Signal Jump book release: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಪುಸ್ತಕ ಬಿಡುಗಡೆ

Raveendra muddi Signal Jump: ರವೀಂದ್ರ ಮುದ್ದಿ ಬರೆದಿರುವ 'ಸಿಗ್ನಲ್ ಜಂಪ್' ಕಥಾ ಸಂಕಲನದಲ್ಲಿ ಹತ್ತು ವಿಭಿನ್ನ ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ, ಅವಲೋಕನ ಮಾಡಿದ್ದಾರೆ. ವಿಶೇಷ ಅಂದರೆ ಆ ಹತ್ತು ಬರಹಗಾರರು ಬರೆದ ಕಥೆಗಳ ಬಗೆಗಿನ ಅನಿಸಿಕೆ ಕೂಡಾ ಇದೇ 'ಸಿಗ್ನಲ್ ಜಂಪ್' ಕಥಾ ಸಂಕಲನದಲ್ಲಿ ಅಚ್ಚಾಗಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಭಿನ್ನ ಪ್ರಯತ್ನ- ಅನಂತ್ ಕುಣಿಗಲ್, ಅವ್ವ ಪುಸ್ತಕಾಲಯ

Signal Jump book release: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಅವರ 'ಸಿಗ್ನಲ್ ಜಂಪ್' ಪುಸ್ತಕ ಬಿಡುಗಡೆ
ರವೀಂದ್ರ ಮುದ್ದಿ ಅವರ 'ಸಿಗ್ನಲ್ ಜಂಪ್' ಪುಸ್ತಕ ಬಿಡುಗಡೆ
Follow us
|

Updated on:Jul 10, 2024 | 1:26 PM

ಟಿವಿ9 ಸುದ್ದಿ ವಾಹಿನಿಯ ಹಿರಿಯ ನಿರ್ಮಾಪಕರಾದ ರವೀಂದ್ರ ಮುದ್ದಿ (Raveendra muddi TV9 Senior Producer) ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗುತ್ತಿದೆ. ಇದೇ ಜುಲೈ 14, ಭಾನುವಾರದಂದು ಬೆಂಗಳೂರು ವಿಜಯನಗರದಲ್ಲಿರುವ (Vijayanagar, Bangalore) ಎಂ. ಚಿದಾನಂದಮೂರ್ತಿ ಸಭಾಂಗಣದಲ್ಲಿ ಜರುಗುವ ಈ ಪುಸ್ತಕ ಬಿಡುಗಡೆ (Signal Jump kannada book release) ಸಮಾರಂಭದಲ್ಲಿ ಖ್ಯಾತ ಬರಹಗಾರರಾದ ಜೋಗಿ, ಯತಿರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ ಹಾಗೂ ವೀರಲೋಕ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Signal Jump book release: ‘ಸಿಗ್ನಲ್ ಜಂಪ್’ ನಲ್ಲಿ ನಾಡಿನ ಹತ್ತು ಬರಹಗಾರರು:

ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಒಟ್ಟು ವಿಭಿನ್ನ ಹತ್ತು ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಇಲ್ಲಿನ ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ ಆ ಕಥೆಯ ಬಗ್ಗೆ ಅವಲೋಕನ ಮಾಡಿದ್ದಾರೆ. ವಿಶೇಷ ಅಂದರೆ ಆ ಹತ್ತು ಬರಹಗಾರರು ಬರೆದ ಕಥೆಗಳ ಬಗೆಗಿನ ಅನಿಸಿಕೆ ಕೂಡಾ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಅಚ್ಚಾಗಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಭಿನ್ನ ಪ್ರಯತ್ನ ಎಂದು ಅವ್ವ ಪುಸ್ತಕಾಲಯದ ಅನಂತ್ ಕುಣಿಗಲ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ವೀರಲೋಕದಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಕಥಾ ಸಂಕಲನ ಆಯ್ಕೆ

ಅವ್ವ ಪುಸ್ತಕಾಲಯದಿಂದ ಜರುಗುತ್ತಿರುವ ಈ ಸಮಾರಂಭದಲ್ಲಿ ಪತ್ರಕರ್ತ ರವೀಂದ್ರ ಮುದ್ದಿ ಅವರ ಸಿಗ್ನಲ್ ಜಂಪ್ ಕೃತಿಯ ಜೊತೆಗೆ ಅನಂತ್ ಕುಣಿಗಲ್ ಅವರು ಬರೆದ ಅಪ್ಪನ ಆಟೋಗ್ರಾಫ್, ಋಣಭಾರ ಹಾಗೂ ಶಿವಾಗ್ ಅವರು ಬರೆದ ಪೆನ್ನು ಪೇಪರ್ ಹಾಗೂ Finding ಸೀತಾ ಎನ್ನುವ ಕಾದಂಬರಿ ಕೂಡಾ ಬಿಡುಗಡೆಯಾಗುತ್ತಿದೆ.

ಒಟ್ಟು 5 ಕೃತಿಗಳು ಲೋಕಾರ್ಪಣೆ ಆಗುವುದರ ಜೊತೆಗೆ (ಅ)ಪರಿಚಿತ ಓದುಗರ ಮೊದಲ ವಾರ್ಷಿಕೋತ್ಸವ ಸಂಭ್ರಮ ಕೂಡಾ ಇದೇ ಜುಲೈ 14, ಭಾನುವಾರದಂದು ಬೆಂಗಳೂರು ವಿಜಯನಗರದಲ್ಲಿರುವ ಎಂ. ಚಿದಾನಂದಮೂರ್ತಿ ಸಭಾಂಗಣದಲ್ಲಿ ಜರುಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 am, Wed, 10 July 24

ತಾಜಾ ಸುದ್ದಿ
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, ಮಠದ ಕಟ್ಟಡ ಹಾನಿ
ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, ಮಠದ ಕಟ್ಟಡ ಹಾನಿ
Karnataka Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
Karnataka Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
ನಾರಾಯಣಪುರ ಜಲಾಶಯಯದಿಂದ ಕೃಷ್ಣಾ ನದಿಗೆ ನೀರು, ನದಿಪಾತ್ರದಲ್ಲಿ ಪ್ರವಾಹದ ಭಯ
ನಾರಾಯಣಪುರ ಜಲಾಶಯಯದಿಂದ ಕೃಷ್ಣಾ ನದಿಗೆ ನೀರು, ನದಿಪಾತ್ರದಲ್ಲಿ ಪ್ರವಾಹದ ಭಯ
‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿ ಬಗ್ಗೆ ಸಾಧು ಕೋಕಿಲ ಮಾತು
‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿ ಬಗ್ಗೆ ಸಾಧು ಕೋಕಿಲ ಮಾತು
ಥ್ಯಾಂಕ್ ಯೂ ಯಾಕೆ ಹೇಳಬೇಕು, ಹೇಳದಿದ್ದರೆ ಏನಾಗುತ್ತದೆ? ಈ ವಿಡಿಯೋ ನೋಡಿ
ಥ್ಯಾಂಕ್ ಯೂ ಯಾಕೆ ಹೇಳಬೇಕು, ಹೇಳದಿದ್ದರೆ ಏನಾಗುತ್ತದೆ? ಈ ವಿಡಿಯೋ ನೋಡಿ
Nithya Bhavishya: ಬುಧವಾರ ಇಂದಿನ ರಾಶಿಫಲ ತಿಳಿಯಲು ವಿಡಿಯೋ ನೋಡಿ
Nithya Bhavishya: ಬುಧವಾರ ಇಂದಿನ ರಾಶಿಫಲ ತಿಳಿಯಲು ವಿಡಿಯೋ ನೋಡಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ