Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ, ಬರಗಾಲ: ಬೇಳೆಕಾಳುಗಳ ಬೆಲೆ ಏರಿಕೆ, ಕೆಜಿ ತೊಗರಿಗೆ 180 ರೂ.

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಸಂಕಷ್ಟ ಎದುರಾಗಿದೆ. ನೀರಲ್ಲದೆ ಬೆಳೆಗಳು ಒಣಗುತ್ತಿವೆ. ರಾಜ್ಯದ 161 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಇದರಿಂದ ಸಿರಿಧ್ಯಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಈ ಬೆಲೆ ಏರಿಕೆಯ ಬಿಸಿ ಬೆಂಗಳೂರಿನ ಜನರಿಗೆ ತಟ್ಟಿದೆ.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ, ಬರಗಾಲ: ಬೇಳೆಕಾಳುಗಳ ಬೆಲೆ ಏರಿಕೆ, ಕೆಜಿ ತೊಗರಿಗೆ 180 ರೂ.
ಬೇಳೆಕಾಳು
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on:Oct 25, 2023 | 10:20 AM

ಬೆಂಗಳೂರು ಅ.25: ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಅತಿವೃಷ್ಠಿ, ಬರಗಾಲ (Drought) ಹಿನ್ನೆಲೆಯಲ್ಲಿ ಬೇಳೆಕಾಳುಗಳ ಇಳುವರಿ ಕುಸಿತ ಕಂಡಿದೆ. ಬೆಂಗಳೂರಿಗೆ (Bengaluru) ಬರುತ್ತಿದ್ದ ಸಾಕಷ್ಟು ದಿನಸಿ ಸಮಾಗ್ರಿಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ತೊಗರಿ ಬೇಳೆ, ಹೆಸರು ಬೇಳೆ, ಜೋಳ, ಉದ್ದಿನ ಬೇಳೆ, ಅಕ್ಕಿ ಸೇರಿದಂತೆ ಆಹಾರಧಾನ್ಯಗಳ ಬೆಲೆ ಹೆಚ್ಚಳವಾಗಿದೆ. 2021-22ರ ರಲ್ಲಿ ಆಹಾರಧಾನ್ಯಗಳು 143.68 ಲಕ್ಷ ಟನ್ ಉತ್ಪಾದನೆಯಾಗಿದ್ದರೇ, ಈ ವರ್ಷ 2022-23ರ ರಲ್ಲಿ ಆಹಾರ ಧಾನ್ಯಗಳು 135.48 ಲಕ್ಷ ಟನ್ ಉತ್ಪಾದನೆಗೆ ಕುಸಿತ ಕಂಡಿದೆ.

ಬೇಳೆಕಾಳುಗಳ ದರ ಶೇ 20 ರಿಂದ 25 ರಷ್ಟು ಏರಿಕೆಯಾಗಿದೆ. ಅಗತ್ಯ ದಿನಸಿ ಸಮಾಗ್ರಿಗಳ ಬೇಲೆ ಡಿಸೆಂಬರ್ ಬಳಿಕ ಮತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಶೇ.30ರಷ್ಟು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆ. ಇದರಿಂದ ಸಿಲಿಕಾನ್ ಸಿಟಿ ಜನರಿಗೆ ಬಿಗ್ ಟೆನ್ಷನ್ ಶುರುವಾಗಿದೆ.

ಇದನ್ನೂ ಓದಿ: ಅಕಾಲಿಕ ಮಳೆ, ಬರಗಾಲದಿಂದ ದ್ವಿದಳ ಧಾನ್ಯ ಇಳುವರಿಗೆ ಭಾರಿ ಹೊಡೆತ; ಕಂಗಾಲ ಆದ ರೈತರು

ಸಿರಿಧಾನ್ಯ ಬೆಲೆ ಏರಿಕೆ
ಧಾನ್ಯಗಳು ಕೆಜಿ ಇಂದಿನ ದರ (ರೂ) 3 ತಿಂಗಳ ಹಿಂದಿನ ದರ (ರೂ)
ತೊಗರಿ ಬೇಳೆ 175 – 180 115 -120
ಹೆಸರು ಬೇಳೆ 138 – 140 98 – 100
ಕಡಲೇ ಕಾಳು 90 – 92 70 – 73
ಬಟಾಣಿ 110 – 115 80 – 85
ಮಸೂರು ದಾಲ್ 110 – 115 90 – 95
ಕಡಲೇ ಬೇಳೆ 105 – 108 80 – 85
ಉದ್ದಿನ ಬೇಳೆ 138 – 140 110 – 115
ಗೋದಿ 39 – 40 33 – 35
ಸೋನಾ ಸ್ಟಿಮ್ ಅಕ್ಕಿ 52 46
ಡಿಲ್ಯಾಕ್ಸ್ ಸೋನಾ 72 68 – 70
ಜೊಳ 65 – 70 40 – 45
ರಾಗಿ 45 38
ಗೋದಿ ಹಿಟ್ಟು ಲೂಸ್ 38 35
ರಾಗಿ ಹಿಟ್ಟು 42 37
ಸಕ್ಕರೆ 41 39 – 40

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಸಂಕಷ್ಟ ಎದುರಾಗಿದೆ. ನೀರಲ್ಲದೆ ಬೆಳೆಗಳು ಒಣಗುತ್ತಿವೆ. ರಾಜ್ಯದ 161 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಇದರಿಂದ ಸಿರಿಧ್ಯಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಈ ಬೆಲೆ ಏರಿಕೆಯ ಬಿಸಿ ಬೆಂಗಳೂರಿನ ಜನರಿಗೆ ತಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:10 am, Wed, 25 October 23

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್