ಕುಂದಾಪುರ: ಅಪಾರ ಜನಪ್ರಿಯತೆ ಗಳಿಸುತ್ತಿದೆ ನವರಾತ್ರಿ ಗೊಂಬೆ ಪ್ರದರ್ಶನದ ಸಂಪ್ರದಾಯ

ಕುಂದಾಪುರದಲ್ಲಿ (Kundapura) ನವರಾತ್ರಿಯಲ್ಲಿ (Navratri) ಗೊಂಬೆಗಳನ್ನು (dolls) ಪ್ರದರ್ಶಿಸುವ ರಮಣೀಯ ಸಂಪ್ರದಾಯ ಜನಪ್ರಿಯವಾಗಿದೆ. ಇದು kಳೆದ ವರ್ಷ ನವರಾತ್ರಿಯ ಸಮಯದಲ್ಲಿ (Mysore Dasara festival) ವಡೇರಹೋಬಳಿಯಲ್ಲಿರುವ ಫಾರ್ಮಸಿ ಅಧಿಕಾರಿ ಬಿ ಎನ್ ಚಂದ್ರಶೇಖರ್ ಅವರ ಮನೆಯಲ್ಲಿ ಪ್ರಾರಂಭವಾಯಿತು. ಪ್ರಾಚೀನ ಕಥೆಗಳನ್ನು ಸಾದರಪಡಿಸುವ ಗೊಂಬೆಗಳನ್ನು ಒಳಗೊಂಡಿತ್ತು.  

ಕುಂದಾಪುರ: ಅಪಾರ ಜನಪ್ರಿಯತೆ ಗಳಿಸುತ್ತಿದೆ ನವರಾತ್ರಿ ಗೊಂಬೆ ಪ್ರದರ್ಶನದ ಸಂಪ್ರದಾಯ
ಜನಪ್ರಿಯತೆ ಗಳಿಸುತ್ತಿದೆ ನವರಾತ್ರಿ ಗೊಂಬೆ ಪ್ರದರ್ಶನದ ಸಂಪ್ರದಾಯ
Follow us
|

Updated on: Oct 25, 2023 | 10:27 AM

ಕುಂದಾಪುರ, ಅಕ್ಟೋಬರ್ 25: ಕುಂದಾಪುರದಲ್ಲಿ (Kundapura) ನವರಾತ್ರಿಯಲ್ಲಿ (Navratri) ಗೊಂಬೆಗಳನ್ನು (dolls) ಪ್ರದರ್ಶಿಸುವ ರಮಣೀಯ ಸಂಪ್ರದಾಯ ಜನಪ್ರಿಯವಾಗಿದೆ. ಇದು kಳೆದ ವರ್ಷ ನವರಾತ್ರಿಯ ಸಮಯದಲ್ಲಿ (Mysore Dasara festival) ವಡೇರಹೋಬಳಿಯಲ್ಲಿರುವ ಫಾರ್ಮಸಿ ಅಧಿಕಾರಿ ಬಿ ಎನ್ ಚಂದ್ರಶೇಖರ್ ಮತ್ತು ಅವರ ಪತ್ನಿ ಶೀಲಾ ಅವರ ಮನೆಯಲ್ಲಿ ಪ್ರಾರಂಭವಾಯಿತು. ಅವರ ಸೊಸೆ ಐಶ್ವರ್ಯಾ ಅವಿನಾವ್ ಅವರು ತಮ್ಮ ಮನೆಗೆ ಸಂಪ್ರದಾಯವನ್ನು ಪರಿಚಯಿಸಿದರು. ಪ್ರಾಚೀನ ಕಥೆಗಳನ್ನು ಸಾದರಪಡಿಸುವ ಗೊಂಬೆಗಳನ್ನು ಒಳಗೊಂಡಿತ್ತು. ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಮಕ್ಕಳ ಕುತೂಹಲವನ್ನು ಕೆರಳಿಸಿದೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವಿನಾವ್ ಬಿ ಮತ್ತು ಐಶ್ವರ್ಯ ಪಿ ಕಳೆದ ವರ್ಷದಿಂದ ಕುಂದಾಪುರದಲ್ಲಿ ನವರಾತ್ರಿಯನ್ನು ಆಚರಿಸುತ್ತಿದ್ದಾರೆ. ಅವರ ಗೊಂಬೆಗಳ ಪ್ರದರ್ಶನವು ರಾಜರು, ರಾಜಕೀಯ, ಪೌರಾಣಿಕ ಕಥೆಗಳನ್ನು ಕಲಾತ್ಮಕವಾಗಿ ವಿವರಿಸುತ್ತದೆ. ಐಶ್ವರ್ಯಾ ಬೆಳ್ಳಿ ಬೆಟ್ಟವನ್ನು ಸಹ ಸಂಯೋಜಿಸಿದ್ದಾರೆ. ಸ್ವರ್ದಸದೃಶ ವಾತಾವರಣದಲ್ಲಿ ಶಿವಪಾರ್ವತಿ, ಷಣ್ಮುಗ, ಗಣಪತಿ ಮತ್ತು ಶಿವಗಣ ಮುಂತಾದ ದೇವತೆಗಳನ್ನು ಪ್ರದರ್ಶಿಸಲಾಗಿದೆ. ಹೆಸರಾಂತ ಮೈಸೂರು ದಸರಾ ಉತ್ಸವದ ಗೊಂಬೆಗಳ ಸೇರ್ಪಡೆಯೊಂದಿಗೆ ಗಣಪತಿ ಭೂಮಿಯಲ್ಲಿ ಅವತರಿಸುವ ಚಿತ್ರಣವೂ ಇದೆ. ಕೆಳಗಿನ ಸಾಲಿನಲ್ಲಿ ದಶಾವತಾರವನ್ನು ಚಿತ್ರಿಸುವ ಗೊಂಬೆಗಳು, ದ್ರೋಣನ ಗುರುಕುಲ, ಕೃಷ್ಣನ ಬಾಲ್ಯದ ಲೀಲೆಗಳು, ಪೌರಾಣಿಕ ಘಟನೆಗಳ ಚಿತ್ರಣಗಳು, ನವವಿವಾಹಿತರು ಮತ್ತು ಇತರ ಆಕರ್ಷಕ ಪ್ರತಿಮೆಗಳನ್ನು ಕಾಣಬಹುದು ಎಂದು daijiworld ವರದಿ ಮಾಡಿದೆ.

ಗೊಂಬೆಗಳ ವಿಂಗಡಣೆಯಲ್ಲಿ ಭಕ್ತಿ, ಧಾರ್ಮಿಕ ನಂಬಿಕೆಗಳು ಮತ್ತು ವಿವಿಧ ಆಚರಣೆಗಳನ್ನು ಪ್ರತಿಬಿಂಬಿಸುವಂತಹವುಗಳಾಗಿವೆ. ನವರಾತ್ರಿ ಆಚರಣೆಯು ಒಂಬತ್ತು ದಿನಗಳ ವಿಶೇಷ ಪೂಜೆಗಳು ಮತ್ತು ನೈವೇದ್ಯ ಅರ್ಪಣೆಗಳನ್ನು ಒಳಗೊಂಡಿದೆ. ಈ ಪ್ರತಿಯೊಂದು ದಿನಗಳಲ್ಲಿ ವಿಶಿಷ್ಟವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ ಮತ್ತು ಸವಿಯಲಾಗುತ್ತದೆ. ಗೊಂಬೆಗಳು ಪ್ರತಿನಿಧಿಸುವ ಕಥೆಗಳ ಬಗ್ಗೆ ಕಲಿಯುವಾಗ ಮಕ್ಕಳು ವಿಶೇಷವಾಗಿ ಭೇಟಿ ನೀಡಲು ಮತ್ತು ಅನ್ವೇಷಿಸಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮದ ದಾಖಲೆಗಳ ಪ್ರತಿ TV9ಗೆ ಲಭ್ಯ, ದಾಖಲಾತಿಯಲ್ಲೇನಿದೆ?

ತಮ್ಮ ಸೊಸೆ ಈ ಅಚ್ಚುಮೆಚ್ಚಿನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಕ್ಕೆ ಚಂದ್ರಶೇಖರ ಲೀಲಾವತಿ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ನೆರೆಹೊರೆಯವರು ಸಹ ಸಂಪ್ರದಾಯದಿಂದ ಸಂತೋಷಪಡುತ್ತಾರೆ ಎಂದು ಚಂದ್ರಶೇಖರ್ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ಐಶ್ವರ್ಯಾ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಧಾರ್ಮಿಕ ಆಚಾರ-ವಿಚಾರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪ್ರತಿ ವರ್ಷ ಗೊಂಬೆಗಳ ಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಹಾಗಾಗಿ ಅವರು ತಮ್ಮ ಸಂಗ್ರಹವನ್ನು ವಿಸ್ತರಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ.

ಹಿರಿಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಅವರು ರೋಟರಿ ಕ್ಲಬ್ ಮತ್ತು ಇತರ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಮಕ್ಕಳಾದ ಅವಿನಾವ್ ಮತ್ತು ಅಮಿತ್, ಇಬ್ಬರೂ ಎಂಜಿನಿಯರ್‌ಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ, ಈ ಹಬ್ಬಗಳನ್ನು ತಮ್ಮ ಹೆತ್ತವರೊಂದಿಗೆ ಆಚರಿಸಲು ಕುಂದಾಪುರಕ್ಕೆ ಹಿಂತಿರುಗುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ