AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಸಮಸ್ಯೆಗಳನ್ನು ಕೇಳಲು ಅವರ ಜಮೀನಿಗೆ ಬಂದಿದ್ದೇನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮುಖ್ಯಮಂತ್ರಿಗಳೇ ರೈತರ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿದರು. ನಾವು ರೈತರ ಜೊತೆ ನಿಲ್ಲುತ್ತೇವೆ. ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಣೆ ಬಗ್ಗೆ ನಾನೇನೂ ಹೇಳಲಾರೆ. ಅದು ಅವರ ನಿರ್ಧಾರ. ಅವರು ಏನಾದರೂ ಮಾಡಿಕೊಳ್ಳಲಿ.

ರೈತರ ಸಮಸ್ಯೆಗಳನ್ನು ಕೇಳಲು ಅವರ ಜಮೀನಿಗೆ ಬಂದಿದ್ದೇನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಡಿ.ಕೆ. ಶಿವಕುಮಾರ್
sandhya thejappa
|

Updated on:May 31, 2021 | 1:53 PM

Share

ಹುಬ್ಬಳ್ಳಿ: ರೈತರ ಸಮಸ್ಯೆಗಳನ್ನು ಕೇಳಲು ಅವರ ಜಮೀನಿಗೆ ಬಂದಿದ್ದೇನೆ ಎಂದು ಧಾರವಾಡ ತಾಲೂಕಿನ ರಾಯಪುರದಲ್ಲಿ ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೈತರಿಗೆ ತರಕಾರಿ ಮಾರಲು 2 ಗಂಟೆ ಅವಕಾಶ ನೀಡುತ್ತಾರೆ. ಮದ್ಯ ಮಾರಾಟಕ್ಕೆ 4 ಗಂಟೆ ಕಾಲ ಅವಕಾಶವನ್ನು ನೀಡುತ್ತಾರೆ. ಈ ಸರ್ಕಾರಕ್ಕೆ ಕಣ್ಣು, ಹೃದಯ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳೇ ರೈತರ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿದರು. ನಾವು ರೈತರ ಜೊತೆ ನಿಲ್ಲುತ್ತೇವೆ. ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಣೆ ಬಗ್ಗೆ ನಾನೇನೂ ಹೇಳಲಾರೆ. ಅದು ಅವರ ನಿರ್ಧಾರ. ಅವರು ಏನಾದರೂ ಮಾಡಿಕೊಳ್ಳಲಿ. ಸರ್ಕಾರ ನನ್ನ ಬಳಿ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ಡಿಕೆಶಿ ಅಭಿಪ್ರಾಯಪಟ್ಟರು.

ರೈತನ ಕಣ್ಣೀರು ಹಸಿ ಮೆಣಸಿನಕಾಯಿ 1ಕೆ.ಜಿ 40 ರೂ.ಗೆ ಮಾರಾಟವಾಗುತ್ತಿತ್ತು. ಲಾಕ್​ಡೌನ್​ ಹಿನ್ನೆಲೆ 1 ಕೆ.ಜಿಯನ್ನು 1 ರೂ.ಗೆ ಕೇಳುತ್ತಿದ್ದಾರೆ. ಹೇಗೆ ಜೀವನ ಮಾಡುವುದು ಸರ್ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡ ರೈತ ಕಣ್ಣೀರು ಹಾಕಿದ್ದಾರೆ. ನಾವು ಹೇಗೆ ಜೀವನ ಮಾಡಬೇಕು. ನಮಗೆ ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗುವಂತೆ ಮಾಡಿ ಎಂದು ಶಿವಕುಮಾರ್ ಬಳಿ ರೈತರು ಮನವಿ ಮಾಡಿಕೊಂಡರು.

ಫುಡ್ ಕಿಟ್ ವಿತರಣೆ ಮಾಡಿದ ಡಿಕೆಶಿ ಹಾವೇರಿಗೆ ಭೇಟಿ ನೀಡಿದ ಡಿಕೆಶಿ ನಗರದ ಪ್ರವಾಸಿ ಮಂದಿರದಲ್ಲಿ ಬಡವರು, ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಮಾಜಿ ಸಚಿವ ಬಸವರಾಜ ಶಿವಣ್ಣವರ ಅಭಿಮಾನಿ ಬಳಗದ ವತಿಯಿಂದ ತಯಾರಿಸಿದ್ದ ಫುಡ್ ಕಿಟ್​ನ ವಿತರಣೆ ಮಾಡಿದ್ದಾರೆ. ಫುಡ್ ಕಿಟ್ ವಿತರಣೆ ವೇಳೆ ದೈಹಿಕ ಅಂತರ ಮರೆತು ಮುಖಂಡರು ಹಾಗೂ ಜನರು ಭಾಗವಹಿಸಿದ್ದರು.

ಇದನ್ನೂ ಓದಿ

ಧೋನಿ, ರೋಹಿತ್, ಕೊಹ್ಲಿ.. ಯಾರ ನಾಯಕತ್ವದಲ್ಲಿ ಐಪಿಎಲ್ ಆಡಲು ಬಯಸುತ್ತೀರಾ? ಮೈಕಲಾ ವಾನ್ ಉತ್ತರವೇನು?

ಸಮಗ್ರ ಕರ್ನಾಟಕ ವರದಿ: ಯಾವ ಜಿಲ್ಲೆಯಲ್ಲಿ ಎಷ್ಟು ದಿನ ಲಾಕ್​ಡೌನ್? ಜಿಲ್ಲಾವಾರು ನಿಯಮಗಳು ಹೇಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ

(DK Shivakumar said he had come to farm to hear the problems of the farmers)

Published On - 10:24 am, Mon, 31 May 21