AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಸಿಟಿವಿ ಫೂಟೇಜ್ ಸೋರಿಕೆ: ಸೂಪರ್​ಮಾರ್ಕೆಟ್ ಮಾಲೀಕರ ವಿರುದ್ಧ ಮಂಗಳೂರು ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ದೂರು

ಕೇವಲ ತಮಗೆ ಬೇಕಾದಷ್ಟು ವಿವರಗಳನ್ನು ಮಾತ್ರವೇ ಅವರು ಆಡಿಯೊ ರೆಕಾರ್ಡಿಂಗ್ ಸಹಿತ ಲೀಕ್ ಮಾಡಿದ್ದಾರೆ. ನನಗೆ ಅವಮಾನ ಮಾಡುವ ಮತ್ತು ತೊಂದರೆ ಕೊಡುವ ಉದ್ದೇಶದಿಂದಲೇ ಅವರು ಹೀಗೆ ಮಾಡಿದ್ದಾರೆ ಎನಿಸುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಟಿವಿ ಫೂಟೇಜ್ ಸೋರಿಕೆ: ಸೂಪರ್​ಮಾರ್ಕೆಟ್ ಮಾಲೀಕರ ವಿರುದ್ಧ ಮಂಗಳೂರು ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ದೂರು
ಡಾ. ಶ್ರೀನಿವಾಸ ಕಕ್ಕಿಲಾಯ
Ghanashyam D M | ಡಿ.ಎಂ.ಘನಶ್ಯಾಮ
|

Updated on:May 24, 2021 | 3:40 PM

Share

ಮಂಗಳೂರು: ಮಾತುಕತೆಯ ಸಿಸಿಟಿವಿ ವಿಡಿಯೊ ಕ್ಲಿಪ್ ವೈರಲ್ ಮಾಡಿದ ಸೂಪರ್​ಮಾರ್ಕೆಟ್ ಮಾಲೀಕರೊಬ್ಬರ ವಿರುದ್ಧ ಮಂಗಳೂರಿನ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಸ್ಕ್​ ಧರಿಸದೆ ಅಂಗಡಿಗೆ ಬಂದಿದ್ದ ವೈದ್ಯರನ್ನು ಅಂಗಡಿ ಮಾಲೀಕರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿತ್ತು. ಸರ್ಕಾರದ ಮೂರ್ಖತನದ ನೀತಿಗಳ ಬಗ್ಗೆ ವೈದ್ಯರು ಸೂಪರ್​ಮಾರ್ಕೆಟ್ ಮಾಲೀಕರೊಂದಿಗೆ ಮಾತಿನ ಚಕಮಕಿ ನಡೆಸುವಾಗ ಪ್ರಸ್ತಾಪಿಸಿದ್ದರು. ನಂತರದ ದಿನಗಳಲ್ಲಿ ಈ ವಿಡಿಯೊ ಕ್ಲಿಪ್ ವೈರಲ್ ಆಗಿತ್ತು.

ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ವೈದ್ಯ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಘಟನೆ ನಡೆದ ಮಂಗಳವಾರ ಅಂಗಡಿ ಮಾಲೀಕರು ಸಿಸಿಟಿವಿ ಫೂಟೇಜ್ ಅನ್ನು ಅಕ್ರಮವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ತುಣುಕು ವ್ಯಾಪಕವಾಗಿ ಹರಿದಾಡಿದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಹಲವಾರು ಜನರು ಮಾನಹಾನಿಕರ ಹೇಳಿಕೆಗಳನ್ನು ನೀಡಿದರು. ದೇಶ ವಿದೇಶಗಳಲ್ಲಿ ಹಲವರು ನನ್ನನ್ನು ಟೀಕಿಸಿ ಹೇಳಿಕೆಗಳನ್ನು ನೀಡಿದರು ಎಂದು ಹೇಳಿದ್ದಾರೆ.

ಕೇವಲ ತಮಗೆ ಬೇಕಾದಷ್ಟು ವಿವರಗಳನ್ನು ಮಾತ್ರವೇ ಅವರು ಆಡಿಯೊ ರೆಕಾರ್ಡಿಂಗ್ ಸಹಿತ ಲೀಕ್ ಮಾಡಿದ್ದಾರೆ. ನನಗೆ ಅವಮಾನ ಮಾಡುವ ಮತ್ತು ತೊಂದರೆ ಕೊಡುವ ಉದ್ದೇಶದಿಂದಲೇ ಅವರು ಹೀಗೆ ಮಾಡಿದ್ದಾರೆ ಎನಿಸುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಇದೇ ಘಟನೆಗೆ ಸಂಬಂಧಿಸಿದ ಇನ್ನೂ ಎರಡು ಆಡಿಯೊ ಕ್ಲಿಪ್​ಗಳು ವೈರಲ್ ಆಗಿದ್ದವು. ಪೈ ಎಂಬ ಹೆಸರಿನ ವ್ಯಕ್ತಿಯು ಸೂಪರ್​ಮಾರ್ಕೆಟ್​ ಮಾಲೀಕನೊಂದಿಗೆ ಮಾತನಾಡಿದ್ದ ಮೊಬೈಲ್ ಸಂಭಾಷಣೆಯ ವಿವರಗಳು ಈ ಆಡಿಯೊ ಕ್ಲಿಪ್​ಗಳಲ್ಲಿದ್ದವು. ಪೈ ಎಂಬಾತನನ್ನು ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯರ ನೆರೆಮನೆಯಾತ ಎಂದು ಹೇಳಲಾಗಿತ್ತು.

‘ನನ್ನ ವಿರುದ್ಧ ಸುಳ್ಳು ದೂರು ನೀಡುವಂತೆ ಪೈ ಇನ್ನೊಬ್ಬರಿಗೆ ಹೇಳಿಕೊಡುತ್ತಿದ್ದಾರೆ’ ಎಂದು ಕಕ್ಕಿಲ್ಲಾಯ ದೂರಿದ್ದರು. ‘ಇವರಿಬ್ಬರೂ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬಹುಕಾಲದಿಂದ ಹಿಂಬಾಲಿಸುತ್ತಿದ್ದಾರೆ. ನನ್ನನ್ನು ಹೆದರಿಸಲು ಮತ್ತು ನನ್ನ ಗೌರವ ಕಳೆಯಲು ಸಂಚು ರೂಪಿಸಿದ್ದರು’ ಎಂದು ಕಕ್ಕಿಲ್ಲಾಯ ದೂರಿನಲ್ಲಿ ತಿಳಿಸಿದ್ದಾರೆ.

(Dr Srinivas Kakkilaya of Mangalore Files Complaint Against Supermarket Owner Over leaking selective CCTV Clip)

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಹಿನ್ನೆಲೆ; ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲು

Published On - 3:35 pm, Mon, 24 May 21