ಹುಬ್ಬಳ್ಳಿ, ಸೆ.19: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಹಾರಿಗಳ ಪುಂಡಾಟ ಪ್ರಕರಣ ದಾಖಲಾಗಿದೆ. ಯುಪಿ, ಬಿಹಾರ ಮೂಲದ ಪುಂಡರು ಪುಂಡಾಟ ಮೆರೆದಿದ್ದಾರೆ. ಹುಬ್ಬಳ್ಳಿಯ ವಿಜಯನಗರದ ವಡ್ಡರ ಓಣಿಯಲ್ಲಿ ಗಾಂಜಾ (Ganja) ಮತ್ತಿನಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಸಂಜಯ್, ಸೈಫ್ ಎಂಬ ಇಬ್ಬರು ಯುವಕರಿಗೆ ಯುಪಿ, ಬಿಹಾರ ಮೂಲದ ಪುಂಡರ ಗ್ಯಾಂಗ್ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದೆ.
ನಾಗೇಂದ್ರ, ಅನಿಕೇತ್, ಸರವನ್, ಬಬ್ಲೂಚೌಹಾಣ್ನಿಂದ ಕೃತ್ಯ ನಡೆದಿದೆ. ಈ ಬಿಹಾರಿ ಪುಂಡರು ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದರು. ಇದನ್ನು ಪ್ರಶ್ನೆ ಮಾಡಲು ಹೋಗಿದ್ದ ಯುವಕರಿಗೆ ಚಾಕು ಇರಿಯಲಾಗಿದೆ. ಹುಬ್ಬಳ್ಳಿಯ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚರಂಡಿ ಕಾಮಗಾರಿ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಸೈಯದ್ ಜಾವೇದ್ ಮೃತಪಟ್ಟಿದ್ದಾನೆ. ಬೆಂಗಳೂರಿನ ನಾಗವಾರದ ಗೋವಿಂದಪುರದಲ್ಲಿ ಘಟನೆ ನಡೆದಿದ್ದು, ಚರಂಡಿ ಕಾಮಗಾರಿ ವೇಳೆ ಬ್ಯಾರಿಕೇಡ್ ಹಾಕದೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿತ್ತು. ಗುಂಡಿಗೆ ಬಿದ್ದಿದ್ದ ಸೈಯದ್ಗೆ ಕಬ್ಬಿಣದ ಸರಳುಗಳು ಚುಚ್ಚಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸೈಯದ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸೈಯದ್ ಜಾವೇದ್ ಕೊನೆಯುಸಿರೆಳೆದ್ದಿದ್ದಾನೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಕೆಲಸ ಮಾಡ್ತಿದ್ದೀರಾ ಎಂದು ಖರ್ಗೆಯನ್ನು ಪ್ರಶ್ನಿಸಿದ ನಡ್ಡಾ
ಸೋಲಿಗರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟ DRFO ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಾರ್ ವ್ಯಾಪ್ತಿಯ DRFO ಬೋಜಪ್ಪ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಕಂದ್ರೆ 18 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ನಂತೆ. ಸೋಲಿಗರ ಬಳಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ರು.
ಆ್ಯಂಬುಲೆನ್ಸ್ ಇಲ್ಲದೆ ಬೈಕ್ನಲ್ಲಿ ವೃದ್ಧನ ಶವ ಸಾಗಿಸಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯಲ್ಲಿ ನಡೆದಿದೆ. ವೈ.ಎನ್.ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಪರದಾಡಿದ್ದಾರೆ. ಕೊನೆಗೆ ಬೈಕ್ನಲ್ಲೇ ವೃದ್ಧನ ಶವ ಸಾಗಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ