೇ ಪಾರ್ಟಿ ಇದೆ.ಆಗಿರೋ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿ ಮಣಿಕಂಠ, ಪವನ್ ನನ್ನು ಕರೆಸಿದ್ದನಂತೆ. ಪವನ್ ಒಬ್ಬನೇ ಹೋಗದೆ ಮಾರುತಿ ಮತ್ತು ಅಭಿಷೇಕ ನನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಆದ್ರೆ ಗಲಾಟೆಯಲ್ಲಿ ಪ್ರೀತಿ ಮಾಡಿದವನು ಪರಾದ್ರೆ ಆತನ ಜೊತೆ ಹೋಗಿದ್ದವರು ಚಾಕು ಇರಿತಕ್ಕೊಳಗಾಗಿದ್ದಾರೆ. ಇನ್ನು ಮಾಹಿತಿ ಗೊತ್ತಾಗುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಕಿಮ್ಸ್ ಗೆ ಬೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಚಾಕು ಇರಿತಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಮುಖ ಆರೋಪಿ ಮಣಿಕಂಠ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಓದುವುದನ್ನು ಬಿಟ್ಟು ಪ್ರೀತಿ ಪ್ರೇಮ ಅಂತ ಹೋದವರು ಇದೀಗ ಕಂಬಿ ಹಿಂದೆ ಹೋಗಿದ್ದಾರೆ. ಆದ್ರೆ ತಮಗೆ ಸಂಬಂಧ ಇಲ್ಲದ ವಿಚಾರಕ್ಕೆ ಸ್ನೇಹಿತನ ಜೊತೆ ಹೋದವರು ಚಾಕು ಇರಿತಕ್ಕೊಳಗಾಗಿದ್ದು ಮಾತ್ರ ದುರ್ದೈವವೇ ಸರಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..
ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..