AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಭೀಕರ ಬರಕ್ಕೆ ಕಂಗಾಲಾದ ರೈತರು; ಮಳೆಗಾಗಿ ಕತ್ತೆಗಳ‌ ಅದ್ಧೂರಿ ಮದುವೆ; ಇಲ್ಲಿದೆ ವಿಡಿಯೋ

ದಸರಾ ಹಬ್ಬದ ಪ್ರಯುಕ್ತ ತಿಮ್ಮಾಪೂರ ಗ್ರಾಮದ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಇಂದು ಕತ್ತೆಗಳ ಮದುವೆ ಇಡೀ ರೈತ ಸಮೂಹದ ಕುಟುಂಬಸ್ಥರು ಸೇರಿ ಅದ್ದೂರಿಯಾಗಿ ಮದುವೆ ಮಾಡಿದರು. ಕತ್ತೆಗಳ ಮದುವೆ ಕಾಟಾಚಾರಕ್ಕೆ ಮಾಡಿಲ್ಲ. ಎಲ್ಲ ಮದುವೆಗಳಂತೆ ಶಿಸ್ತು, ಬದ್ಧ, ಸಾಂಪ್ರದಾಯಿಕವಾಗಿ ಮಾಡಲಾಯಿತು.

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Oct 24, 2023 | 7:20 PM

Share

ಗದಗ, ಅ.24: ಆ ಗ್ರಾಮದಲ್ಲಿ ದಸರಾ ಹಬ್ಬದ ದಿನ ಮದುವೆ ಸಂಭ್ರಮ ಜೋರಾಗಿತ್ತು. ಯಾವ ಮದುವೆಗೂ ಈ ಜೋಡಿಗಳ ಮದುವೆ ಸಂಭ್ರಮ ಕಡಿಮೆಯಿಲ್ಲ. ಸಾಂಪ್ರದಾಯಿಕವಾಗಿ ನಡೆದ ಅದ್ಧೂರಿ‌ ಮದುವೆಯಲ್ಲಿ, ಇಡೀ ಗ್ರಾಮಸ್ಥರೇ ಸೇರಿದ್ದರು. ಈ ಜೋಡಿಗಳ ಮದುವೆ ಮಾಡಿ ಅನ್ನದಾತರು‌ ಮಳೆಗಾಗಿ ಪ್ರಾರ್ಥನೆ‌ ಮಾಡಿದರು. ಹೌದು, ಗದಗ(Gadag) ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಮಳೆ ಇಲ್ಲದೇ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಬಿತ್ತನೆ‌ ಮಾಡಿದ ಎಲ್ಲ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಕಷ್ಟಪಟ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಹೀಗಾಗಿ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಈಗಲಾದ್ರೂ ಮಳೆರಾಯನ ಕೃಪೆಗಾಗಿ ಕಾಯುತ್ತಿದ್ದಾರೆ. ಮಳೆಯಾದ್ರು ಹಿಂಗಾರು ಬೆಳೆಯಾದ್ರೂ ಬರುತ್ತೆ. ಬದುಕಿನ ಬಂಡಿ ಸಾಗುತ್ತೆ ಅಂತ ಪರಿತಪಿಸುತ್ತಿದ್ದಾರೆ.

ಕತ್ತೆಗಳ‌ ಅದ್ಧೂರಿ ಮದುವೆ, ಮಳೆಗಾಗಿ ರೈತರ ಪ್ರಾರ್ಥನೆ

ದಸರಾ ಹಬ್ಬದ ಪ್ರಯುಕ್ತ ತಿಮ್ಮಾಪೂರ ಗ್ರಾಮದ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಇಂದು ಕತ್ತೆಗಳ ಮದುವೆ ಇಡೀ ರೈತ ಸಮೂಹದ ಕುಟುಂಬಸ್ಥರು ಸೇರಿ ಅದ್ದೂರಿಯಾಗಿ ಮದುವೆ ಮಾಡಿದರು. ಕತ್ತೆಗಳ ಮದುವೆ ಕಾಟಾಚಾರಕ್ಕೆ ಮಾಡಿಲ್ಲ. ಎಲ್ಲ ಮದುವೆಗಳಂತೆ ಶಿಸ್ತು, ಬದ್ಧ, ಸಾಂಪ್ರದಾಯಿಕವಾಗಿ ಮಾಡಲಾಯಿತು. ಮದುವೆಯ ಹಿನ್ನೆಲೆಯಲ್ಲಿ ಸಂಪ್ರದಾಯದ ಪ್ರಕಾರ ಮಹಿಳೆಯರು ಹೂಗಾರರ ಮನೆಯಿಂದ ಭಾಸಿಂಗ್ ತರಲಾಯಿತು.

ಇದನ್ನೂ ಓದಿ:Uttara Kannada: ವರುಣನ ಕೃಪೆಗಾಗಿ ರೈತ ಮಹಿಳೆಯರಿಂದ ವಿಶಿಷ್ಟ ಆಚರಣೆ; ಕಪ್ಪೆಗಳ ಮದುವೆ ಮಾಡಿ ಪ್ರಾರ್ಥನೆ, ವಿಡಿಯೋ ವೈರಲ್

ಅರಿಣ ಕಾರ್ಯ

ಕತ್ತೆಗಳಿಗೆ ಮೊದ್ಲು ಅರಿಶಿಣ ಶಾಸ್ತ್ರವನ್ನು ಮಾಡಿ ಸುರುಗಿ ನೀರನ್ನು ಹಾಕಲಾಯಿತು. ಬಳಿಕ ಎರಡು ಕತ್ತೆಗಳಿಗೆ ಶಂಗಾರ ಮಾಡಲಾಯಿತು. ಗಂಟಿಗೆ ಭಾಸಿಂಗ್ ಶಂಗಾರ ಮಾಡಿದ್ರೆ. ಹೆಣ್ಣು ಕತ್ತೆ ಹೂವಿನ ದಂಡಿ ಕಟ್ಟಿ ಶೃಂಗಾರ‌ ಮಾಡಿದ್ರು. ಬಳಿದ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ನೂರಾರು ಜನ್ರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ಮಾಡಿ ಅಕ್ಷತೆಯನ್ನು ಹಾಕುವುದರ ಮೂಲಕ ಕತ್ತೆಗಳಿಗೆ ಸಾಂಪ್ರದಾಯಕವಾಗಿ ಮದುವೆ ಮಾಡಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ