Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Facebook Live | ಹೊಸ ವರ್ಷಕ್ಕೆ ಮಾರ್ಗಸೂಚಿ: ಎಷ್ಟರಮಟ್ಟಿಗೆ ಸ್ವಾಗತಾರ್ಹ?

ಬೆಂಗಳೂರಿನಲ್ಲಿ ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಮತ್ತು ಎಂ.ಜಿ.ರೋಡ್ ಸೇರಿದಂತೆ ಕೆಲವು ಏರಿಯಾಗಳು ನ್ಯೂ ಇಯರ್ ಪಾರ್ಟಿಗೆ ಹೆಸರುವಾಸಿಯಾಗಿದೆ. ವರ್ಷದ ಕೊನೆಯ ದಿನದಲ್ಲಿ ಮಾಡುವ ಪಾರ್ಟಿಗಳಿಂದ ಏರಿಯಾದ ಪಬ್​ಗಳಿಗೆ ಹೆಚ್ಚು ಆದಾಯ ಗಳಿಸುವುದಕ್ಕೊಂದು ಉತ್ತಮ ಸಮಯ ಕೂಡಾ ಇದಾಗಿತ್ತು.

Tv9 Facebook Live | ಹೊಸ ವರ್ಷಕ್ಕೆ ಮಾರ್ಗಸೂಚಿ: ಎಷ್ಟರಮಟ್ಟಿಗೆ ಸ್ವಾಗತಾರ್ಹ?
ಪಬ್ ಮಾಲೀಕ ಪ್ರತೀಕ್ ಶೆಟ್ಟಿ, ಮಾಡೆಲ್ ನಂದಿನಿ ಹಾಗೂ ತಜ್ಞ ವೈದ್ಯ ಡಾ. ಅಂಜನಪ್ಪ
Follow us
sandhya thejappa
| Updated By: ರಾಜೇಶ್ ದುಗ್ಗುಮನೆ

Updated on: Dec 29, 2020 | 9:06 PM

ಬೆಂಗಳೂರು: ದೇಶದಲ್ಲಿ ಕೊರೊನಾ ಹೊಸ ಪ್ರಭೇದದ ಸೋಂಕು ಕಾಣಿಸಿಕೊಂಡಿದೆ. ಈ ಬಾರಿಯ ಹೊಸ ವರ್ಷಾಚರಣೆಗೂ ನಿರ್ಬಂಧದ ಬಿಸಿ ತಟ್ಟಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವರ್ಷದ ಸಂಭ್ರಮಕ್ಕೆ ಮಾರ್ಗಸೂಚಿ ಹೊರಡಿಸಿದ್ದು, ಬೆಂಗಳೂರಿನ ಜನರಿಗೆ ದೊಡ್ಡ ಶಾಕ್ ಎದುರಾಗಿದೆ. ಈ ಮಾರ್ಗಸೂಚಿ ಎಲ್ಲರ ಆರೋಗ್ಯದ ಹಿತಾಸಕ್ತಿಯಿಂದ ಕೂಡಿದ್ದರು, ದೊಡ್ಡ ಮಟ್ಟದ ಸಂಭ್ರಮಕ್ಕೆ ಕಡಿವಾಣ ಬಿದ್ದಂತೆ ಎಲ್ಲರ ಮೊಗದಲ್ಲಿ ಬೇಸರ ಮೂಡಿದೆ.

ಡಿಸೆಂಬರ್ 31ರ ಸಂಜೆಯಿಂದ ಜನವರಿ 1ರ ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಈ ಕುರಿತು ಟಿವಿ9 ಫೇಸ್​ಬುಕ್ ಲೈವ್​ನಲ್ಲಿ ಚರ್ಚೆ ನಡೆಸಲಾಯಿತು. ಚರ್ಚೆಯನ್ನು ಟಿವಿ9 ವರದಿಗಾರ ಆನಂದ್ ಬುರಲಿ ನಡೆಸಿಕೊಟ್ಟರು. ಪಬ್ ಮಾಲೀಕ ಪ್ರತೀಕ್ ಶೆಟ್ಟಿ, ಮಾಡೆಲ್ ನಂದಿನಿ ಹಾಗೂ ತಜ್ಞ ವೈದ್ಯ ಡಾ. ಅಂಜನಪ್ಪ ಭಾಗಿಯಾಗಿದ್ದರು.

ಬೆಂಗಳೂರಿನಲ್ಲಿ ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್ ಮತ್ತು ಎಂ ಜಿ ರೋಡ್ ಸೇರಿದಂತೆ ಕೆಲವು ಏರಿಯಾಗಳು ನ್ಯೂ ಇಯರ್ ಪಾರ್ಟಿಗೆ ಹೆಸರುವಾಸಿಯಾಗಿದೆ. ವರ್ಷದ ಕೊನೆಯ ದಿನದಲ್ಲಿ ಮಾಡುವ ಪಾರ್ಟಿಯಿಂದ ಏರಿಯಾದ ಪಬ್​ಗಳಿಗೆ ಹೆಚ್ಚು ಆಧಾಯ ಗಳಿಸುವುದಕ್ಕೊಂದು ಉತ್ತಮ ಸಮಯ ಕೂಡಾ ಆಗಿತ್ತು. ಆದರೆ ಈ ಭಾರಿ ಇದಕ್ಕೆ ಕೊಕ್ಕೆ ಬಿದ್ದಿದೆ. ಪಬ್ ಮಾಲೀಕರಿಗೆ ವರ್ಷಾಚರಣೆ ಮಾರ್ಗಸೂಚಿಗಳಿಂದ ಎಷ್ಟರಮಟ್ಟಿಗೆ ಹೊಡೆತ ಬಿದ್ದಿದೆ ಎಂಬ ಪ್ರಶ್ನೆಯನ್ನು ಪಬ್ ಮಾಲೀಕ ಪ್ರತೀಕ್ ಶೆಟ್ಟಿ ಮುಂದೆ ಇಡಲಾಯಿತು.

ಇದಕ್ಕೆ ಉತ್ತರಿಸಿದ ಪ್ರತೀಕ್ ಶೆಟ್ಟಿ, ಮುನ್ನೆಚ್ಚರಿಕೆ ಕ್ರಮಗಳ ಉದ್ದೇಶದಿಂದ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ತಿಳಿ ಹೇಳುವ ಜೊತೆಗೆ ಸ್ಯಾನಿಟೈಸರ್​ಗಳ ವ್ಯವಸ್ಥೆ ಮಾಡಲಾಗಿದೆ. ಕುಣಿದು ಕುಪ್ಪಳಿಸುವ ಡಿಜೆಗಳನ್ನು ಬಳಸದೇ ಸಾಮಾಜಿಕ ಅಂತರದ ಬಗ್ಗೆ ಗಮಸಹರಿಸುತ್ತೇವೆ ಎಂದರು.

ಮಾಡೆಲ್ ನಂದಿನಿ ಮಾತನಾಡಿ, ಕಳೆದ ಬಾರಿ ಹೊಸ ವರ್ಷದ ಆಗಮನವನ್ನು ಹಬ್ಬದಂತೆ ಸ್ವಾಗತಿಸಿದ್ದೆವು. ಆದರೆ ಈ ಸಲ ಇದಕ್ಕೆ ಅವಕಾಶವಿಲ್ಲ. ಈ ಕುರಿತು ಬೇಸರವೂ ಇದೆ. ಕೊರೊನಾ ಹಾವಳಿಯ ಸಂದಿಗ್ದ ಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪಾರ್ಟಿಯಲ್ಲಿ ಮುಳುಗಿದಾಗ ಕೊರೊನಾ ಭೀತಿ ಮರೆಯುತ್ತಾರೆ. ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಕೈಗೊಂಡಿರುವ ನಿರ್ಧಾರ ಉತ್ತಮವಾಗಿದೆ ಎಂದು ತಿಳಿಸಿದರು.

ಎಲ್ಲೆಡೆ ಕೊರೊನಾ ಹೊಸ ಪ್ರಬೇಧದ ಆತಂಕವಿದೆ. ಈ ನಡುವೆ ಅದ್ದೂರಿ ವರ್ಷಾಚರಣೆಗೆ ಕಡಿವಾಣ ಹಾಕಿದ್ದು, ಬಹಳಷ್ಟು ಜನರು ಇದಕ್ಕೆ ಬದ್ಧರಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಜ್ಞ ವೈದ್ಯರಾದ ಡಾ.ಅಂಜನಪ್ಪ, ಹಲವರು ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಮುಖಕ್ಕೆ ಹಾಕಬೇಕಾದ ಮಾಸ್ಕ್ ಕುತ್ತಿಗೆಯಲ್ಲಿರುತ್ತದೆ. ಇಂತಹ ಬೇಜವಾಬ್ದಾರಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ಮರೆತಿದ್ದಾರೆ. ಇದನ್ನು ಮನಗಂಡ ಸರ್ಕಾರ ಈ ಬಾರಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದರು.

Tv9 Facebook Live | ರೂಪಾ ಅವರದ್ದು ಹಸ್ತಕ್ಷೇಪ ಎಂದು ಹೇಳಲು ಸಾಧ್ಯವಿಲ್ಲ: ನಿವೃತ್ತ IAS ಅಧಿಕಾರಿ ಮದನ್ ಗೋಪಾಲ್