ಡಾ ಬಾಬು ಕೃಷ್ಣಮೂರ್ತಿಯವರಿಗೆ ‘ಡಾ ಕೆ‌ಎಸ್ ನಾರಾಯಣಾಚಾರ್ಯ ಸಮ್ಮಾನ’ ಬಿರುದು ಪ್ರದಾನ

ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ವಿಶೇಷವಾಗಿ ಇತಿಹಾಸ ಸಂಶೋಧನೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡಿರುವ ಡಾ. ಬಾಬು ಕೃಷ್ಣಮೂರ್ತಿ ಯವರಿಗೆ ಉದ್ಭವಃ - ಸಾಹಿತ್ಯ ಪ್ರಕಾಶನ ಮತ್ತು ಸುಬ್ಬು ಪಬ್ಲಿಕೇಷನ್ಸ್ ವತಿಯಿಂದ "ಡಾ. ಕೆ‌ಎಸ್ ನಾರಾಯಣಾಚಾರ್ಯ ಸಮ್ಮಾನ" ಬಿರುದು ಪ್ರದಾನ ಮಾಡಲಾಗಿದೆ.

ಡಾ ಬಾಬು ಕೃಷ್ಣಮೂರ್ತಿಯವರಿಗೆ ‘ಡಾ ಕೆ‌ಎಸ್ ನಾರಾಯಣಾಚಾರ್ಯ ಸಮ್ಮಾನ’ ಬಿರುದು ಪ್ರದಾನ
ಡಾ ಬಾಬು ಕೃಷ್ಣಮೂರ್ತಿಯವರಿಗೆ ‘ಡಾ ಕೆ‌ಎಸ್ ನಾರಾಯಣಾಚಾರ್ಯ ಸಮ್ಮಾನ’ ಬಿರುದು ಪ್ರದಾನ
Follow us
ಗಂಗಾಧರ​ ಬ. ಸಾಬೋಜಿ
|

Updated on: Jul 27, 2024 | 7:18 PM

ಬೆಂಗಳೂರು, ಜುಲೈ 27: ಆಧ್ಯಾತ್ಮ ಮಾರ್ಗದಲ್ಲಿ ಜ್ಯೋತಿವಾಹಕರಾಗಿದ್ದ ಡಾ. ಕೆ.ಎಸ್ ನಾರಾಯಣಾಚಾರ್ಯರನ್ನು ಸಂಸ್ಮರಿಸುವ ಮೂಲಕ ಗುರುಪೂರ್ಣಿಮೆ ಆಚರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆಯೇ ಸಾಧಕರಲೊಬ್ಬ ಶ್ರೇಷ್ಠರಾದ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ವಿಶೇಷವಾಗಿ ಇತಿಹಾಸ ಸಂಶೋಧನೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡಿರುವ ಡಾ. ಬಾಬು ಕೃಷ್ಣಮೂರ್ತಿ (Dr Babu Krishnamurthy) ಯವರಿಗೆ ಉದ್ಭವಃ – ಸಾಹಿತ್ಯ ಪ್ರಕಾಶನ ಮತ್ತು ಸುಬ್ಬು ಪಬ್ಲಿಕೇಷನ್ಸ್ ವತಿಯಿಂದ “ಡಾ. ಕೆ‌ಎಸ್ ನಾರಾಯಣಾಚಾರ್ಯ ಸಮ್ಮಾನ” (Dr KS Narayanacharya) ಎಂಬ ಬಿರುದನ್ನು ಪತ್ತಿ ಸಭಾಂಗಣ ನ.ರಾ ಕಾಲೋನಿಯಲ್ಲಿ ಪ್ರದಾನ ಮಾಡಲಾಗಿದೆ.

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತ ವಿದ್ವಾಂಸ ಡಾ . ನೀಲೇಶ್ ಓಕ್ ರವರು ಮತ್ತು ಯಶೋದೀಪ್ ದೇವಧರ್ ರವರು ಭಾರತೀಯ ಇತಿಹಾಸದ ಪ್ರಾಚೀನತೆಯ ಬಗ್ಗೆ ಮತ್ತು ರಾಮಾಯಣ – ಒಂದು ಅದ್ಭುತ ಎಂಬುದರ ಬಗ್ಗೆ ತಮ್ಮ ವಿಷಯವನ್ನು ಮಂಡಿಸಿದರು. ಶಿವಶಂಕರ್ ಶಾಸ್ತ್ರಿಯವರು ಸಂಸ್ಕೃತವು ಭಾರತದ ಹೊರಗಿನಿಂದ ಬಂದಿದೆಯೇ ಎಂಬ ವಿಷಯದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದೀಪಕ್ ಎಂ. ಆರ್ ರವರ ವ್ಯಾಸ ಮಹಾಭರತ ಮತ್ತು ಮಾರ್ಕಂಡೇಯ ರಾಮಾಯಣವೆಂಬ ಪುಸ್ತಕ ಬಿಡುಗಡೆ ಮಾಡಿದರು.

ಇದನ್ನೂ ಓದಿ: Signal Jump book release: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಪುಸ್ತಕ ಬಿಡುಗಡೆ

ಬಾಬು ಕೃಷ್ಣಮೂರ್ತಿಯ ಅವರು ಮಾತನಾಡಿ,”ನಾರಾಯಣಾಚಾರ್ಯರದು ಬಹುಮುಖ ವ್ಯಕ್ತಿತ್ವ. ಒಬ್ಬರೇ ವ್ಯಕ್ತಿ ಸಾಹಿತಿಯಾಗಿ, ರಾಷ್ಟ್ರಪರರಾಗಿ, ಸನಾತನ ಧರ್ಮಪರವಾಗಿ, ಸಂಶೋಧನಾತ್ಮಕವಾಗಿ ಹೀಗೆ ಎಲ್ಲ ವಿಷಯಗಳಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಹಾಗೂ ಯುವಕರಿಗೆ ಮಾರ್ಗದರ್ಶಕರಾಗಿದ್ದ ಚೇತನರು. ಹಾಗಾಗಿ ನನಗೆ ಈ ಪ್ರಶಸ್ತಿಯು ಲಭಿಸಿರುವುದು ನನ್ನ ಸೌಭಾಗ್ಯವೆಂದೇ ಭಾವಿಸುವೆ ಎಂದು ತಮ್ಮ ಅಂತರಂಗವನ್ನು ಬಿಚ್ಚಿಟ್ಟರು.

ಇದನ್ನೂ ಓದಿ: ವೀರಲೋಕದಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಕಥಾ ಸಂಕಲನ ಆಯ್ಕೆ

ಹೀಗೆ ಪ್ರತೀ ವರ್ಷವೂ ಈ ಸಂಸ್ಥೆಗಳು ಸಾಧಕರಿಗೆ ಸನ್ಮಾನದ ಗೌರವಧನವಾಗಿ 50,000 ರೂ. ಗಳನ್ನು ನೀಡಿ ಗೌರವಿಸುತ್ತ ಬಂದಿದೆ. ಕಾರ್ಯಕ್ರಮದಲ್ಲಿ ಉದ್ಭವಃ ಸಮುದಾಯದ ಮುಖ್ಯಸ್ಥ ದಿವಾಕರ ಚೆನ್ನಪ್ಪ ಮತ್ತು ಸುಬ್ಬು ಪಬ್ಲಿಕೇಷನ್ಸ್ ಮುಖ್ಯಸ್ಥ ಋತ್ವಿಕ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.