ಹುಬ್ಬಳ್ಳಿ: ಕಡಿದ ಹಾವಿನ ತಲೆ ಜಜ್ಜಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ತಂದೆ ಜೊತೆ ಶೇಂಗಾ ಕೀಳಲು ಹೋಗಿದ್ದ ವೇಳೆ ಯುವಕನಿಗೆ ಹಾವೊಂದು ಕಚ್ಚಿದೆ. ಹಾವು ಕಚ್ಚಿದ ತಕ್ಷಣವೇ ಯುವಕ ಹಾವನ್ನು ಸಾಯಿಸಿ ಅದನ್ನು ಪ್ಲಾಸ್ಟಿಕ್ ಕವರ್ನಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ಬಂದಿದ್ದು ಇದೇ ಹಾವು ನನಗೆ ಕಚ್ಚಿದೆ ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ. ಸದ್ಯ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿ, ಸೆ.19: ಯುವಕನೋರ್ವ ತನಗೆ ಕಚ್ಚಿದ ಹಾವಿನ (Snake) ತಲೆ ಜಜ್ಜಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ಹುಬ್ಬಳ್ಳಿ (Hubli) ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕ ತನ್ನ ತಂದೆ ಜೊತೆ ಶೇಂಗಾ ಕೀಳಲು ಹೋಗಿದ್ದ. ಈ ವೇಳೆ ಫಕ್ಕೀರಪ್ಪ ಅಣ್ಣಿಗೇರಿ ಅವರಿಗೆ ಹಾವು ಕಚ್ಚಿದೆ.
ಫಕ್ಕೀರಪ್ಪ ಹಾವು ಕಚ್ಚಿದ ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದಾನೆ. ನಂತರ ತಂದೆ ಈರಪ್ಪನ ಜೊತೆ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾನೆ. ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಯುವಕನನ್ನು ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಪ್ರವಾಹ ಸ್ಥಳಗಳ ಪರಿಶೀಲನೆಗೆ ತೆರಳಿದ್ದಾಗ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಹೃದಯಾಘಾತಕ್ಕೆ ವೈದ್ಯೆ ವಿದ್ಯಾರ್ಥಿ ಬಲಿ
ಹೃದಯಾಘಾತದಿಂದ ವಾಕಿಂಗ್ ಮಾಡ್ತಿದ್ದ ವೈದ್ಯೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಬಳಿ ಘಟನೆ ನಡೆಸಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಪೃಥ್ವಿ ಮೃತಪಟ್ಟ ದುರ್ದೈವಿ. ನಿನ್ನೆ ವಾಕಿಂಗ್ ಮಾಡ್ತಿದ್ದಾಗ ಪೃಥ್ವಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುಲಾಯ್ತು. ಆದ್ರೆ, ಮಾರ್ಗಮಧ್ಯೆಯೇ ಪೃಥ್ವಿ ಉಸಿರು ಚೆಲ್ಲಿದ್ದಾನೆ.
ಬಕೆಟ್ ವಿಚಾರಕ್ಕೆ ಯುವಕನ ಹತ್ಯೆ!
ಬಟ್ಟೆ ವಾಶ್ ಮಾಡುವ ಬಕೆಟ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆನೇಕಲ್ ತಾಲೂಕಿನ ಇಂಡ್ಲವಾಡಿ ಬಳಿ ಘಟನೆ ನಡೆದಿದೆ. ಜಾರ್ಖಂಡ್ ಮೂಲದ ವ್ಯಕ್ತಿ ಬಿಹಾರಿ ಮೂಲದ ನಿತೀಶ್ ಎಂಬಾತನನ್ನ ಕೊಂದಿದ್ದಾನೆ. ತಲೆ ಮೇಲೆ ಕಾಂಕ್ರೀಟ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ