LS Elections: ಪ್ರಹ್ಲಾದ ಜೋಶಿ 5ನೇ ಬಾರಿಗೆ ಗೆಲ್ತಾರಾ? ಈ ಗೆಲುವಿನ ಓಟಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬ್ರೇಕ್ ಹಾಕ್ತಾರಾ? ಯಾರವರು?

| Updated By: ಸಾಧು ಶ್ರೀನಾಥ್​

Updated on: Mar 16, 2024 | 3:53 PM

Dharwad Lok Sabha Constituency: ಈ ಸಲ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಶಿ ಅವರ ಐದನೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಂತಹ ಸಾಮರ್ಥ್ಯ ಇರುವ ಅಭ್ಯರ್ಥಿಯನ್ನು ಅಳೆದು ತೂಗಿ ಹಾಕಲು ಕಾಂಗ್ರೆಸ್​​ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಭಾರೀ ಚರ್ಚೆಗೆ ಗ್ರಾಸವಾಗಿರುವುದು ಸತ್ಯ.

LS Elections: ಪ್ರಹ್ಲಾದ ಜೋಶಿ 5ನೇ ಬಾರಿಗೆ ಗೆಲ್ತಾರಾ? ಈ ಗೆಲುವಿನ ಓಟಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬ್ರೇಕ್ ಹಾಕ್ತಾರಾ? ಯಾರವರು?
LS Elections: ಪ್ರಹ್ಲಾದ ಜೋಶಿ 5ನೇ ಬಾರಿಗೆ ಗೆಲ್ತಾರಾ?
Follow us on

ಧಾರವಾಡ ಲೋಕಸಭಾ ‌ಕ್ಷೇತ್ರದಿಂದ‌ (Dharwad Lok Sabha Constituency) ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಐದನೇಯ ಬಾರಿಗೆ ಅದೃಷ್ಟ ಪರೀಕ್ಷೆ (winning streak) ಮುಂದಾಗಿದ್ದಾರೆ. ಕಮಲ ಪಡೆ ನಾಯಕರು ಪ್ರಹ್ಲಾದ ಜೋಶಿಯನ್ನ (Prahlada Joshi) ಬಿಜೆಪಿ ಹುರಿಯಾಳು ಎಂದು ಘೋಷಣೆ ಮಾಡಿದ್ದಾರೆ. ಈ ಬಾರಿ ಜೋಶಿ (BJP) ಎದುರಾಳಿ ಯಾರಾಗ್ತಾರೇ..? ಯಾವ ಲೆಕ್ಕಾಚಾರವನ್ನಿಟ್ಟುಕೊಂಡು ಯಾರಿಗೆ (Congress candidate) ಕಾಂಗ್ರೆಸ್ ಹೈಕಮಾಂಡ್​​ ಮಣೆ ಹಾಕುತ್ತೆ ಎನ್ನುವುದು ಇನ್ನೂ ಕುತೂಹಲ ಮೂಡಿಸಿದೆ. ಬ್ರಾಹ್ಮಣ ಸಮುದಾಯದ ವಿರುದ್ದ ಲಿಂಗಾಯತ ಅಸ್ತ್ರ ಬಳಸೋ ಲೆಕ್ಕಾಚಾರ ಇದೆ.

ಯಾರಗ್ತಾರೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎದುರಾಳಿ… ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು..? ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕೆಂಬ ಇರಾದೆ ಕಾಂಗ್ರೆಸ್‌ಗೆ… ಕಾಂಗ್ರೆಸ್ ಟಿಕೆಟ್ ಒಬಿಸಿಗೋ…? ಲಿಂಗಾಯತ ಸಮುದಾಯಕ್ಕೋ..? ಇಂತಹದೊಂದು ಪ್ರಶ್ನೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ, ಹೇಗಾದರೂ ಮಾಡಿ ಈ ಸಲ ಬಿಜೆಪಿಯ ಪ್ರಹ್ಲಾದ ಜೋಶಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು. ಅದಕ್ಕಾಗಿ ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಬಯಕೆ ಪಕ್ಷದ್ದು. ಇದರೊಂದಿಗೆ ಪಕ್ಷದ ಮೂಲ ಸಿದ್ಧಾಂತ, ಸಾಮಾಜಿಕ ನ್ಯಾಯಕ್ಕೂ ಧಕ್ಕೆಯುಂಟಾಗ ಬಾರದು. ಆ ರೀತಿ ನಿಭಾಯಿಸುವುದು ಎಂಬ ಲೆಕ್ಕಾಚಾರ ಪಕ್ಷದ ವರಿಷ್ಠರು ಮಾಡುತ್ತಿದ್ದಾರೆ. ಅಖಂಡ ಧಾರವಾಡ ಜಿಲ್ಲೆ ಎಂದರೆ ಹಾವೇರಿ, ಗದಗ, ಧಾರವಾಡ ಮೂರು ಜಿಲ್ಲೆಗಳು ಸೇರಿಕೊಳ್ಳುತ್ತವೆ.

ಸಹಜವಾಗಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಒಬಿಸಿ ಕೊಟ್ಟರೆ, ಇಲ್ಲಿ ಲಿಂಗಾಯತ ಸೇರಿ ದಂತೆ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಪಕ್ಷ. ಅದರಂತೆ ಕಳೆದ ಚುನಾವಣೆವರೆಗೂ ಹಾವೇರಿಗೆ ಅಲ್ಪಸಂಖ್ಯಾ ತರಿಗೆ ಟಿಕೆಟ್ ಕೊಡುತ್ತಿತ್ತು. ಆದ್ರೆ ಕಳೆದ ಚುನಾವಣೆಯಲ್ಲಿ ಹಾವೇರಿಗೆ ರೆಡ್ಡಿ ಸಮುದಾಯಕ್ಕೆ ನೀಡಿದ್ದರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿತ್ತು. ಸದ್ಯ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಆನಂದಸ್ವಾಮಿ ಗಡ್ಡದೇವರಮಠರಿಗೆ ಟಿಕೆಟ್ ಘೋಷಣೆ ಮಾಡಿದೆ.

ಇದರಿಂದಾಗಿ ಧಾರವಾಡಕ್ಕೆ ಒಬಿಸಿಗೆ ಟಿಕೆಟ್ ಕೊಡಬೇಕು. ಅಂದ್ರೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಅಥವಾ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಮುಸ್ಲಿಂ ಸಮುದಾಯಕ್ಕೆ ನೀಡಿದರೆ ಚುನಾವಣೆ ಪಕ್ಕಾ ಒಂದು ಸೈಡ್ ಆದಂತಾಗುತ್ತದೆ. ಆಗ ಸಹಜವಾಗಿ ಬಿಜೆಪಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆಯೂ ಉಂಟು. ಈ ಹಿನ್ನೆಲೆಯಿಂದಲೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಶಾಕೀರ ಸನದಿ ಅವರಿಗೆ ಹುಡಾ ಅಧ್ಯಕ್ಷಗಿರಿ ನೀಡಿ ಸಮಾಧಾನ ಪಡಿಸಲಾಗಿದೆ. ಈ ಮೂಲಕ ಟಿಕೆಟ್ ಕೊಡುವುದು ಡೌಟು ಎಂದೇ ಹೇಳಲಾಗುತ್ತಿದೆ.

ಇನ್ನು ಒಬಿಸಿ ಪಟ್ಟಿಯಲ್ಲಿ ಸೇರುವ ವಿನೋದ ಅಸೂಟಿಗೂ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷಗಿರಿ ನೀಡಿ ಅವರನ್ನು ಸಮಾಧಾನ ಪಡಿಸಲಾಗಿದೆ. ಆದ್ರೂ ಒಬಿಸಿಗೆ ಟಿಕೆಟ್ ನೀಡಿದರೆ ವಿನೋದ ಅಸೂಟಿ ಹಾಗೂ ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದ ಡಿ.ಕೆ. ನಾಯ್ಕರ ಪುತ್ರ ಲೋಹಿತ ನಾಯ್ಕರ ಹೆಸರು ಮುನ್ನೆಲೆಗೆ ಬಂದಿದೆ. ಒಬಿಸಿ ಬದಲು ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ನೀಡಿದರೆ ಉತ್ತಮ. ಲಿಂಗಾಯತರ ಬೆಂಬಲವೂ ಸಿಗಬಹುದು ಎಂಬ ಲೆಕ್ಕಾಚಾರವುಂಟು.

Also Read: ಮಳೆ ಕೈಕೊಟ್ಟರೂ ಕೈಹಿಡಿದಿದೆ ನೇರಳೆ ಗೋಧಿ! ಇದ್ಯಾವ ಸೀಮೆ ಗೋಧಿ?

ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಸಚಿವ ಲಕ್ಷ್ಮಿ ಹೆಬ್ಬಾಳಕರ ಅಳಿಯ ರಜತ್ ಉಳ್ಳಾಗಡ್ಡಿಮಠ ಹೆಸರು ಕೂಡ ಕೇಳಿ ಬರುತ್ತಿದೆ. ಆದ್ರೆ ಇವರಲ್ಲಿ ಲಿಂಬಿಕಾಯಿ ಹೆಸರು ಕೊಂಚ ಮುಂಚೂಣಿಯಲ್ಲಿದೆ.ಇಗಾಗಲೇ ಲಿಂಬಿಕಾಯಿ ಡಿಕೆ ಬೇಟಿ ಆಗಿ ಬಂದಿದ್ದಾರೆ.ಇನ್ನು ಲಿಂಬಿಕಾಯಿ ಲಿಂಗಾಯತ ಸಮುದಾಯ..

ಹೀಗಾಗಿ ಬ್ರಾಹ್ಮಣ ಸಮುದಾಯದ ಜೋಶಿ ವಿರುದ್ದ ಲಿಂಗಾಯತ ಅಸ್ತ್ರ ಬಳಸಲು ಹೈಕಮಾಂಡ್ ಮುಂದಾಗಿದೆ.. ಕಳೆದ 1996ರಿಂದ ನಡೆದ 7 ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲ. ಮೂರು ಬಾರಿ ಬಿಜೆಪಿಯಿಂದ ವಿಜಯ ಸಂಕೇಶ್ವರ ಗೆದ್ದಿದ್ದರೆ, ನಂತರದ ನಾಲ್ಕು ಚುನಾವಣೆಯಲ್ಲಿ ಪ್ರಹ್ಲಾದ ಜೋಶಿ ಗೆಲುವು ಕಂಡಿದ್ದಾರೆ. ಅಂದ್ರೆ ಏಳು ಚುನಾವಣೆಯಿಂದಲೂ ಬಿಜೆಪಿಯದ್ದೇ ಪಾರುಪತ್ಯ ಆಗಿದೆ.

ಈ ಸಲ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಶಿ ಅವರ ಐದನೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಂತಹ ಸಾಮರ್ಥ್ಯ ಇರುವ ಅಭ್ಯರ್ಥಿಯನ್ನು ಅಳೆದು ತೂಗಿ ಹಾಕಲು ಕಾಂಗ್ರೆಸ್​​ ನಿರ್ಧರಿಸಿದೆ. ಒಟ್ಟಿನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಭಾರೀ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ..

ಲೋಕ ಸಭಾ ಚುನಾವಣೆ 2024 ಕುರಿತಾದ ಹೆಚ್ಚಿನ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ