ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ; ದಿಗ್ವಿಜಯ್ ಸಿಂಗ್ ಹೇಳಿಕೆಗೆ ಸದಾನಂದ ಗೌಡ ಪ್ರತಿಕ್ರಿಯೆ
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ಗೆ ವಯಸ್ಸಾಗಿದೆ. ಪ್ರಾಯ ಮುಗಿದಿದೆ. ಹೀಗಾಗಿ ಈ ರೀತಿ ಮಾತನಾಡಿದ್ದಾರೆ. ಇದು ದೇಶ ವಿರೋಧಿ ಹೇಳಿಕೆ. ಯಾವತ್ತೂ ಇದನ್ನ ಸಹಿಸಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಬೆಂಗಳೂರು: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ದುಃಖದ ವಿಷಯ ಎಂಬ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಅಧಿಕಾರಕ್ಕೆ ಬರಲು ಆಗಲ್ಲ. ಈಗಾಗಲೇ ಹಲವು ಎಲೆಕ್ಷನ್ನಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕೇರಳ, ತಮಿಳುನಾಡಿನಲ್ಲಿ ಅಧ್ಯಾಯ ಮುಗಿದಿದೆ. ಪಶ್ಚಿಮ ಬಂಗಾಳಕ್ಕೆ ಹೋದರೆ ಕಾಂಗ್ರೆಸ್ ಪಕ್ಷವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ಗೆ ವಯಸ್ಸಾಗಿದೆ. ಪ್ರಾಯ ಮುಗಿದಿದೆ. ಹೀಗಾಗಿ ಈ ರೀತಿ ಮಾತನಾಡಿದ್ದಾರೆ. ಇದು ದೇಶ ವಿರೋಧಿ ಹೇಳಿಕೆ. ಯಾವತ್ತೂ ಇದನ್ನ ಸಹಿಸಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಇನ್ನು ಲಸಿಕೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ, ಕೊವಿಡ್ ಲಸಿಕೆಯನ್ನು ಪ್ರತಿಯೊಬ್ಬರೂ ಪಡೆಯಬೇಕು. 20 ಕೋಟಿ ಜನ ಲಸಿಕೆ ಪಡೆದಿರುವ ಏಕೈಕ ದೇಶ ಭಾರತ. ಅಮೆರಿಕ, ಬ್ರಿಟನ್ ಸೇರಿ ಯಾವ ದೇಶಕ್ಕೂ ಇದು ಆಗಿಲ್ಲ. ಮಕ್ಕಳ ಮೇಲೂ ಕೊವಿಡ್ ಲಸಿಕೆ ಪ್ರಯೋಗ ನಡಿಯುತ್ತಿದೆ. ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದವರೇ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕೊರೊನಾದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನನ್ನವರನ್ನೂ ಕಳೆದುಕೊಂಡಿದ್ದೇನೆ ಎಂದು ಸದಾನಂದ ಗೌಡ ಭಾವುಕರಾಗಿ, ಒಂದು ನಿಮಿಷ ಮೌನಾಚರಣೆ ಮಾಡಿದರು.
ಇದನ್ನೂ ಓದಿ
ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ; ದಿಗ್ವಿಜಯ್ ಸಿಂಗ್ಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ
ಶಿಕ್ಷಣ ಸಚಿವರ ವಿರುದ್ಧ ಅಸಮಧಾನ ಹೊರಹಾಕಿದ ಖಾಸಗಿ ಶಾಲೆಗಳ ಒಕ್ಕೂಟ; ಇಂದು ಸಭೆಗೆ ನಿರ್ಧಾರ
(DV Sadananda Gowda react to the Digvijaya Singh statement)