ಆರೋಗ್ಯ ಸಚಿವನಾಗಿದ್ದಾಗ ಡಾ ಸುಧಾಕರ್ ನಡೆಸಿದ ಭ್ರಷ್ಟಾಚಾರ ಸಾಬೀತಾದರೆ ಜೈಲಿಗೆ ಹೋಗುತ್ತಾರೆ: ಸಿದ್ದರಾಮಯ್ಯ

|

Updated on: Apr 18, 2024 | 4:25 PM

ಅವರ ಹೆಸರು ಹೇಳದೆ ಎನ್ ಡಿ ಎ ಅಭ್ಯರ್ಥಿಯೆಂದು ಉಲ್ಲೇಖಿಸಿದ ಸಿದ್ದರಾಮಯ್ಯ, ಅವರು ಭ್ರಷ್ಟರೆಂಬ ಕಾರಣಕ್ಕೆ ಚಿಕ್ಕಬಳ್ಳಾಪುರದ ಜನತೆ ಅಸೆಂಬ್ಲಿ ಚುನಾವಣೆಯಲ್ಲಿ ತಿರಸ್ಕರಿಸಿತ್ತು. ಈಗ ಅವರು ತಮ್ಮ ಪ್ರಭಾವ ಬಳಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಇಂಥ ಭ್ರಷ್ಟ ನಿಮ್ಮ ಸಂಸದನಾಗಲು ಬಯಸುತ್ತೀರಾ? ಎಂದು ಸಿದ್ದರಾಮಯ್ಯ ಜನರನ್ನು ಪ್ರಶ್ನಿಸಿದರು.

ಚಿಕ್ಕಬಳ್ಳಾಪರ: ಹಿಂದೊಮ್ಮೆ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ ಕೆ ಸುಧಾಕರ್ (Dr K Sudhakar) ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತೀವ್ರ ವಾಗ್ದಾಳಿ ನಡೆಸಿದರು. ಅವರ ಹೆಸರು ಹೇಳದೆ ಎನ್ ಡಿ ಎ ಅಭ್ಯರ್ಥಿಯೆಂದು (NDA candidate) ಉಲ್ಲಖಿಸಿದ ಸಿದ್ದರಾಮಯ್ಯ, ಅವರು ಭ್ರಷ್ಟರೆಂಬ ಕಾರಣಕ್ಕೆ ಚಿಕ್ಕಬಳ್ಳಾಪುರದ ಜನತೆ ಅಸೆಂಬ್ಲಿ ಚುನಾವಣೆಯಲ್ಲಿ ತಿರಸ್ಕರಿಸಿತ್ತು. ಈಗ ಅವರು ತಮ್ಮ ಪ್ರಭಾವ ಬಳಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಇಂಥ ಭ್ರಷ್ಟ ನಿಮ್ಮ ಸಂಸದನಾಗಲು ಬಯಸುತ್ತೀರಾ? ಎಂದು ಸಿದ್ದರಾಮಯ್ಯ ಜನರನ್ನು ಪ್ರಶ್ನಿಸಿದರು. ಅವರು ಆರೋಗ್ಯ ಮಂತ್ರಿಯಾಗಿದ್ದಾಗ ನಡೆಸಿದ ಭ್ರಷ್ಟಾಚರಗಳ ತನಿಖೆ ಮಾಡಲು ತಮ್ಮ ಸರ್ಕಾರ ಒಂದು ಆಯೋಗವನ್ನು ರಚಿಸಿದೆ ಮತ್ತು ತಮಗಿರುವ ಮಾಹಿತಿಯ ಪ್ರಕಾರ ಅವರು ನಡೆಸಿದ ಭ್ರಷ್ಟಾಚಾರಗಳಿಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ತನಿಖೆ ಪೂರ್ಣಗೊಂಡು ವರದಿ ಬಹಿರಂಗಗೊಂಡ ಬಳಿಕ ಅವರು ಖಂಡಿತ ಜೈಲಿಗೆ ಹೋಗಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಹಾಗಾಗಿ, ಅವರ ಬಗ್ಗೆ ನೀವೇ ಒಂದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಅಂತ ಜನಕ್ಕೆ ಅರ್ಥವಾಗಿದೆ: ಡಾ ಕೆ ಸುಧಾಕರ್