ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ. ಎಂ ಎ ಸಲೀಂ ನೇಮಕ

ಕರ್ನಾಟಕ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರನ್ನು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿದೆ. ಡಾ. ಎಂ ಎ ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್​ನ ಅಧಿಕಾರಿಯಾಗಿದ್ದಾರೆ. ಡಾ. ಎಂ. ಎ ಸಲೀಂ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಕರ್ನಾಟಕದ ಪೊಲೀಸ್​ ಮಹಾನಿರ್ದೇಶಕರಾಗಿರುವ ಡಾ. ಅಲೋಕ ಮೋಹನ್​ ಅವರು ಬುಧವಾರವೇ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ. ಎಂ ಎ ಸಲೀಂ ನೇಮಕ
ಡಾ. ಎಂ ಎ ಸಲೀಂ
Edited By: ವಿವೇಕ ಬಿರಾದಾರ

Updated on: May 21, 2025 | 6:54 PM

ಬೆಂಗಳೂರು, ಮೇ 21: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ (DG & IGP) ಹಿರಿಯ ಐಪಿಎಸ್​ ಅಧಿಕಾರಿ ಹಾಗೂ ಕನ್ನಡಿಗ ಡಾ. ಎಂ ಎ ಸಲೀಂ (MA Salim) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ. ಎಂ ಎ ಸಲೀಂ ಅವರು ಬುಧವಾರವೇ (ಮೇ.21) ಅಧಿಕಾರಿ ವಹಿಸಿಕೊಂಡಿದ್ದಾರೆ. ಡಾ. ಎಂ. ಎ ಸಲೀಂ ಅವರು ಸದ್ಯ ಹಂಗಾಮಿ ಡಿಜಿ & ಐಜಿಯಾಗಿದ್ದಾರೆ. ಡಾ. ಅಲೋಕ್ ಮೋಹನ್​ ಅವರು ನೂತನ ಡಿಜಿಪಿ ಡಾ. ಎಂ. ಎ ಸಲೀಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಐಪಿಎಸ್​ ಅಧಿಕಾರಿ, ಕರ್ನಾಟಕದ ಪೊಲೀಸ್​ ಮಹಾನಿರ್ದೇಶಕರಾಗಿರುವ ಡಾ. ಅಲೋಕ ಮೋಹನ್​ ಅವರು ಬುಧವಾರವೇ ಸೇವೆಯಿಂದ ನಿವೃತ್ತರಾಗಿದ್ದಾರೆ.

ಡಾ. ಅಲೋಕ್ ಮೋಹನ್​ ಅವರಿಗೆ ಗೌರವ ಪಥಸಂಚಲನ ಮೂಲಕ ಬೀಳ್ಕೊಡಲಾಗುತ್ತದೆ. ಅಲೋಕ್​ ಮೋಹನ್ ಅವರ ಅವಧಿ ಏಪ್ರಿಲ್​ಗೆ ಮುಕ್ತಾಯವಾಗಿದ್ದರೂ ಡಿಜಿಪಿಯಾಗಿ ಎರಡು ವರ್ಷದ ಅವಧಿ ಮುಗಿಸುವ ಉದ್ದೇಶದಿಂದ ಮೂರು ವಾರಗಳ ಕಾಲ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು.

ಡಾ. ಎಂ. ಎ ಸಲೀಂ ಅವರು 1966ರ ಜೂನ್​ 25 ರಂದು ಬೆಂಗಳೂರಿನ ಚಿಕ್ಕಬಾಣವರದಲ್ಲಿ ಜನಿಸಿದರು. 1998ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1993ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿ ಪಡೆದ ಅವರು 2010ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಟ್ರಾಫಿಕ್​ ಮ್ಯಾನೇಜ್ಮೆಂಟ್​ ವಿಷಯದಲ್ಲಿ ಡಾಕ್ಟರೇಟ್​ ಪದವಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ
ಬಾನು ಮುಷ್ತಾಕ್ ಬೂಕರ್ ನೆಪದಲ್ಲಿ ಎರಡು ಮಾತು: ಡಾ. ಟಿಎಸ್ ಗೊರವರ ಬರಹ
ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ,ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್

ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಎನ್​ಐಎ ತನಿಖೆ ಚುರುಕು: ಭರತ್ ಭೂಷಣ್ ಪತ್ನಿಯಿಂದ ಮಹತ್ವದ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು

ಡಾ. ಎಂ ಎ ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್​ನ ಅಧಿಕಾರಿಯಾಗಿದ್ದಾರೆ. ಡಾ. ಎಂ ಎ. ಸಲೀಂ ಅವರು ಈ ಹಿಂದೆ ಕಲಬುರಗಿಯಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್​ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಾ. ಎಂ. ಎ ಸಲೀಂ ಅವರು ಸಿಐಡಿ ಡಿಜಿಪಿಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Wed, 21 May 25

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us