ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ ವಂಚನೆ ಕೇಸ್: ಸ್ಫೋಟಕ ವಿಚಾರ ಬೆಳಕಿಗೆ

| Updated By: Rakesh Nayak Manchi

Updated on: Oct 12, 2023 | 7:50 AM

ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್​ಐಟಿಯಿಂದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರಿ ಟೆಂಡರ್ ಬಿಡ್ಡಿಂಗ್ ಆಪ್ ಇ-ಪ್ರಕ್ಯೂರ್ಮೆಂಟ್ ವೆಬ್ ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ ಮತ್ತು ಟೀಂ, ಕೇವಲ ವೆಬ್ ಸೈಟ್ ಹ್ಯಾಕ್ ಮಾತ್ರವಲ್ಲ ಹವಾಲ ಹಣ ವರ್ಗಾವಣೆ ಮಾಡಿರುವುದು ಕೂಡ ತಿಳಿದುಬಂದಿದೆ.

ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ ವಂಚನೆ ಕೇಸ್: ಸ್ಫೋಟಕ ವಿಚಾರ ಬೆಳಕಿಗೆ
ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ ವಂಚನೆ ಕೇಸ್ ಸಂಬಂಧ ಸ್ಫೋಟಕ ವಿಚಾರ ಬೆಳಕಿಗೆ (ಸಾಂದರ್ಭಿಕ ಚಿತ್ರ)
Image Credit source: Mikko Lemola | Getty Images
Follow us on

ಬೆಂಗಳೂರು, ಅ.12: ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ (E-Procurement) ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್​ಐಟಿಯಿಂದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರಿ ಟೆಂಡರ್ ಬಿಡ್ಡಿಂಗ್ ಆಪ್ ಇ-ಪ್ರಕ್ಯೂರ್ಮೆಂಟ್ ವೆಬ್ ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ ಮತ್ತು ಟೀಂ, ಕೇವಲ ವೆಬ್ ಸೈಟ್ ಹ್ಯಾಕ್ ಮಾತ್ರವಲ್ಲ ಹವಾಲ ಹಣ ವರ್ಗಾವಣೆ ಮಾಡಿರುವುದು ಕೂಡ ತಿಳಿದುಬಂದಿದೆ.

ಟೆಂಡರ್ ಬಿಡ್ಡಿಂಗ್​ಗೂ ಮೊದಲು ಶ್ರೀಕಿ ವೆಬ್ ಸೈಟ್ ಹ್ಯಾಕ್ ಮಾಡಿದ್ದ. ಶ್ರೀಕಿಗೆ ಸುನೀಶ್ ಹೆಗ್ಗಡೆ ಇದನ್ನು ಮಾಡಿವಂತೆ ತಿಳಿಸಿದ್ದಾನೆ. ಗುತ್ತಿಗೆದಾರರು ಟೆಂಡರ್​ಗೂ ಮುನ್ನಾ ನಿಗದಿತ ಹಣವನ್ನ ಸರ್ಕಾರಿ ಖಾತೆಗೆ ಡೆಪಾಸಿಟ್ ಮಾಡುತ್ತಾರೆ. ಟೆಂಡರ್ ಪಡೆದ ಗುತ್ತಿಗೆದಾರನ ಹೊರತಾಗಿ ಬಿಡ್ಡಿಂಗ್​ನಲ್ಲಿ ಭಾಗಿಯಾದ ಉಳಿದವರಿಗೆ ಡೆಪಾಸಿಟ್ ಹಣ ವಾಪಸ್ಸಾಗತ್ತದೆ.

ಆದರೆ, ವೆಬ್ ಸೈಟ್ ಹ್ಯಾಕ್ ಮಾಡಿದ ಶ್ರೀಕಿ ಹಣವನ್ನು ನಾಗಪುರದ ಎನ್​ಜಿಒ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಸಂಬಂಧ ಹರ್ವಿಂದರ್ ಸಿಂಗ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿದ 11.5 ಕೋಟಿ ದುಡ್ಡಲ್ಲಿ 2.5 ಕೋಟಿ ಶ್ರೀಕಿ ಪಾಲಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಿಟ್​ ಕಾಯಿನ್ ಪ್ರಕರಣ: ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ, ಶ್ರೀಕಿಯ ಸ್ಫೋಟ ಅಂಶ ಬೆಳಕಿಗೆ

ಕೇವಲ ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾತ್ರವಲ್ಲ, ಹವಾಲ ದಂಧೆಯಲ್ಲೂ ಹ್ಯಾಕರ್​ನ ಪಾತ್ರ ತಿಳಿದುಬಂದಿದೆ. ಸರ್ಕಾರಿ ವೆಬ್ ಸೈಟ್ ಹ್ಯಾಕಿ ಮಾಡಿ ಹವಾಲ ದಂಧೆ ಮೂಲಕ ಶ್ರೀಕಿ ಮತ್ತು ಸುನೀಶ್ ಹೆಗ್ಡೆ ತಂಡ ಹಣ ವರ್ಗಾವಣೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಅಂಗಡಿಯಾ ಅನ್ನೊ ಹವಾಲ ದಂಧೆಯ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಗುಜರಾತ್ ಮೂಲದ ಪಿ.ಉಮೇಶ್ ಚಂದ್ರ ಆ್ಯಂಡ್ ಸನ್ಸ್ ಎಂಬ ಎಲ್​ಎಲ್​ಪಿ ಕಂಪನಿಯ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿಸಿದ್ದಾರೆ. ದೇಶಾದ್ಯಂತ ಬಹಳಷ್ಟು ಹವಾಲ ಹಣ ವರ್ಗಾವಣೆ ಕಂಪನಿಗಳಿರುವುದು ಹಾಗೂ ಯಾವುದೇ ಅಕೌಂಟ್ ಡೇಟಾಗಳಿಲ್ಲದೇ ಹವಾಲ ದಂಧೆ ನಡೆಸುತ್ತಿರುವುದು ಸಿಐಡಿಯಿಂದ ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ