Loading video

ತಾವೇ ಹಲ್ಲೆ ಮಾಡಿಸಿಕೊಂಡಿರಬಹುದು: ಮುನಿರತ್ನ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು

|

Updated on: Dec 26, 2024 | 10:29 AM

ಮೊಟ್ಟೆ ಎಸೆತ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಮಾಡಿರುವ ಆರೋಪಗಳಿಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಬಿಜೆಪಿ ಡ್ರಾಮಾ ಕಂಪನಿ ತರ ವರ್ತಿಸುತ್ತಿದ್ದು, ಅವರ ಕಡೆಯವರೇ ಮುನಿರತ್ನ ಮೇಲೆ ಮೊಟ್ಟೆ ಎಸೆದಿರಬಹುದು ಎಂದಿದ್ದಾರೆ. ಗುಂಡೂರಾವ್ ಮಾತಿನ ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಡಿಸೆಂಬರ್ 24: ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೃತ್ಯದ ಹಿಂದೆ ಡಿಕೆ ಶಿವಕುಮಾರ್, ಡಿ.ಕೆ.ಸುರೇಶ್, ಕುಸುಮಾ ಕೈವಾಡ ಇದೆ ಎಂಬ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮುನಿರತ್ನ ತಾವೇ ಹಲ್ಲೆ ಮಾಡಿಸಿಕೊಂಡಿರಬಹುದು, ಬಿಜೆಪಿ ಡ್ರಾಮಾ ಕಂಪನಿ ರೀತಿ ವರ್ತನೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರು ಬಾಯಿಗೆ ಬಂದ ಹಾಗೆ ಆರೋಪ‌ ಮಾಡುತ್ತಿದ್ದಾರೆ. ಸಿ.ಟಿ.ರವಿ, ಮುನಿರತ್ನ ಪ್ರಕರಣದಲ್ಲಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಕಪೋಕಲ್ಪಿತ ಮಾತುಗಳನ್ನು ಸೇರಿಸುವುದು ಯಾವ ನ್ಯಾಯ? ಪಾಪ, ಕುಸುಮಾ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕೆಂಬ ಸ್ಥಿತಿ ಮುನಿರತ್ನಗೆ ಬಂದಿದೆ. ಸುಳ್ಳು, ಕರುಣೆ ಬರುವ ರೀತಿ ಸನ್ನಿವೇಶ ಸೃಷ್ಟಿ ಮಾಡುವ ಕಲಾವಿದರು ಇವರು. ಜನರಿಗೆ ಇದು ಮನೋರಂಜನೆ, ನಿಜಾಂಶ ಜನರಿಗೆ ಗೊತ್ತಿದೆ ಎಂದು ಬೆಳಗಾವಿಯಲ್ಲಿ ಗುಂಡೂರಾವ್ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ