ಶಾಲಾ- ಕಾಲೇಜು ಆರಂಭ: ನಗರದ ನಾನಾ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವರ ಅನುಭವ ಹೀಗಿತ್ತು..

ಸಚಿವ ಸುರೇಶ್ ಕುಮಾರ್ ಜೊತೆ ಸೆಲ್ಪಿಗೆ ಹೈಸ್ಕೂಲ್ ಮಕ್ಕಳು ಮುಗಿಬಿದ್ದರು. ಇದನ್ನು ಕಂಡ ಸುರೇಶ್​ ಕುಮಾರ್​, ‌ಸೆಲ್ಪಿಗೆ ಕನ್ನಡದಲ್ಲಿ ಏನಂತಾರೆ? ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದರು. ಆದರೆ ಮಕ್ಕಳು ಏನಂತಾರೆ ಸರ್ ಎಂದು ಸಚಿವರನ್ನೇ ಪ್ರಶ್ನಿಸಿದರು. ಈ ವೇಳೆ ಸೆಲ್ಪಿಗೆ ಕನ್ನಡದಲ್ಲಿ ಸ್ವಂತಿಕೆ ಅಂತಾರೆ ಎಂದು ಸುರೇಶ್ ಕುಮಾರ್ ಉತ್ತರಿಸಿದರು.

ಶಾಲಾ- ಕಾಲೇಜು ಆರಂಭ: ನಗರದ ನಾನಾ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವರ ಅನುಭವ ಹೀಗಿತ್ತು..
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಸಚಿವ ಸುರೇಶ್​ ಕುಮಾರ್​
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Jan 01, 2021 | 2:27 PM

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪುನರ್ ಆರಂಭವಾಗಿವೆ. ಮಾರ್ಚ್ ತಿಂಗಳಲ್ಲಿ ಬಂದ್ ಆಗಿದ್ದ ಶಾಲಾ ಕಾಲೇಜುಗಳನ್ನ ಇಂದು ಪೂರ್ವ ಸಿದ್ದತೆಯೊಂದಿಗೆ ಪುನರ್ ಆರಂಭ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ವಿದ್ಯಾರ್ಥಿಗಳೊಂದಿಗೆ ಚರ್ಚೆ, ಸಂವಾದ ನಡೆಸಿದ ಸುರೇಶ್​ ಕುಮಾರ್​ ಇದೆಲ್ಲವನ್ನೂ ಖುದ್ದಾಗಿ ಪರಿಶೀಲನೆ ಮಾಡಲು ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಬೆಂಗಳೂರು ಹಾಗೂ ಆನೇಕಲ್ ತಾಲ್ಲೂಕಿನ ಆರು ಶಾಲೆಗಳಿಗೆ ಇಂದು ಭೇಟಿ ನೀಡಿದ್ದರು. ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಚರ್ಚೆ, ಸಂವಾದ ನಡೆಸಿದ್ದರು.‌ ಸುರೇಶ್ ಕುಮಾರ್ ಇಂದು ಯಾವ್ಯಾವ ಶಾಲೆಗೆ ಭೇಟಿ ನೀಡಿದ್ದರು, ಮಕ್ಕಳಿಗೆ ಏನ್ ಹೇಳಿದ್ದರು ಎನ್ನುವುದರ ವಿವರ ಇಲ್ಲಿದೆ.

ಆತಂಕ ಇದ್ದವರು ಮಕ್ಕಳನ್ನು ‌ಶಾಲೆಗೆ ಕಳಿಸಬೇಡಿ.. ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸುರೇಶ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಆತಂಕ ಇದ್ದವರು ಮಕ್ಕಳನ್ನು ‌ಶಾಲೆಗೆ ಕಳಿಸಬೇಡಿ. ನಿಮ್ಮ ಆತಂಕ ನಿವಾರಣೆಯಾದ ಮೇಲೆ ಶಾಲೆಗೆ ಕಳಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದ ಸುರೇಶ್​ ಕುಮಾರ್​ ಮಕ್ಕಳ ಉತ್ಸಾಹ ನೋಡಿ ಖುಷಿಪಟ್ಟರು.‌ ಇನ್ನು ಪ್ರತಿ ಜಿಲ್ಲೆಯಲ್ಲಿ ವಿಚಕ್ಷಣಾ ದಳ ಮಾಡಿ, ಪರಿಶೀಲನೆಗೆ ತೀರ್ಮಾನ ಮಾಡಿದ್ದಾರೆ.

ಸುರೇಶ್ ಕುಮಾರ್ ಜೊತೆ ಸೆಲ್ಪಿಗೆ ಹೈಸ್ಕೂಲ್ ಮಕ್ಕಳು ಮುಗಿಬಿದ್ದರು.. ಹೆಬ್ಬಗೋಡಿ ಸರ್ಕಾರಿ ಪ್ರೌಢಶಾಲೆಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸಚಿವ ಸುರೇಶ್ ಕುಮಾರ್ ಜೊತೆ ಸೆಲ್ಪಿಗೆ ಹೈಸ್ಕೂಲ್ ಮಕ್ಕಳು ಮುಗಿಬಿದ್ದರು. ಇದನ್ನು ಕಂಡ ಸುರೇಶ್​ ಕುಮಾರ್​, ‌ಸೆಲ್ಪಿಗೆ ಕನ್ನಡದಲ್ಲಿ ಏನಂತಾರೆ? ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದರು. ಆದರೆ ಮಕ್ಕಳು ಏನಂತಾರೆ ಸರ್ ಎಂದು ಸಚಿವರನ್ನೇ ಪ್ರಶ್ನಿಸಿದರು. ಈ ವೇಳೆ ಸೆಲ್ಪಿಗೆ ಕನ್ನಡದಲ್ಲಿ ಸ್ವಂತಿಕೆ ಅಂತಾರೆ ಎಂದು ಸುರೇಶ್ ಕುಮಾರ್ ಉತ್ತರಿಸಿದರು. ನಂತರ ಮಕ್ಕಳು, ಸಚಿವರ ಜೊತೆಗೆ ಸೆಲ್ಪಿ ಪೋಟೋ ತೆಗೆದುಕೊಂಡರು. ನೀವೆಲ್ಲ ಸೆಲ್ಪಿ ಎಕ್ಸ್ ಫರ್ಟ್ ಆಗಿದ್ದೀರಿ ಎಂದು ಸುರೇಶ್ ಕುಮಾರ್ ತಮಾಷೆಯಾಗಿ ಪ್ರತಿಕ್ರಿಯಿಸಿದರು.

ಮಧ್ಯಾಹ್ನದ ಊಟ ಬೇಕಾ? ಎಂದು ಮಕ್ಕಳನ್ನು ಪ್ರಶ್ನಿಸಿದ ಸುರೇಶ್ ಕುಮಾರ್, ​ಮನೆಯಿಂದ ಮಧ್ಯಾಹ್ನದ ಊಟ ತನ್ನಿ, ತಿಂಡಿ ತಿನ್ನದೇ ಹಸಿವಿನಿಂದ ಶಾಲೆಗೆ ಬರಬೇಡಿ, ಮಾಸ್ಕ್ ತೆಗೆಯಬೇಡಿ ಎಂದು ಮಕ್ಕಳಿಗೆ ತಿಳಿ ಹೇಳಿದರು. ಜೊತೆಗೆ ಶಾಲಾ ಮಕ್ಕಳಿಗೆ ಪಂಕ್ಷನಲ್ ಇಂಗ್ಲೀಷ್ ಪುಸ್ತಕ, ವ್ಯವಹಾರದ ಗಣಿತ ಪುಸ್ತಕ ವಿತರಿಸಿದರು.

ಹೆನ್ನಾಗರ ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿದ ಸಚಿವ ಸುರೇಶ್ ಕುಮಾರ್, ಹೆನ್ನಾಗರ ಶಾಲಾ ಮಕ್ಕಳ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಪರೀಕ್ಷೆ ಯಾವಾಗ ಮಾಡೋಣ ಎಂದು ಮಕ್ಕಳನ್ನು ಪ್ರಶ್ನಿಸಿದರು. ಅದಕ್ಕೆ ಜೂನ್‌ , ಜುಲೈಗೆ ಪರೀಕ್ಷೆ ಮಾಡಿ ಎಂದು ಮಕ್ಕಳು ಉತ್ತರಿಸಿದರು. ನಂತರ ಶಾಲೆಗೆ ಇಷ್ಟು ದಿನ‌ ರಜೆ ಇದ್ದಾಗ ಏನ್ ಮಾಡುತ್ತಿದ್ದೆ ಎಂದು ವಿದ್ಯಾರ್ಥಿಯೊಬ್ಬನಿಗೆ ಸಚಿವರು ಪ್ರಶ್ನೆ ಮಾಡಿದರು. ಡಿಡಿ ಚಂದನ ಟಿವಿಯಲ್ಲಿ ಪಾಠ ನೋಡುತ್ತಿದ್ದೆ ಎಂದು ವಿದ್ಯಾರ್ಥಿ‌ ಉತ್ತರಿಸಿದ.

ಸೋಷಿಯಲ್ ಸೈನ್ಸ್​ನಲ್ಲಿ 39 ಪಾಠ ಇದೆ.‌ ಅದನ್ನು ಕಡಿಮೆ ಮಾಡುತ್ತೇವೆ.. ಮಾಸ್ಕ್ ಧರಿಸಿ, ಬೇರೆಯವರ ಪೆನ್, ಪುಸ್ತಕ ಮುಟ್ಟಬೇಡಿ. ಸಿಲಬಸ್ ಜಾಸ್ತಿ ಇಲ್ಲದಂತೆ ಮಾಡುತ್ತೇವೆ. ಸೋಷಿಯಲ್ ಸೈನ್ಸ್​ನಲ್ಲಿ 39 ಪಾಠ ಇದೆ.‌ ಅದನ್ನು ಕಡಿಮೆ ಮಾಡುತ್ತೇವೆ. ನಿಮ್ಮ ಹೊರೆ ಕಡಿಮೆ ಮಾಡುತ್ತೇವೆ. ನಿಮ್ಮ ಅಪ್ಪ, ಅಮ್ಮನಿಗೆ ಒಳ್ಳೆಯ ಹೆಸರು ತನ್ನಿ. ಈಗ ಮೂರು ನಾಲ್ಕು ಕ್ಲಾಸ್ ಮಾತ್ರ ಮಾಡುತ್ತೇವೆ. ಚೆನ್ನಾಗಿ ಓದಿ ಎಂದ ಸುರೇಶ್ ಕುಮಾರ್, ಹೆನ್ನಾಗರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡೈರಿ ಮಿಲ್ಕ್ ಚಾಕಲೇಟ್ ನೀಡಿದರು.

ಶಾಲೆ ಆರಂಭ ಬೇಜಾರು ಆಗುತ್ತಿದೆಯೋ..ಖುಷಿ ಆಗುತ್ತಿದೆಯೋ ಎಂದು ಮಕ್ಕಳ ಬಳಿ ಸಚಿವರು ಕೇಳಿದರು. ಇದಕ್ಕೆ, ಖುಷಿಯಾಗುತ್ತಿದೆ ಎಂದು ಶಾಲಾ ಮಕ್ಕಳು ಪ್ರತಿಕ್ರಿಯಿಸಿದರು. ಶಾಲಾ ಪಠ್ಯ ಕಡಿತದ ಫೈಲ್ ನಮ್ಮ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಬಂದಿದೆ. ಇನ್ನೂ ಮೂರು ನಾಲ್ಕು ದಿನಗಳಲ್ಲಿ ಶಾಲಾ ಪಠ್ಯ ಕಡಿತ, ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ. ಪಠ್ಯ ಕಡಿತ ಅಂದರೇ, ಪರೀಕ್ಷೆಗೆ ಮುಖ್ಯವಾಗಿರುವುದನ್ನ ಮಾತ್ರ ಭೋದಿಸುತ್ತೇವೆ‌ ಎಂದರು. ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ ಎಂದು ಹೇಳಿಕೆ ನೀಡಿದರು.

ನಂತರ ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಬನ್ನಿ ಕೊರೊನಾ ಓಡಿಸೋಣ.. ವಿದ್ಯಾರ್ಥಿಗಳನ್ನ ಓದಿಸೋಣ ಎಂದು ಶಾಲಾ ತರಗತಿಯ ಬೋರ್ಡ್ ಮೇಲೆ ಬರೆಸಿದರು.

ಇಂದಿರಾನಗರದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಮಹೇಶ್ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 625 ಕ್ಕೆ 614 ಅಂಕ ತೆಗೆದುಕೊಂಡಿದ್ದ. ಉತ್ತರ ಕರ್ನಾಟಕದ ಸಂಜು‌ ಎಂಬ ವಿದ್ಯಾರ್ಥಿಗೆ ಇನ್ಪೋಸಿಸ್​ನ‌ ಸುಧಾ ಮೂರ್ತಿ 25 ಸಾವಿರ ರೂಪಾಯಿ ಹಣ ನೀಡಿದ್ದರು ಎಂಬ ಮಾಹಿತಿ ಹಂಚಿಕೊಂಡು ಮಕ್ಕಳನ್ನು ಹುರಿದುಂಬಿಸುವ ಮಾತುಗಳನ್ನಾಡಿದರು.

ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿದ್ದೆ ಎಂದ ವಿದ್ಯಾರ್ಥಿ.. ವಿದ್ಯಾರ್ಥಿ ಜೊತೆಗೆ ಮಾತಾನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗೆ ರಜೆ ಇದ್ದಾಗ ಮೊಬೈಲ್ ನಲ್ಲಿ ಏನ್ ಮಾಡುತ್ತಿದ್ದೆ ಎಂದು ವಿದ್ಯಾರ್ಥಿಯನ್ನು ಪ್ರಶ್ನಿಸಿದರು. ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿದ್ದೆ ಎಂದು ವಿದ್ಯಾರ್ಥಿ ಉತ್ತರಿಸಿದ. ಇದಕ್ಕೆ, ಎಷ್ಟು ಹೊತ್ತು ಕ್ಯಾಂಡಿ ಕ್ರಶ್ ಆಡುತ್ತಿದ್ದೆ ಎಂದು ಸಚಿವರು ಮರು ಪ್ರಶ್ನೆ ಹಾಕಿದರು. ಐದು ನಿಮಿಷ ಮಾತ್ರ ಕ್ಯಾಂಡಿ ಕ್ರಶ್ ಆಡುತ್ತಿದ್ದೆ ಎಂದ ವಿದ್ಯಾರ್ಥಿ. ಪಬ್ ಜೀ ಆಡಲ್ಲವೇ ಎಂದು ಸಚಿವರು ಪ್ರಶ್ನೆ ಮಾಡಿದರು. ಪಬ್ ಜೀ ಈಗ ಬ್ಯಾನ್ ಆಗಿದೆ ಎಂದು ವಿದ್ಯಾರ್ಥಿ ಉತ್ತರಿಸಿದ. ಅದು ನಿನಗೆ ಗೊತ್ತಾ ಎಂದು ಸಚಿವರು ಪ್ರತಿಕ್ರಿಯಿಸಿದರು.

ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮುಂದುವರಿಕೆ ಬಗ್ಗೆ ಕೆಎಸ್ಆರ್.ಟಿ.ಸಿ.ಗೆ ಸೂಚನೆ ನೀಡಲಾಗಿದೆ. ಇಂದು ಶೇಕಡಾ 40 ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ನೆನ್ನೆ ಹೊಸ ವರ್ಷಾಚರಣೆ ಮಾಡಿದ್ದರಿಂದ ಕಡಿಮೆ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಬಹುತೇಕ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಅಲ್ಲದೆ ಇವತ್ತು ಶುಕ್ರವಾರ, ಸೋಮವಾರದಿಂದ ಶಾಲೆಗೆ ಹೋಗೋಣ ಅಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರದೇ ಇರಬಹುದು ಎಂದು ಚಂದಾಪುರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದರು.

ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು