ವೈದ್ಯರು ಹೇಳ್ತಿದಾರೆ.. ಜೂನ್-ಜುಲೈನಲ್ಲಿ ರಾಜ್ಯಕ್ಕೆ ಕಾದಿದೆ ಮಹಾಕಂಟಕ
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇದರ ನಡುವೆ ಈಗ ವೈದ್ಯರು ಮತ್ತೊಂದು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಜೂನ್ ಜುಲೈನಲ್ಲಿ ರಾಜ್ಯಕ್ಕೆ ಮತ್ತೊಂದು ಮಹಾಕಂಟಕ ಎದುರಾಗಲಿದೆಯಂತೆ. ಕ್ರೂರಿ ಕೊರೊನಾ ಅಟ್ಟಹಾಸದ ಬೆನ್ನಲ್ಲೆ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಕಾಲಿಡುತ್ತೆ ಇವೆರಡು ಸೇರಿ ನೂರಾರು ಬಲಿ ಆಗೋದು ಪಕ್ಕಾ ಎನ್ನುತ್ತಿದ್ದಾರೆ ವೈದ್ಯರು. ಆದರೆ ಕೊರೊನಾದಿಂದ ಬೇಸತ್ತ ಜನರಿಗೆ ಮತ್ತೊಂದು ಮಹಾಮಾರಿ ಎದುರಾಗುವುದಾದರು ಯಾವುದು ಎಂದರೆ ಅದು ಹೆಚ್ 1 ಎನ್ 1. ತಜ್ಞ ವೈದ್ಯರೇ ಹೇಳುವಂತೆ ಜೂನ್ ಜುಲೈನಲ್ಲಿ […]
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇದರ ನಡುವೆ ಈಗ ವೈದ್ಯರು ಮತ್ತೊಂದು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಜೂನ್ ಜುಲೈನಲ್ಲಿ ರಾಜ್ಯಕ್ಕೆ ಮತ್ತೊಂದು ಮಹಾಕಂಟಕ ಎದುರಾಗಲಿದೆಯಂತೆ.
ಕ್ರೂರಿ ಕೊರೊನಾ ಅಟ್ಟಹಾಸದ ಬೆನ್ನಲ್ಲೆ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಕಾಲಿಡುತ್ತೆ ಇವೆರಡು ಸೇರಿ ನೂರಾರು ಬಲಿ ಆಗೋದು ಪಕ್ಕಾ ಎನ್ನುತ್ತಿದ್ದಾರೆ ವೈದ್ಯರು. ಆದರೆ ಕೊರೊನಾದಿಂದ ಬೇಸತ್ತ ಜನರಿಗೆ ಮತ್ತೊಂದು ಮಹಾಮಾರಿ ಎದುರಾಗುವುದಾದರು ಯಾವುದು ಎಂದರೆ ಅದು ಹೆಚ್ 1 ಎನ್ 1. ತಜ್ಞ ವೈದ್ಯರೇ ಹೇಳುವಂತೆ ಜೂನ್ ಜುಲೈನಲ್ಲಿ ಹೆಚ್ 1 ಎನ್ 1 ಕಂಟಕ ಶುರುವಾಗಲಿದೆಯಂತೆ.
ಕೊರೊನಾ ಜೊತೆಗೆ ರಾಜ್ಯದ ಜನತೆಯನ್ನ ಹೆಮ್ಮಾರಿ ಹೆಚ್ 1 ಎನ್ 1 ಕಾಡಲಿದೆಯಂತೆ. ಎರಡು ರೋಗದ ಗುಣಲಕ್ಷಣಗಳು ಒಂದೇ ಆಗಿದ್ದು ಟೆಸ್ಟ್ ರಿಪೋರ್ಟ್ ಬರುವ ಟೈಮ್ಗೆ ಕೆಲವರು ಬಲಿಯಾಗ್ತಾರೆ. ವೈದ್ಯರು ನರ್ಸ್ಗಳಿಗೂ ಇದು ಭಾರೀ ಒತ್ತಡ ತರಲಿದೆ. ಪರಿಸ್ಥಿತಿ ನಿಭಾಯಿಸೋದು ಕೂಡ ಕಷ್ಟವಾಗಬಹುದು. ಮಹಾಮಾರಿ ಹೆಚ್ 1ಎನ್1, ಕೊರೊನಾ ಜೊತೆಗೆ ವೈರಲ್ ಫೀವರ್ ಕೂಡ ಸೇರಿ ಜನರನ್ನ ಹೆಚ್ಚು ಭಾದಿಸಲಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.