ಬೆಂಗಳೂರಿಗರಲ್ಲಿ ಹೆಚ್ಚಾದ ಡ್ರೈ ಐ ಪ್ರಾಬ್ಲಂ, ಕಣ್ಣಿನ ಆರೋಗ್ಯದ ಮೇಲೆ ಗಮನ ಹರಿಸಲು ವೈದ್ಯರ ಸಲಹೆ

ನಿಮ್ಮ ಕಣ್ಣು ಬೇಗ ಒಣಗಿದಂತೆ ಆಗ್ತಿದ್ಯಾ? ಯಾವಾಗಲೂ ಕಣ್ಣು ಉರಿಯುತ್ತಾ? ಬೈಕ್ ಅಥವಾ ಗಾಳಿಯಲ್ಲಿ ಹೋದ್ರೆ ಕಣ್ಣು ಬೇಗನೇ ಕೆಂಪಾಗುತ್ತಾ? ಕಣ್ಣು ಕೆಂಪಾದ್ರೆ ಸಾಕು ತಲೆ ನೋವು ಶುರುವಾಗುತ್ತಾ? ಫ್ಯಾನ್, ಎಸಿ ಯಾವುದೇ ಗಾಳಿಗೆ ಕಣ್ಣೊಡ್ಡಲು ಪರದಾಡುತ್ತಿರಾ? ಹಾಗಿದ್ರೆ ಇದು ಡ್ರೈ ಐ ಸಿಂಡ್ರೋಮ್ ಆಗಿರುಬಹುದು ಬಿ ಅಲರ್ಟ್.

ಬೆಂಗಳೂರಿಗರಲ್ಲಿ ಹೆಚ್ಚಾದ ಡ್ರೈ ಐ ಪ್ರಾಬ್ಲಂ, ಕಣ್ಣಿನ ಆರೋಗ್ಯದ ಮೇಲೆ ಗಮನ ಹರಿಸಲು ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Mar 27, 2024 | 12:14 PM

ಬೆಂಗಳೂರು, ಮಾರ್ಚ್​.27: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ (Summer) ಶುರುವಾಗುತ್ತಿದೆ. ಇದರ ಜೊತೆಗೆ ಕಣ್ಣಿನ (Eye) ನಾನಾ ಸಮಸ್ಯೆಗಳು ಕಂಡು ಬರ್ತಿದೆ. ಆದ್ರಲ್ಲೂ ಇತ್ತಿಚ್ಚಿನ ದಿನಗಳಲ್ಲಿ ಸಿಟಿ ಜನರಿಗೆ ಡ್ರೈ ಐ (Dry Eye) ಸಮಸ್ಯೆ ಶುರುವಾಗಿದೆ. ನಗರದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯ, ಅತಿಯಾದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದ ಪುಟಾಣಿಗಳಿಂದ ಹಿಡದು ವಯೋವೃದ್ಧರ ವರೆಗೂ ಜನರಲ್ಲಿ ಡ್ರೈ ಐ ಪ್ರಾಬ್ಲಂ ಶುರುವಾಗಿದೆ.

ಬೆಂಗಳೂರಿನಲ್ಲಿನ ಅತಿಯಾದ ವಾಯು ಮಾಲಿನ್ಯ ಹಾಗೂ ಹೆಚ್ಚಾದ ಮೊಬೈಲ್ ಬಳಕೆ ಲ್ಯಾಪ್ ಟ್ಯಾಪ್ ಬಳಕೆಯಿಂದ ನೇರವಾಗಿ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಡ್ರೈ ಐ ಸಮಸ್ಯೆ ಕಂಡು ಬರ್ತಿದೆ. ಈ ಡ್ರೈ ಐ ಸಿಂಡ್ರೋಮ್ ನಿಂದ ಕಣ್ಣು ಕೆಂಪಾಗುವುದು. ಕಣ್ಣಲ್ಲಿ ನೀರು ಬರುವುದು, ತುರುಕೆ ಹಾಗೂ ತಲೆ ನೋವು ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಕಾಡಾತ್ತವೆ. ಡ್ರೈ ಐ ಸಮಸ್ಯೆಯಿಂದ ಸಿಟಿ ಜನರು ಪರದಾಡುವಂತಾಗಿದೆ.

ಇದನ್ನೂ ಓದಿ: ಚಿನ್ನ ಖರೀದಿಸಲು ಹೋಗುವಾಗ ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ: ಇಲ್ಲಿದೆ ಇದರ ಉಪಯೋಗ?

ಇನ್ನು ಕಳೆದ ಕೆಲವು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ ಹಾಗೂ ನಿರಂತರವಾಗಿ ಮೊಬೈಲ್ ಬಳಕೆ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಅತಿಯಾಗಿ ಹಾಗೂ ದೀರ್ಘವಾದಿ ಬಳಕೆಯಿಂದ ಈ ಡ್ರೈ ಐ ಪ್ರಾಬ್ಲಂ ಶುರುವಾಗಿದೆ. ಈ ಡ್ರೈ ಐ ಪ್ರಾಬ್ಲಂನಿಂದ ಜನರಲ್ಲಿ ಆಸಕ್ತಿ ಕೂಡಾ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 30% ಜನರಲ್ಲಿ ಡ್ರೈ ಐ ಪ್ರಾಬ್ಲಂ ಏರಿಕೆ ಕಂಡು ಬರ್ತಿದೆ. ಇದೇ ದೊಡ್ಡ ಸಮಸ್ಯೆಯಾಗಿದ್ದು ಓಪಿಡಿಗೆ ಬರುವ ಹೆಚ್ಚು ಕೇಸ್ ಗಳಲ್ಲಿ ಡ್ರೈ ಐ ಸಮಸ್ಯೆಗಳು ಕಂಡು ಬರ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಟ್ನಲ್ಲಿ ಇತ್ತೀಚ್ಚಿಗೆ ಸಿಟಿಯಲ್ಲಿನ ಜನರ ಆರೋಗ್ಯದ ಮೇಲೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅತಿಯಾದ ನೀರು ಸೇವನೆ, ವಿಟಿಮಿನ್ ಯುಕ್ತ ಹಣ್ಣು ಆಹಾರ ಹಾಗೂ ಕಣ್ಣಿನ ವ್ಯಾಯಮದ ಕಡೆ ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ