ಜೈಕಾರ ಹಾಕೋರು, ಧಿಕ್ಕಾರ ಹಾಕೋರು, ಕಲ್ಲು ಎಸೆಯೋರು ಇದ್ದಾರೆ; ಬಿಜೆಪಿಯರು ಹೀಗೆ ಮಾಡಿದಷ್ಟು ನಮಗೆ ಒಳ್ಳೆಯದೇ: ಡಿ.ಕೆ. ಶಿವಕುಮಾರ್

| Updated By: ganapathi bhat

Updated on: Apr 05, 2022 | 1:07 PM

ರಾಜಕೀಯದಲ್ಲಿದ್ದಾಗ ಇವೆಲ್ಲ ಎದುರಿಸಬೇಕು. ಈ ಮಧ್ಯೆ ಕೆಲವರು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಏನು ಆಗಿದೆ ನನಗೆ ಗೊತ್ತಿಲ್ಲ. ಆದ್ರೆ ನಾನು ಎಲ್ಲವನ್ನೂ ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಸಿದ್ಧ.

ಜೈಕಾರ ಹಾಕೋರು, ಧಿಕ್ಕಾರ ಹಾಕೋರು, ಕಲ್ಲು ಎಸೆಯೋರು ಇದ್ದಾರೆ; ಬಿಜೆಪಿಯರು ಹೀಗೆ ಮಾಡಿದಷ್ಟು ನಮಗೆ ಒಳ್ಳೆಯದೇ: ಡಿ.ಕೆ. ಶಿವಕುಮಾರ್
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ಜವಾಬ್ದಾರಿಯುತ ಗೃಹಸಚಿವರು ಏನು ಹೇಳ್ಬೇಕೋ ಹೇಳ್ತಾರೆ. ಹೂವಿನ ಹಾರ ಹಾಕೋರು, ಜೈಕಾರ ಹಾಕೋರು ಇದ್ದಾರೆ. ಧಿಕ್ಕಾರ ಹಾಕೋರು, ಕಲ್ಲು ಎಸೆಯೋರು ಇದ್ದಾರೆ. ಇನ್ನೇನೋ ಎಸೆಯೋರು ಇರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು (ಮಾರ್ಚ್ 28) ಹೇಳಿದ್ದಾರೆ. ನಗರದಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರ ವಾಹನ ಮೇಲೆ ಚಪ್ಪಲಿ ಎಸೆದು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷರಿಗೆ ಭದ್ರತೆ ಒದಗಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಬೊಮ್ಮಾಯಿ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯದಲ್ಲಿದ್ದಾಗ ಇವೆಲ್ಲ ಎದುರಿಸಬೇಕು. ಈ ಮಧ್ಯೆ ಕೆಲವರು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಏನು ಆಗಿದೆ ನನಗೆ ಗೊತ್ತಿಲ್ಲ. ಆದ್ರೆ ನಾನು ಎಲ್ಲವನ್ನೂ ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಸಿದ್ಧ. ಬೆಳಗಾವಿ ಲೋಕಸಭಾ ಕ್ಷೇತ್ರದ ಮಹಾಜನತೆ ನೋಡ್ತಿದ್ದಾರೆ. ಉಪಚುನಾವಣೆಗಾಗಿ ಇಲ್ಲಿಗೆ ಬಂದಿದ್ದೇವೆ. ಶಾಂತ ರೀತಿಯಿಂದ ಕೆಲಸ ನಡೆಸುತ್ತೇವೆ. ಬಿಜೆಪಿಯರು ಇಂತಹ ಮುತ್ತು ರತ್ನಗಳನ್ನು ಇಟ್ಟುಕೊಳ್ಳಲಿ. ಬಿಜೆಪಿಯರು ಹೀಗೆ ಮಾಡಿದಷ್ಟು ನಮಗೆ ಒಳ್ಳೆಯದೇ ಅಲ್ವ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇದು ಬಿಜೆಪಿ ಪ್ರಾಯೋಜಿತವಾದ ಗೂಂಡಾಗಿರಿ
ಡಿ.ಕೆ. ಶಿವಕುಮಾರ್ ಬೆಂಬಲಿಗರ ವಾಹನ ಮೇಲೆ ಚಪ್ಪಲಿ ಎಸೆದು ಗಲಾಟೆ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅಭಿಮಾನಿಗಳೆಂದು ಹೇಳಿಕೊಂಡವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಾರಿನ ಮೇಲೆ ಕಲ್ಲೆಸೆದು ಪುಂಡಾಟಿಕೆ ನಡೆಸಿದ್ದು ಖಂಡನೀಯ. ಇದು ಬಿಜೆಪಿ ಪ್ರಾಯೋಜಿತವಾದ ಗೂಂಡಾಗಿರಿಯಾಗಿದೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಚ್ಚರವಿರಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇನ್ನು, ಇದೇ ಘಟನೆಗೆ ಸಂಬಂಧಿಸಿ ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಗರಂ ಆಗಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿಯ ಕಾರ್ಯಕರ್ತರಿಂದ ಗೂಂಡಾಗಿರಿ ಆಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಪೊಲೀಸರು ರಕ್ಷಣೆ ನೀಡಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ರಕ್ಷಣೆ ಸಿಗದಿದ್ರೆ ಸಾಮಾನ್ಯ ಜನರ ಗತಿ ಏನು? ರಮೇಶ್ ಮೇಲೆ ಕೇಸ್ ದಾಖಲಾಗಿದ್ರೂ ಇನ್ನೂ ಬಂಧಿಸಿಲ್ಲ. ರಮೇಶ್ ಜಾರಕಿಹೊಳಿ ಬಂಧನಕ್ಕೆ ಸಿಎಂ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಿಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ, ಡಿ.ಕೆ. ಶಿವಕುಮಾರ್​ಗೆ ಭದ್ರತೆ: ಬಸವರಾಜ ಬೊಮ್ಮಾಯಿ ಹೇಳಿಕೆ

ನನ್ನನ್ನು ಸ್ವಾಗತಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಿನಂದನೆಗಳು: ಡಿ.ಕೆ. ಶಿವಕುಮಾರ್ ಟಾಂಗ್

Published On - 6:52 pm, Sun, 28 March 21