ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ-ಖಾಲಿ, ಸೇವೆಗಳಿಗೆ ಹೊಡೆತ

ಕರ್ನಾಟಕದಲ್ಲಿ ಸರ್ಕಾರ ನೀಡಬೇಕಾದ ಬಹುತೇಕ ಸೇವೆಗಳಲ್ಲಿ ವಿಳಂಬವಾಗಿದೆ, 20 ಸಾವಿರ ಉದ್ಯೋಗಗಳು ಖಾಲಿ ಇವೆ. ಕಾಂಗ್ರೆಸ್​ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಈಗ ಒಂದು ವರ್ಷ 7 ತಿಂಗಳು ಕಳೆದಿದೆ. ಇದುವರೆಗೂ ನೇಮಕಾತಿ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ನೀಡಿಲ್ಲ.

ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ-ಖಾಲಿ, ಸೇವೆಗಳಿಗೆ ಹೊಡೆತ
ಉದ್ಯೋಗImage Credit source: Business Today
Follow us
ನಯನಾ ರಾಜೀವ್
|

Updated on:Dec 26, 2024 | 9:58 AM

ಕರ್ನಾಟಕದಲ್ಲಿ 20 ಸಾವಿರ ಸರ್ಕಾರಿ ಹುದ್ದೆಗಳು ಭರ್ತಿಯಾಗದೇ ಇರುವುದರಿಂದ ನಾಗರಿಕರು ಹಲವು ಸೇವೆಗಳಲ್ಲಿ ವಿಳಂಬ ಎದುರಿಸಬೇಕಾಗಿದೆ. 20,446 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅಂಕಿಶಂಗಳ ಪ್ರಕಾರ, ಆಡಳಿತದಲ್ಲಿನ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಭರ್ತಿಯಾಗದೇ ಬಾಕಿ ಉಳಿದಿದೆ.

ರಾಜ್ಯದಲ್ಲಿ 7.72 ಲಕ್ಷ ಸರ್ಕಾರಿ ಉದ್ಯೋಗಗಳು ಮಂಜೂರಾಗಿವೆ, ಅವುಗಳಲ್ಲಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಳೆದ ವರ್ಷ ಇದ್ದ ಖಾಲಿ ಹುದ್ದೆಗಳ ಸಂಖ್ಯೆ 2.55 ಲಕ್ಷ ಎಂದು ಡೆಕ್ಕನ್ ಹೆರಾಲ್ಡ್​ ವರದಿ ಮಾಡಿದೆ. ಇದೀಗ ಹೆಚ್ಚುವರಿಯಾಗಿ 20 ಸಾವಿರಕ್ಕೂ ಅದಿಕ ಹುದ್ದೆಗಳು ಸೇರ್ಪಡೆಗೊಂಡಿವೆ. ಕಾಂಗ್ರೆಸ್​ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಈಗ ಒಂದು ವರ್ಷ 7 ತಿಂಗಳು ಕಳೆದಿದೆ.

ಹಣಕಾಸು ಇಲಾಖೆಯ ಪ್ರಕಾರ, ಕೇಸ್​ ಟು ಕೇಸ್ ಆಧಾರದ ಮೇಲೆ ನೇಮಕಾತಿಗೆ ಅನುಮತಿ ನೀಡಲಾಗುತ್ತದೆ. ಆದರೆ ಸ್ಪಷ್ಟವಾಗಿ ಸಿದ್ದರಾಮಯ್ಯ ಆಡಳಿತವು ಖಾತರಿ ಯೋಜನೆಗಳಿಗೆ 63,000 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಿದೆ. ಹಾಗಅಗಿ ನೇಮಕಾತಿಯಲ್ಲಿ ನಿಧಾನವಾಗುತ್ತಿದೆ.

ಮತ್ತಷ್ಟು ಓದಿ: ಸರ್ಕಾರಿ ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಖಾಲಿ ಹುದ್ದೆಗಳು ಕೆಲಸದ ವಿಳಂಬವನ್ನು ಸೃಷ್ಟಿಸುತ್ತಿದೆ ಮತ್ತು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದಂತಾಗುತ್ತಿದೆ ಎಂದು ಕಾರ್ಕಳ ಬಿಜೆಪಿ ಶಾಸಕ ಮಾಜಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವುದು ಜನರಿಗೆ ಮನೆ ನಿರ್ಮಿಸಲು ಅವಶ್ಯಕವಾಗಿದೆ. ಅವರು ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಉಡುಪಿಯಲ್ಲಿ ಇದಕ್ಕೆ ಇಬ್ಬರು ನೌಕರರು ಮಾತ್ರ ಇದ್ದಾರೆ.

ವಿಲೇವಾರಿ ಮಾಡಲು ಸ್ಥಳ ಭೇಟಿ ಮಾಡಲು ಯಾವುದೇ ಮಾರ್ಗವಿಲ್ಲ. ಅಪ್ಲಿಕೇಷನ್​ಗಳು 2 ಸಾವಿರ ರೂ.,ಗೆ ಸಿಗುತ್ತಿದ್ದುದು ಈಗ 20 ಸಾವಿರ ರೂ. ಪಾವತಿಸುವಂತಾಗಿದೆ. ಶೇ.65ರಷ್ಟು ಸಿಬ್ಬಂದಿ ಕೊರತೆಯಿಂದ ಕೃಷಿ ಇಲಾಖೆ ಅತ್ಯಂತ ಕೆಟ್ಟಾಗಿದೆ ಎಂದು ಹೇಳಿದ್ದಾರೆ.

ಖಾಲಿ ಹುದ್ದೆಗಳು ಹೆಚ್ಚಿದ್ದು ಎಲ್ಲಾ ಹೊರಗುತ್ತಿಗೆ ನಿಡಲಾಗುತ್ತಿದೆ. 96, 000 ಸಿ ಗ್ರೂಪ್, ಡಿ ಉದ್ಯೋಗಿಗಳು, ಸೈನೋಗ್ರಾಫರ್​ಗಳು, ಟೈಪಿಸ್ಟ್​ಗಳು, ಡ್ರೈವರ್​ಗಳು ಇತ್ಯಾದಿಯನ್ನು ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ. ನವೆಂಬರ್ 2022 ರಲ್ಲಿ, ಆಗಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದೊಳಗೆ ಒಂದು ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು, ಅದು ಸಾಧ್ಯವಾಗಲಿಲ್ಲ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:39 am, Thu, 26 December 24

ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ಸುಧಾಕರ್ ವಿರುದ್ಧ ಈಶ್ವರ್ ಗೆದ್ದಿರುವುದನ್ನು ನಾವು ಅಂಗೀಕರಿಸಬೇಕು: ರೆಡ್ಡಿ
ಸುಧಾಕರ್ ವಿರುದ್ಧ ಈಶ್ವರ್ ಗೆದ್ದಿರುವುದನ್ನು ನಾವು ಅಂಗೀಕರಿಸಬೇಕು: ರೆಡ್ಡಿ