ಮೈಲಾರ ಲಿಂಗೇಶ್ವರನಿಗೆ ಡಿ.ಕೆ. ಶಿವಕುಮಾರ್ ಕಾಣಿಕೆ.. ಬೆಳ್ಳಿ ಹೆಲಿಕಾಪ್ಟರ್ ಗಿಫ್ಟ್​! ಕಾರಣವೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 18, 2020 | 12:07 PM

ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಿಕುಮಾರ್​ ಭೇಟಿಕೊಟ್ಟರು. ಶಿವಕುಮಾರ್​ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಿದರು.ಇದೇ ವೇಳೆ, ದೇಗುಲಕ್ಕೆ ಡಿ.ಕೆ.ಶಿವಕುಮಾರ್​ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದರು.

ಮೈಲಾರ ಲಿಂಗೇಶ್ವರನಿಗೆ ಡಿ.ಕೆ. ಶಿವಕುಮಾರ್ ಕಾಣಿಕೆ.. ಬೆಳ್ಳಿ ಹೆಲಿಕಾಪ್ಟರ್ ಗಿಫ್ಟ್​! ಕಾರಣವೇನು ಗೊತ್ತಾ?
ಮೈಲಾರಲಿಂಗೇಶ್ವರನಿಗೆ ಕಾಣಿಕೆಯಾಗಿ ಬೆಳ್ಳಿ ಹೆಲಿಕಾಪ್ಟರ್ ಗಿಫ್ಟ್​ ನೀಡಿದ ಡಿಕೆಶಿ
Follow us on

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಿಕುಮಾರ್​ ಭೇಟಿ ಕೊಟ್ಟರು. ಶಿವಕುಮಾರ್​ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹ ಸಲ್ಲಿಸಿದರು. ಇದೇ ವೇಳೆ, ದೇಗುಲಕ್ಕೆ ಡಿ.ಕೆ. ಶಿವಕುಮಾರ್​ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದರು.

ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದ್ದಕ್ಕೆ ಕಾರಣವೇನು?
ಅಂದ ಹಾಗೆ, 2018ರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಡಿ.ಕೆ. ಶಿವಕುಮಾರ್​ ಅವರ ಹೆಲಿಕಾಪ್ಟರ್ ಹಾದುಹೋಗಿತ್ತಂತೆ. ಹೀಗಾಗಿ, ಇದರಿಂದಲೇ, ದೇವರಿಗೆ ಅಪಚಾರ ಆಗಿತ್ತೆಂದು ಮತ್ತು ಡಿ.ಕೆ.ಶಿವಕುಮಾರ್​ಗೆ ಭಾರಿ ಸಮಸ್ಯೆಗಳು ಎದುರಾಗಿದ್ದವು ಎಂದು ಕೇಳಿಬಂದಿತ್ತು. ಹೀಗಾಗಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಣಿಕೆ ನೀಡಿದರು. ಕಾರ್ಯಕರ್ತರು ಹಾಗೂ ದೇಗುಲದ ಗುರುಗಳ ಸಲಹೆ ಮೇರೆಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ದೇವಸ್ಥಾನದ ಆವರಣದಲ್ಲಿ 5 ಬಾರಿ ದೀರ್ಘದಂಡ ನಮಸ್ಕಾರ ಹಾಕಿದ ಶಿವಕುಮಾರ್​ ಬಳಿಕ ರುದ್ರಸ್ನಾನದ ವಿಧಿ ನೆರವೇರಿಸಿ, ಪೂಜೆ ಸಲ್ಲಿಸಿದರು. ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬೆಳ್ಳಿಯ ಹೆಲಿಕ್ಯಾಪ್ಟರ್ ನೀಡಿ ಹರಕೆ ತೀರಿಸಿದರು. ಸುಮಾರು 1 ಕೆ.ಜಿ‌ ತೂಕದ ಬೆಳ್ಳಿಯಿಂದ ಮಾಡಿರುವ ಹೆಲಿಕಾಪ್ಟರ್​ನ ಶಿವಕುಮಾರ್​ ಕಾಣಿಕೆಯಾಗಿ ನೀಡಿದರು.