ಬ್ರಾಹ್ಮಣ ಜಾತಿಯ ಅವಹೇಳನ ಆರೋಪ: ಪಠ್ಯಕ್ರಮದಿಂದ ಪೀಠಿಕೆ ಕೈಬಿಡಲು ಶಿಕ್ಷಣ ಸಚಿವರ ಆದೇಶ

ಈ ಪಠ್ಯದಲ್ಲಿ ಬ್ರಾಹ್ಮಣ ಜಾತಿಯ ಅವಹೇಳನ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ಪಠ್ಯದ ಭಾಗವನ್ನು ತೆಗೆದುಹಾಕುವಂತೆ ಲಿಖಿತ ಟಿಪ್ಪಣಿ ಕಳಿಸಿದ್ದಾರೆ.

ಬ್ರಾಹ್ಮಣ ಜಾತಿಯ ಅವಹೇಳನ ಆರೋಪ: ಪಠ್ಯಕ್ರಮದಿಂದ ಪೀಠಿಕೆ ಕೈಬಿಡಲು ಶಿಕ್ಷಣ ಸಚಿವರ ಆದೇಶ
ಸಚಿವ ಎಸ್​. ಸುರೇಶ್​ ಕುಮಾರ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 17, 2020 | 8:52 PM

ಬೆಂಗಳೂರು: ಆರನೇ ತರಗತಿ ಸಮಾಜ ವಿಜ್ಞಾನ ಭಾಗ-1ರ 7ನೇ ಪಾಠದಲ್ಲಿರುವ ‘ಹೊಸಧರ್ಮಗಳು ಏಕೆ ಉದಯಿಸಲ್ಪಟ್ಟವು’ ಎಂಬ ಪೀಠಿಕಾ ಸ್ವರೂಪದ ಸಾಲುಗಳನ್ನು ಪಠ್ಯಕ್ರಮದಿಂದ ಕೈಬಿಡಲು ಶಿಕ್ಷಣ ಸಚಿವ ಎಸ್​.ಸುರೇಶ್​ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಈ ಪಠ್ಯದಲ್ಲಿ ಬ್ರಾಹ್ಮಣ ಜಾತಿಯ ಅವಹೇಳನ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ಪಠ್ಯದ ಭಾಗವನ್ನು ತೆಗೆದುಹಾಕುವಂತೆ ಲಿಖಿತ ಟಿಪ್ಪಣಿ ಕಳಿಸಿದ್ದಾರೆ.

1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ‘ಇಂಥ ಸಂಕೀರ್ಣ’ ವಿಷಯಗಳ ಕುರಿತು (ಪರಾಮರ್ಶನೆಗೆ) ಶಿಕ್ಷಕರು ಹಾಗೂ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು. 15 ದಿನಗಳ ಒಳಗೆ ವರದಿ ಪಡೆದು ತಮಗೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ವರದಿ ಸಲ್ಲಿಸಿದ ನಂತರ, ಅದನ್ನು ಪರಾಮರ್ಶಿಸಲು ತಜ್ಞರ ಸಮಿತಿಯೊಂದನ್ನು ನೇಮಿಸಲಾಗುವುದು ಎಂದು ಸಚಿವ ಸುರೇಶ್​ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಎಸ್.ಸುರೇಶ್​ಕುಮಾರ್ ಕಳಿಸಿರುವ ಟಿಪ್ಪಣಿ